Cini NewsSandalwoodTV Serial

ನವಂಬರ್ 14ರಂದು “ಲವ್ OTP” ಚಿತ್ರ ರಿಲೀಸ್.

Spread the love

ಅನೀಶ್ ತೇಜೇಶ್ಬರ್ ನಟನೆ, ನಿರ್ದೇಶನದ “ಲವ್ OTP” ಯ ಒಂದು ಇಂಪಾದ ಹಾಡು ಮತ್ತು ಮನೋರಂಜನೆಯ ಟ್ರೈಲರ್ ಪ್ರದರ್ಶನ.

ಸ್ಯಾಂಡಲ್ ವುಡ್ ನಲ್ಲಿ ಮನೋರಂಜನೆಯ ರಸದೌತಣ ನೀಡುವುದರ ಜೊತೆಗೆ ತಂದೆ – ಮಗನ‌ ಸಂಬಂಧ, ಪ್ರೀತಿ, ಪ್ರೇಮ ಸೇರಿದಂತೆ ಕಮರ್ಷಿಯಲ್ ಅಂಶಗಳನ್ನು ಸೇರಿಸಿ ಚಿತ್ರವನ್ನು ನವಂಬರ್ 14ರಂದು ತೆರೆಗೆ ತರಲು ಸಜ್ಜಾಗಿದೆ ಚಿತ್ರತಂಡ. ಈ ಚಿತ್ರವನ್ನು 65 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. “ಲವ್ OTP” ಚಿತ್ರದ ಮೂಲಕ ಅನೀಶ್ ತೇಜೇಶ್ಬರ್ ತೆಲುಗು ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತಯಾರಾಗಿರುವ ಲವ್ ಒಟಿಪಿ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಹಾಗೂ ಒಂದು ಹಾಡನ್ನು ಬಿಡುಗಡೆ ಮಾಡಿ ಮಾಹಿತಿ ಹಂಚಿಕೊಂಡರು.

ನಟ ನಿರ್ದೇಶಕ ಅನೀಶ್ ತೇಜೇಶ್ವರ್ ಮಾತನಾಡಿ ಸ್ನೇಹಿತ ವಿಜಯ್ ರೆಡ್ಡಿ ನನ್ನ ಬಾಲ್ಯದ ಸ್ನೇಹಿತ , ನನ್ನ ಬಹಳಷ್ಟು ಹೆಜ್ಜೆಗೆ ಸಹಕಾರಿಯಾಗಿ ನಿಂತಿದ್ದ ಗೆಳೆಯ. ಈಗ ಅವನ ಸಹಕಾರದಿಂದ ಉತ್ತಮ ಚಿತ್ರ ಮಾಡಿದ್ದೇನೆ. ಚಿತ್ರದ ನೋಡಿದ ಮಂದಿ ಗುಣಮಟ್ಟದ ವಿಷಯದಲ್ಲಿ ಕಥೆ, ನಿರೂಪಣೆ ವಿಷಯದಲ್ಲಿ ಎಲ್ಲಿಯೂ ರಾಜೀ ಮಾಡಿಕೊಂಡಿಲ್ಲ. ತೆಲುಗಿನ ಹಿರಿಯ ಕಲಾವಿದ ರಾಜೀವ್ ಕನಕಾಲ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿದ್ದಾರೆ. ಜೊತೆಗೆ ಕನ್ನಡದಲ್ಲಿ ಅವರೇ ಡಬ್ ಮಾಡಿದ್ದಾರೆ. ರವಿ ಭಟ್ , ಪ್ರಮೋದಿನಿ, ತುಳಸಿ , ಚೇತನ್, ಸ್ವರೂಪಿಣಿ, ಜಾನ್ವಿಕಾ ನಟಿಸಿದ್ದಾರೆ. ಒಬ್ಬರಿಗಿಂತ ಒಬ್ಬರು ಚಿತ್ರದಲ್ಲಿ ಅತ್ಯುತ್ತಮವಾಗಿ ಅಭಿಯಿಸಿದ್ದಾರೆ. ಚಿತ್ರ ನೋಡಿದ ಎಲ್ಲರಿಗೂ ಚಿತ್ರ ಇಷ್ಡವಾಗಲಿದೆ ಎಂದರು.

