Cini NewsSandalwoodTV Serial

*ಸುರಮ್ ಮೂವಿ ಬ್ಯಾನರ್ ನ “ನೀ ನಂಗೆ ಅಲ್ಲವಾ” ಮೂಲಕ ರಾಹುಲ್ ಎಂಟ್ರಿ*

ಚಂದನವನಕ್ಕೆ ಬಹಳಷ್ಟು ಯುವ ಪ್ರತಿಭೆಗಳು ಬರುತ್ತಿದ್ದು , ಆ ಸಾಲಿಗೆ ಯುವ ನಟ ರಾಹುಲ್ ನಾಯಕನಾಗಿ ಪ್ರವೇಶ ಮಾಡುತ್ತಿದ್ದಾರೆ. ಈ ಹಿಂದೆ ಯುವರತ್ನ ಹಾಗೂ ಬಘೀರ ಸಿನಿಮಾದಲ್ಲಿ ಒಂದು ಸಣ್ಣ ಪಾತ್ರ ಮಾಡಿದ್ದ ರಾಹುಲ್ ಇದೀಗ ನಾಯಕನಾಗಿ ಎಂಟ್ರಿ ಕೊಡ್ತಾ ಇದ್ದಾರೆ. ಅದುವೆ “ನೀ ನಂಗೆ ಅಲ್ಲವಾ” ಎಂಬ ಚೆಂದದ ಟೈಟಲ್ ನೊಂದಿಗೆ. ಮೂಲತಃ ಬೆಂಗಳೂರಿನ ವರಾದ ರಾಹುಲ್ BBA ಓದಿದ್ದಾರೆ. ಆದ್ರೆ ಆರಂಭದಿಂದ ಸಿನಿಮಾದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಕನಸೊತ್ತ ಇವರು ಆಡಿಷನ್ ಕೊಡುವುದಕ್ಕೆ ಶುರು ಮಾಡಿದರು. ಉಷಾ ಭಂಡಾರಿ ಅವರ ಗರಡಿಯಲ್ಲಿ ಪಳಗಿದರು. ಅಲ್ಲಿಂದ ವರ್ಕ್ ಶಾಪ್ ಮುಗಿಸಿಕೊಂಡು ಬಂದು ಸಿನಿಮಾವನ್ನು ಶುರು ಮಾಡಿದರು. ಈ ಸಿನಿಮಾ ರಾಹುಲ್ ಅವರಿಗೆ ಬಹಳ ಮುಖ್ಯವಾಗಿದೆ. ಅದಕ್ಕಾಗಿಯೇ ಡ್ಯಾನ್ಸ್ ಆಗ್ಲಿ, ಆಕ್ಟಿಂಗ್ ಆಗ್ಲಿ ಸೆಟ್ ಹೋಗುವುದಕ್ಕೂ ಮುನ್ನವೇ ರಿಹರ್ಸಲ್ ಮಾಡಿಕೊಂಡು ಹೋಗುವ ಅಭ್ಯಾಸ ಮಾಡಿಕೊಂಡಿದ್ದಾರೆ.


