Cini NewsSandalwoodTV Serial

ಸಂಕ್ರಾಂತಿ ಸಂಭ್ರಮಕ್ಕೆ “ಮ್ಯಾಂಗೋ ಪಚ್ಚ” ಅರಗಿಣಿಯೇ ಸಾಂಗ್‌ ರಿಲೀಸ್‌

Spread the love

ಮ್ಯಾಂಗೋ ಪಚ್ಚ ಸದ್ಯ ಕನ್ನಡ ಸಿನಿಮಾರಂಗದಲ್ಲಿ ಟೀಸರ್‌ ಮತ್ತು ಹಾಡಿನಿಂದ ಬರವಸೆ ಮೂಡಿಸಿರೋ ಸಿನಿಮಾ..ಕಿಚ್ಚ ಸುದೀಪ್‌ ಅಕ್ಕನ ಮಗ ಸಂಚಿತ್‌ ಸಂಜೀವ್‌ ನಾಯಕ ನಟನಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ತಿದ್ದು ಈಗಾಗಲೇ ಹಸರವ್ವ ಹಾಡಿನ ಮೂಲಕ ಸದ್ದು ಮಾಡಿದ್ದ ಮ್ಯಾಂಗೋ ಪಚ್ಚ ಸಿನಿಮಾದ ಅರಗಿಣಿಯೇ ಎನ್ನುವ ರೊಮ್ಯಾಂಟಿಕ್‌ ಹಾಡು ಬಿಡುಗಡೆ ಆಗಿದೆ.

ಮೈಸೂರಿನ ಸುಂದರ ಜಾಗಗಳಲ್ಲಿ ಈ ಹಾಡನ್ನ ಚಿತ್ರೀಕರಿಸಲಾಗಿದ್ದು ಹಾಡಿನ ಸ್ಪೆಷಾಲಿಟಿ ಅಂದ್ರೆ ಕಿಚ್ಚ ಸುದೀಪ್‌ ಪುತ್ರಿ ಸಾನ್ವಿ ಸುದೀಪ್‌ ಈ ಹಾಡಿಗೆ ಧ್ವನಿಯಾಗಿದ್ದಾರೆ… ಸಾನ್ವಿ ಜೊತೆಯಾಗಿ ಸಪ್ತಸಾಗರ ಸಿನಿಮಾದ ಟೈಟಲ್‌ ಹಾಡಿನಿಂದ ಪ್ರಖ್ಯಾತಿಗಳಿಸಿದ್ದ ಕಪಿಲ್‌ ಕಪಿಲನ್‌ ಕೂಡ ಹಾಡಿದ್ದಾರೆ…ಇನ್ನು ಈ ಹಾಡಿಗೆ ಧನಂಜಯ ರಂಜನ್‌ ಸಾಹಿತ್ಯ ಬರೆದಿದ್ದು ಚರಣ್‌ ರಾಜ್‌ ಸಂಗೀತ ನಿರ್ದೇಶನ ಮಾಡಿದ್ದಾರೆ.

ಮ್ಯಾಂಗೋ ಪಚ್ಚ ಚಿತ್ರವನ್ನು ಕೆಆರ್‌ಜಿ ಮತ್ತು ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್‌ ಜಂಟಿಯಾಗಿ ನಿರ್ಮಾಣ ಮಾಡಿದೆ. ಇದು ಮೈಸೂರಿನ ಭಾಗದ ಕಥೆಯಾಗಿದ್ದು, ಸಂಚಿತ್‌ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾಜಲ್ ಕುಂದರ್, ಮಯೂರ್ ಪಟೇಲ್‌ , ಉಗ್ರಂ ಮಂಜು ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಶೇಖರ್ ಚಂದ್ರ ಛಾಯಾಚಿತ್ರಗ್ರಹಣವಿದೆ. ಮ್ಯಾಂಗೋ ಪಚ್ಚ ಕ್ರೈಂ ಥ್ರಿಲ್ಲರ್‌ ಜಾನರ್‌ ಚಿತ್ರವಾಗಿದ್ದು ಮೈಸೂರಿನ ಮೂಲಕ ವಿವೇಕ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ… ಸದ್ಯ ಟೀಸರ್‌ ಮತ್ತು ಹಾಡುಗಳಿಂದ ಸದ್ದು ಮಾಡ್ತಿರೋ ಮ್ಯಾಂಗೋ ಪಚ್ಚ ಸಿನಿಮಾ ಫೆಬ್ರವರಿಯಲ್ಲಿ ತೆರೆಗೆ ಬರಲಿದೆ.

Visited 1 times, 1 visit(s) today
error: Content is protected !!