ನಟಿ ಜಾನ್ವಿಕಾ ಮಾತನಾಡಿ, ಕನ್ನಡದಲ್ಲಿ ಮೂರನೇ ಚಿತ್ರ. ಕನ್ನಡ ಮತ್ತು ತೆಲುಗಿನಲ್ಲಿ ನಟಿಸಿದ್ದೇನೆ. ಹಾಗೆಯೇ ಒಂದು ಹಿಂದಿ ಮತ್ತು ತಮಿಳು ಚಿತ್ರದಲ್ಲೂ ಅಭಿನಯಿಸಿದ್ದೇನೆ. ಈ ಚಿತ್ರದಲ್ಲಿ ಬಹಳಷ್ಟು ಕಲ್ತಿದ್ದೇನೆ. ಹಾಗೆಯೇ ಹಿರಿಯ ಕಲಾವಿದರಾದ ಪ್ರಮೋದಿನಿ, ತುಳಿಸಿ, ಸೇರಿದಂತೆ ಅನೇಕರ ಜೊತೆ ಅಭಿನಯಿಸಿದ್ದು ಖುಷಿ ತಂದಿದೆ. ನಾನು ಫಿಸಿಯೋ ಥೆರಪಿಸ್ಟ್ ಪಾತ್ರ ಮಾಡಿದ್ದೇನೆ ಪಾತ್ರ ಸವಾಲಿನಿಂದ ಕೂಡಿತ್ತು ಎಂದರು.

ನಿರ್ಮಾಪಕ ವಿಜಯ್ ರೆಡ್ಡಿ ಮಾತನಾಡಿ ಅನೀಶ್ ಜೊತೆ ಸಿನಿಮಾ‌ ಮಾಡಲು ದೊಡ್ಡ ಕಥೆ ಇದೆ. 16 ವರ್ಷದಲ್ಲಿ ನಾವಿಬ್ಬರೂ ಸ್ನೇಹಿತರು, ಚಾಮುಂಡಿ ದೇವಿ ದರ್ಶನಕ್ಕೆ ಹೋದಾಗ ಕಥೆ ಕೇಳಿ ಇಷ್ಡವಾಗಿ ಸಿನಿಮಾ ಮಾಡಿದ್ದೇವೆ. ಭಾವಪ್ರೀತ ಎಂದರೆ ಭ್ರಮಾಂಡದಿಂದ ಪ್ರೀತಿಸಲ್ಪಟ್ಟವರು ಎಂದರ್ಥ ಹಾಗಾಗಿ ಸಿನಿಮಾ‌ ಸಂಸ್ಥೆ ಹೆಸರಲ್ಲಿ ಚಿತ್ರ ಮಾಡಿದ್ದೇವೆ. ಕಥೆ ಸೃಷ್ಟಿ ಆದಾಗ ಸಿನಿಮಾಗೆ ಬೇಕಾದ ಪಾತ್ರವನ್ನು ಅಚ್ಚುಕಟ್ಟಾಗಿ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿದ್ದೇವೆ. ಕನ್ನಡ ಮತ್ತು ತೆಲುಗಿನಲ್ಲಿ ಏಕ ಕಾಲದಲ್ಲಿ ಚಿತ್ರೀಕರಣ ಮಾಡಲಾಗಿದೆ. ನವಂಬರ್ 14ರಂದು 2 ಭಾಷೆಯಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಮುಂದೆ ಹೊಸ ಹೊಸ ಚಿತ್ರಗಳನ್ನು ಮಾಡುವ ಉದ್ದೇಶವಿದೆ ಎಂದರು.