ಅಪ್ಪು ಅಂದ್ರೆ ರಾಹುಲ್ ಗೆ ಸ್ಪೂರ್ತಿ. ಅವರ ಜೊತೆಗೆ ಯುವರತ್ನ ಸಿನಿಮಾದಲ್ಲಿ ಒಂದು ಸಣ್ಣ ಪಾತ್ರ ಮಾಡಿದ್ದಕ್ಕೇನೆ ಸಾರ್ಥಕ ಭಾವ ಫೀಲ್ ಮಾಡ್ತಾರೆ. ಶ್ರೀಮುರುಳಿ ಅಣ್ಣನ ಸ್ಥಾನದಲ್ಲಿ ನಿಂತು ಸಪೋರ್ಟ್ ಮಾಡ್ತಾ ಇರುವುದಕ್ಕೆ ಖುಷಿ ಪಡ್ತಾರೆ. ಅಪ್ಪು ಸರ್ ಬಿಟ್ರೆ ಗೋಲ್ಡನ್ ಹಾರ್ಟ್ಸ್ ಅಂದ್ರೆ ಅಂದ್ರೆ ಮುರುಳಿ ಅಣ್ಣನೆ. ನನ್ನ ಫಿಟ್ನೆಸ್ ಗೂ ಅವರೇ ಕಾರಣ ಅಂತಾರೆ ರಾಹುಲ್. ಮ್ಯೂಸಿಕ್ ಡೈರೆಕ್ಟರ್ ಸೂರಜ್ ಅವರಿಂದ ಮನೋಜ್ ಅವರನ್ನ ಭೇಟಿ ಮಾಡಿದರು. ಅಲ್ಲಿಂದ ಶುರುವಾದ ಕಥೆಯೇ ನೀ ನಂಗೆ ಅಲ್ಲವಾ ಸಿನಿಮಾ. ಕಥೆ ಎಲ್ಲಾ ಮಾಡಿಕೊಂಡು ಜಯರಾಮ್ ದೇವಸಮುದ್ರ ಅವರನ್ನು ಭೇಟಿ ಮಾಡಿದರು. ಅವರಿಗೂ ಕಥೆ ಇಷ್ಟವಾಗಿ ಸುರಮ್ ಮೂವಿ ಬ್ಯಾನರ್ ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಜಯರಾಮ್ ದೇವಸಮುದ್ರ, ಸಿನಿಮಾ ಮೇಲೆ ವಿಪರೀತ ಪ್ಯಾಷನ್ ಹೊಂದಿರುವ ವ್ಯಕ್ತಿ. ಈಗಾಗಲೇ ನಿದ್ರಾದೇವಿ Next Door ಎಂಬ ಸಿನಿಮಾ ಮಾಡಿ ಯಶಸ್ಸು ಕಂಡವರು. ಅದರ ಬೆನ್ನಲ್ಲೇ ಚೈತ್ರಾ ಆಚಾರ್ ಗೆ ಒಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ. ಜೊತೆಗೆ ಶ್ರೀಮುರುಳಿ ಅವರ ಜೊತೆಗೂ ಸಿನಿಮಾ ಮಾಡುತ್ತಿದ್ದು, ಶೀಘ್ರದಲ್ಲಿಯೇ ಅಧಿಕೃತ ಟೈಟಲ್ ಅನೌನ್ಸ್ ಆಗಲಿದೆ. ಇದೆಲ್ಲಾ ಬ್ಯುಸಿ ಶೆಡ್ಯೂಲ್ ಜೊತೆಗೆ ಹೊಸ ಪ್ರತಿಭೆ ರಾಹುಲ್ ಗೆ ನೀ ನಂಗೆ ಅಲ್ಲವಾ ಎಂಬ ಸಿನಿಮಾವನ್ನು ಮಾಡಿದ್ದಾರೆ. ಸುರಮ್ ಮೂವಿ ಬ್ಯಾನರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡುವ ಮೂಲಕ ಪ್ರತಿಭೆಗಳಿಗೆ ಅವಕಾಶ ನೀಡುವ ಕೆಲಸ ಮಾಡುತ್ತಿದೆ.


ಆನ ಮತ್ತು ಮೇರಿ ಸಿನಿಮಾ ಮಾಡಿರುವ ಮನೋಜ್ ಪಿ ನಡುಲಮನೆ ಅವರೇ ಈ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಾ ಇದ್ದಾರೆ. ಈಗಾಗಲೇ ಸಿನಿಮಾದ ಟಾಕಿ ಪೋಷನ್ ಮುಗ್ದಿದೆ. ಮಿಡಲ್ ಕ್ಲಾಸ್ ಹುಡುಗನ ಕಥೆ. ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ಇದಾಗಿರಲಿದೆ.

error: Content is protected !!