Cini NewsMovie ReviewSandalwood

ಸರಣಿ ಕೊಲೆಗಳ ಹಿಂದಿರುವ ಸಂ…ಸ್ವರ… “ಸೆಕೆಂಡ್ ಕೇಸ್ ಆಫ್ ಸೀತಾರಾಮ್” (ಚಿತ್ರವಿಮರ್ಶೆ-ರೇಟಿಂಗ್ : 4 /5)

Spread the love

ರೇಟಿಂಗ್ : 4 /5
ಚಿತ್ರ : ಸೆಕೆಂಡ್ ಕೇಸ್ ಆಫ್ ಸೀತಾರಾಮ್
ನಿರ್ದೇಶಕ : ದೇವಿ ಪ್ರಸಾದ್ ಶೆಟ್ಟಿ
ನಿರ್ಮಾಪಕರು : ಸಾತ್ವಿಕ್ ಹೆಬ್ಬಾರ್,ದೇವಿ ಪ್ರಸಾದ್ ಶೆಟ್ಟಿ
ಸಂಗೀತ : ನವನೀತ ಶಾಮ್
ಛಾಯಾಗ್ರಹಣ : ಹೇಮಂತ್ ಆಚಾರ್ಯ
ತಾರಾಗಣ : ವಿಜಯ್ ರಾಘವೇಂದ್ರ , ಗೋಪಾಲ್ ಕೃಷ್ಣ ದೇಶಪಾಂಡೆ , ಉಷಾ ಭಂಡಾರಿ , ಸಾಗರ್ ಪುರಾಣಿಕ್, ಮಾಲ್ತೇಶ್ ಹೆಚ್. ವಿ.ಹಾಗೂ ಮುಂತಾದವರು…

ಸಾಮಾನ್ಯವಾಗಿ ಸಸ್ಪೆನ್ಸ್ , ಥ್ರಿಲ್ಲರ್, ಹಾರರ್ ಕಂಟೆಂಟ್ ಚಿತ್ರಗಳು ಅಂದಮೇಲೆ ಒಂದಷ್ಟು ಕುತೂಹಲ ಮೂಡಿಸುತ್ತವೆ. ಅಂತದ್ದೇ ಸೂಕ್ಷ್ಮ ಮರ್ಡರ್ ಮಿಸ್ಟರಿಯ ಸೀರಿಯಲ್ ಕಿಲ್ಲರ್ನ ಹಾವಳಿಯ ಸುತ್ತ ಆಸೆ, ಆಸಕ್ತಿ, ಅವಮಾನ , ಕಿಚ್ಚು , ದ್ವೇಷ , ಪೊಲೀಸ್ ಇನ್ವೆಸ್ಟಿಗೇಷನ್ , ಗೊಂದಲದ ವಿಚಾರಗಳನ್ನು ಬೆಸೆದುಕೊಂಡಿರುವ ಕಥಾನಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಸೆಕೆಂಡ್ ಕೇಸ್ ಆಫ್ ಸೀತಾರಾಮ್”. ಮಲೆನಾಡಿನ ದಟ್ಟ ಅರಣ್ಯದ ಊರುಗಳ ನಡುವೆ ಇರುವ ಆನೆ ಗದ್ದೆ ಪೊಲೀಸ್ ಸ್ಟೇಷನ್.

ಕಾಡಿನೊಳಗೆ ವಯಸ್ಸಾದ ವ್ಯಕ್ತಿಯನ್ನು ಮುಳ್ಳು ತಂತಿಯಲ್ಲಿ ಕೈಕಾಲುಗಳನ್ನು ಕಟ್ಟಿ ಕ್ರೂರವಾಗಿ ಕೊಂದು ಸ್ಥಿತಿಯಲ್ಲಿ ಪತ್ತೆ ಆಗುತ್ತಾನೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗುತ್ತದೆ. ಇದು ಪೊಲೀಸ್ ಇನ್ಸ್ಪೆಕ್ಟರ್ ಸೀತಾರಾಮ್ (ವಿಜಯ್ ರಾಘವೇಂದ್ರ) ಗೆ ಅಗ್ನಿಪರೀಕ್ಷೆಯಾಗಿದ್ದು , ಹಿರಿಯ ಅಧಿಕಾರಿಗಳ ಒತ್ತಡ ಹಾಗೂ ಜನರ ಆತಂಕ ದೂರ ಮಾಡೋದಕ್ಕೆ ಬಹಳಷ್ಟು ಹರಸಾಹಸ ಮಾಡುತ್ತಾನೆ.