ತೆಲುಗು ನಟ ರಾಜೀವ ಕನಕಾಲ ಮಾತನಾಡಿ ಸೀರಿಯಲ್ ನಲ್ಲಿ ನಟಿಸುತ್ತಿದ್ದ ನನ್ನನ್ನು ರಾಜಮೌಳಿ ಅವರು ಸಿನಿಮಾಕ್ಕೆ ಕರೆ ತಂದರು. ಸರಿಸುಮಾರು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಈಗ ಅನೀಶ್ ಕನ್ನಡಕ್ಕೆ ಕರೆತಂದಿದ್ದಾರೆ ನನ್ನ ಪಾಲಿಗೆ ಅನೀಶ್ ಅವರು ರಾಜಮೌಳಿ ಇದ್ದಂತೆ ಎನ್ನುತ್ತಾ , ಅನಿಶ್ ಜೊತೆ ವರ್ಕ್ ಮಾಡಿದ ಅನುಭವವನ್ನು ಸಂತೋಷದಿಂದ ಮೆಚ್ಚಿಕೊಂಡರು. ಒಳ್ಳೆ ಟೀಮ್ ಜೊತೆ ಕೆಲಸ ಮಾಡಿದ ಅನುಭವ ನನಗಾಗಿದೆ. ಅದೇ ರೀತಿ ಕನ್ನಡದಲ್ಲಿ ಅವಕಾಶ ಸಿಕ್ಕರೆ ಮುಂದಿನ ದಿನಗಳಲ್ಲಿ ನಟಿಸುವ ಆಸೆ ಇದೆ. ಸ್ಯಾಂಡಲ್ವುಡ್ ನ ಬಿಗ್ ಸ್ಟಾರ್ ಶಿವಣ್ಣ , ಶ್ರೀಮುರಳಿ ಭೇಟಿ ಮಾಡಿದ್ದು ಬಹಳ ಸಂತೋಷವಾಯಿತು ಎಂದು ತಮ್ಮ ಮನದ ಮಾತನ್ನು ಹಂಚಿಕೊಂಡರು.

ಇನ್ನು ಮತ್ತೊಬ್ಬ ಹಿರಿಯ ಕಲಾವಿದ ರವಿ ಭಟ್ ಮಾತನಾಡಿ, ಕಥೆ ಹೇಳುವಾಗ ಚಿತ್ರೀಕರಣ ಮಾಡುವಾಗ ಸಿನಿಮಾ ಬಗ್ಗೆ ಇರುವ ಫ್ಯಾಶನ್ ಮತ್ತು ಕಮಿಟ್ ಮೆಂಟ್, ಪೇಮೆಂಟ್ ವಿಷಯ ಸೇರಿದಂತೆ ಎಲ್ಲವೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹಾಗೆಯೇ ಕಲಾವಿದರಿಂದ ನಟ , ನಿರ್ದೇಶಕ ಅನೀಶ್ ಅದ್ಭುತವಾಗಿ ಕೆಲಸ ತೆಗೆಸಿದ್ದಾರೆ. ನಾನು ಚಿತ್ರೀಕರಣದ ಸಮಯದಲ್ಲಿ ಎಂಜಾಯ್ ಮಾಡಿಕೊಂಡು ನಟನೆ ಮಾಡಿದ್ದೇವೆ. ಒಂದೊಳ್ಳೆ ತಂಡ ಸಿನಿಮಾ ಕೂಡ ಸೊಗಸಾಗಿ ಬಂದಿದೆ. ನಿಮ್ಮೆಲ್ಲರಿಗೂ ಇಷ್ಟವಾಗುತ್ತದೆ ಎಂದರು. ಮತ್ತೊಬ್ಬ ಕಲಾವಿದ ನಾಟ್ಯರಂಗ ಮಾತನಾಡಿ ನಿರ್ದೇಶನದ ಜೊತೆಗೆ ನಾಯಕನಾಗಿ‌ ನಟಿಸಿರುವ ಅನೀಶ್ ಅವರು ಟಾರ್ಚರ್ ಅನುಭವಿಸಿ ಉತ್ತಮ ಚಿತ್ರ ನೀಡಿದ್ದಾರೆ. ನನ್ನ ಪಾತ್ರ ನಗು ಮತ್ತು ಅಳುವಿನ ಸಂಗಮವಿದೆ. ಚಿತ್ರ‌ಕ್ಕೆ ಒಳ್ಳೆಯದಾಗಲಿ ಎಂದು ಹೇಳಿದರು. ಇನ್ನು ಗೀತರಚನೆ ಕಾರ ನಾಗಾರ್ಜುನ ಶರ್ಮಾ , ಛಾಯಾಗ್ರಹಕರು , ಸಂಗೀತ ನಿರ್ದೇಶಕರು ಸೇರಿದಂತೆ ಹಲವರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ಬಹಳಷ್ಟು ನಿರೀಕ್ಷೆಯನ್ನ ಇಟ್ಟುಕೊಂಡಿರುವ ಈ “ಲವ್ OTP” ಚಿತ್ರ ಅದ್ದೂರಿ ಪ್ರಚಾರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ.

Visited 1 times, 1 visit(s) today
error: Content is protected !!