ಒಂದರ ಹಿಂದೆ ಒಂದಂತೆ ವಯಸ್ಸಾದ ವ್ಯಕ್ತಿಗಳನ್ನೇ ಬಹಳ ಕ್ರೂರವಾಗಿ ಕೊಲೆ ಮಾಡುವ ಸೈಕೋ ಕಿಲ್ಲರ್ನ ಜಾಡು ಹಿಡಿಯಲು ಹೆಚ್ಚಿನ ಸಿಬ್ಬಂದಿಯನ್ನು ಕರೆಸಿಕೊಂಡು
ಚಕ್ರವ್ಯೂಹವನ್ನು ರಚಿಸುವ ಇನ್ಸ್ಪೆಕ್ಟರ್ ಸೀತಾರಾಮ್ ಗೆ ಪೋಸ್ಟ್ಮಾರ್ಟಮ್ ಮೂಲಕ ಡಾಕ್ಟರ್ ತಿಳಿಸುವ ಈ ಕ್ರೂರಿಯಾ ವರ್ತನೆಗೆ ಗಾಬರಿಯಾಗುತ್ತಾನೆ.

ಒಂದಷ್ಟು ವ್ಯಕ್ತಿಗಳ ಮೇಲೆ ಅನುಮಾನ ಬಂದು ಇನ್ವೆಸ್ಟಿಗೇಷನ್ ಮಾಡುವಾಗಲೇ ತನ್ನ ಮಗಳಿಗೆ ಹುಡುಗನೊಬ್ಬ ಕಾಟ ಕೊಡುತ್ತಿದ್ದಾನೆ ಎಂದು ಕಂಪ್ಲೇಂಟ್ ಹೇಳಲು ಬರುವ ಸೆಬಾಸ್ಟಿಯನ್ (ಗೋಪಾಲ್ ಕೃಷ್ಣ ದೇಶಪಾಂಡೆ). ಇನ್ನು ಕೇಸ್ ಒತ್ತಡದಲ್ಲಿರುವ ಇನ್ಸ್ಪೆಕ್ಟರ್ ಸೀತಾರಾಮ್ ಗನ್ ಕಳೆದು ಹೋದ ಆತಂಕದಲ್ಲಿ ತನಿಖೆ ಚುರುಕಾದಂತೆ ಒಂದು ವೀಣೆ ಬಹಳಷ್ಟು ಹೆಣ್ಣು ಮಕ್ಕಳ ಮನೆಯಲ್ಲಿರುವ ಸುಳಿವು ಸಿಗುತ್ತದೆ. ಅದರ ಹಿಂದೆ ಒಂದು ನೋವಿನ ಕಥೆ ತುಂಬಿದ್ದು , ಮತ್ತೆ ಕೊಲೆಗಾರ ಯಾರು ಎನ್ನುವಾಗಲೇ ಒಬ್ಬ ಮಾನಸಿಕ ವ್ಯಕ್ತಿ ಹಾಗೂ ಹಾಸ್ಪಿಟಲ್ ವಾರ್ಡನ್ ಮೇಲೆ ಅನುಮಾನ ಮೂಡುತ್ತದೆ.

ಇನ್ನೇನು ಕೇಸ್ ಮುಗೀತು ಎನ್ನುವಾಗಲೇ ಕಾಡಿನಲ್ಲಿ ಪೊಲೀಸ್ ಅಧಿಕಾರಿಯ ಶವ ಸಿಗುತ್ತದೆ. ಏನಿದು ನಿಜವಾದ ಕೊಲೆಗಾರ ಯಾರೂ ಎಂದು ಸೂಕ್ಷ್ಮವಾಗಿ ಕಾರ್ಯಚರಣೆ ಆರಂಭಿಸುವ ಹೊತ್ತಲ್ಲಿ ಸೀತಾರಾಮ್ ಅಕ್ಕ (ಉಷಾ ಭಂಡಾರಿ)ನ ಗಂಡ ನಾಪತ್ತೆ ಆಗುತ್ತಾನೆ. ಕೊನೆಗೆ ತನ್ನ ಕುಟುಂಬವೇ ಈ ಕ್ರೂರಿಯಾ ಬಲೆಗೆ ಸಿಕ್ಕಿದ್ದಾರೆ ಎಂದು ಪರದಾಡುವಾಗ ಒಂದು ಸತ್ಯದ ನೋವಿನ ಕಥೆ ತೆರೆದುಕೊಳ್ಳುತ್ತದೆ. ಸಂಗೀತವೇ ಉಸಿರು ಎಂದು ನಂಬುವವರ ಬದುಕಲ್ಲಿ ಎದುರಾಗುವರ ಘಟನೆಗಳ ಸುತ್ತ ಇಡೀ ಕಥೆ ಆರಂಭ. ಅದು ಏನು… ಹೇಗೆ… ಕೊಲೆಗಳಿಗೆ ಕಾರಣವೇನು…
ಇನ್ಸ್ಪೆಕ್ಟರ್ ಗೆ ಸಿಗುವ ಸುಳಿವು ಏನು… ಕ್ಲೈಮಾಕ್ಸ್ ನೀಡುವ ಉತ್ತರ ಯಾವುದು ಎಂಬ ಪ್ರಶ್ನೆಗೆ ನೀವು ಒಮ್ಮೆ ಈ ಚಿತ್ರವನ್ನು ನೋಡಲೇಬೇಕು.

 

ಈ ಹಿಂದೆ ‘ಸೀತಾರಾಮ್ ಬಿನೋಯ್ ಕೇಸ್ ನಂಬರ್ 18’ ಸಿಕ್ವೆಲ್ ಹಾದಿಯಲ್ಲಿ ಮೂಡಿ ಬಂದಿರುವ ಈ ಸೆಕೆಂಡ್ ಕೇಸ್ ಆಫ್ ಸೀತಾರಾಮ್ ಚಿತ್ರಕಥೆ ಬಹಳ ಕುತೂಹಲಕಾರಿಯಾಗಿ ಸಾಗಿದೆ. ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿ , ಇನ್ವೆಸ್ಟಿಗೇಷನ್ ಹಾದಿ , ಕೊಲೆಗಾರನ ನಿಗೂಢ ಹೆಜ್ಜೆಗಳು , ಗೊಂದಲಗಳನ್ನು ಮೂಡಿಸುವುದರ ಜೊತೆಗೆ ಕನಸಿನ ಆಸೆಗೆ ಕಡಿವಾಣ ಬಿದ್ದಾಗ , ಪ್ರೀತಿಸುವ ಮನಸುಗಳಿಗೆ ಮೋಸ ಆದಾಗ ಏನಿಲ್ಲ ಎಡವಟ್ಟುಗಳು ಆಗಿ ಕ್ರೂರತೆಗೆ ದಾರಿ ಮಾಡುತ್ತದೆ ಎಂಬ ಸೂಕ್ಷ್ಮ ವಿಚಾರವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ. ಮನೋರಂಜನೆಯ ಕೊರತೆಯ ನಡುವೆ ಸೂಕ್ಷ್ಮತೆಯ ಅಂಶಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ನಿರ್ಮಾಪಕರು ಕೂಡ ಅಗತ್ಯಕ್ಕೆ ತಕ್ಕಂತೆ ಖರ್ಚು ಮಾಡಿರುವುದು ಕಾಣುತ್ತದೆ. ಇನ್ನು ಸನ್ನಿವೇಶಕ್ಕೆ ತಕ್ಕಂತೆ ಸಂಗೀತವಿದ್ದರೂ ಹಿನ್ನೆಲೆ ಸಂಗೀತ ಚಿತ್ರವನ್ನು ಆವರಿಸಿಕೊಂಡಿದೆ. ಅದೇ ರೀತಿ ಛಾಯಾಗ್ರಾಹಕರ ಕೈಚಳಕ , ಸಂಕಲನ ಕೆಲಸವು ಅದ್ಬುತವಾಗಿ ಮೂಡಿ ಬಂದಿದೆ. ನಟ ವಿಜಯ್ ರಾಘವೇಂದ್ರ ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಜವಾಬ್ದಾರಿ , ಕರ್ತವ್ಯ ನಿಷ್ಠೆಯ ಕಾರ್ಯವೈಖರಿಯ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ವೆಸ್ಟಿಗೇಷನ್ ಹಾದಿಯಲ್ಲಿ ಅಧಿಕಾರಿಯ ಮನಸ್ಥಿತಿ , ಅವರ ಹಾವಭಾವದ ವರ್ತನೆ ಸಮರ್ಥವಾಗಿ ನಿರ್ವಹಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಬಹುಮುಖ ಪ್ರತಿಭೆ ಗೋಪಾಲಕೃಷ್ಣ ದೇಶಪಾಂಡೆ ಕೂಡ ಅದ್ಭುತವಾಗಿ ನಟಿಸಿದ್ದು , ನಾಯಕನ ಅಕ್ಕನಾಗಿ ಉಷಾ ಭಂಡಾರಿ , ಚಿತ್ರದ ಪ್ರಮುಖ ತಿರುವಿನ ಪಾತ್ರದಲ್ಲಿ ಸಾಗರ್ ಪುರಾಣಿ ಪುರಾಣಿಕ್ ಹಾಗೂ ಮಾಲ್ತೇಶ್ ಹೆಚ್.ವಿ. ಸೇರಿದಂತೆ ಅನೇಕ ಪಾತ್ರಗಳು ಚಿತ್ರದ ಟ್ವಿಸ್ಟ್ ಅಂಡ್ ಟರ್ನ್ ಗೆ ಸಾಕ್ಷಿಯಾಗಿದ್ದಾರೆ. ಒಟ್ಟಾರೆ ಸಸ್ಪೆನ್ಸ್ , ಥ್ರಿಲ್ಲರ್, ಮರ್ಡರ್ ಮಿಸ್ಟರಿ ಇರುವ ಈ ಚಿತ್ರವನ್ನು ಎಲ್ಲರೂ ನೋಡುವಂತಿದೆ.

Visited 1 times, 1 visit(s) today
error: Content is protected !!