Cini NewsSandalwoodTV Serial

“ಡೆವಿಲ್” ಚಿತ್ರದ ಬೆಡಗಿ ರಚನಾ ರೈ.

ಸ್ಯಾಂಡಲ್ವುಡ್ ನಲ್ಲಿ ಸಿನಿ ಪ್ರೇಮಿಗಳ ಹೃದಯವನ್ನು ಗೆಲ್ಲಲು ಮುಂದಾಗಿರುವ ಸುಂದರ ಬೆಡಗಿ , ಕರಾವಳಿ ಕನ್ಯೆ ರಚನಾ ರೈ. ಮೂಲತಃ ಮಂಗಳೂರಿನ ಪುತ್ತೂರಿನವರಾದ ಈ ಸುಂದರಿ ಉತ್ತಮ ಭರತನಾಟ್ಯ ಕಲಾವಿದೆ , ಮಾಡೆಲ್ ಹಾಗೂ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ. ಈಗೆಗೆ ನಟನೆ ಜೊತೆಗೆ ಚಿತ್ರಕಲೆಯಲ್ಲೂ ಸಾಕಷ್ಟು ಆಸಕ್ತಿ ಹೊಂದಿದ್ದಾರೆ. ಇದಲ್ಲದೆ ಫುಟ್‌ಬಾಲ್, ಬ್ಯಾಡ್ಮಿಂಟನ್‌ನಲ್ಲೂ ಉತ್ತಮ ಹೆಸರಿನ್ನ ಗಳಿಸಿದ್ದಾರೆ. ಹಾಗೆಯೇ ಬರಹಗಾರ್ತಿಯೂ ಆಗಿರುವ ರಚನಾ ರೈ , “ಓ‌ ಮೈ ಡಾಗ್” ಎಂಬ ಪುಸ್ತಕ ಬರೆದಿದ್ದು , ಈ ಮೂಲಕ ತಮ್ಮ ಬಹುಮುಖ ಪ್ರತಿಭೆಯನ್ನ ತೋರಿಸಿದ್ದಾರೆ.

 

*ಗೌರಿ ಗಣೇಶ ಹಬ್ಬದ ಶುಭಾಶಯ ತಿಳಿಸಿದ ನಟಿ ರಚನಾ ರೈ.*

ಇನ್ನು ಸಿನಿಮಾ ಬಗ್ಗೆಯೂ ಅಪಾರ ಆಸಕ್ತಿಯಿಂದ ಹೊಂದಿರುವ ರಚನಾ ರೈ , ಕರಾವಳಿ ಪ್ರತಿಭೆ , ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ನಟನೆಯ “ಸರ್ಕಸ್” ಎಂಬ ತುಳು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸಿನಿಮಾ ಲೋಕಕ್ಕೆ ಎಂಟ್ರಿ ಯನ್ನು ಪಡೆದಿದ್ದರು.
ನಂತರ ಧನ್ವೀರ್ ಅಭಿನಯದ “ವಾಮನ” ಸಿನಿಮಾದಿಂದ ಚಂದನವನದಲ್ಲಿ ಸಿನಿಪ್ರಿಯರ ಗಮನವನ್ನು ಸೆಳೆದಿದ್ದರು.

ಈಗ ಭರ್ಜರಿಯಾಗಿ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ಡೆವಿಲ್” ಚಿತ್ರದ ನಾಯಕಿಯಾಗಿ ರಚನಾ ರೈ ಅಭಿನಯಿಸಿದ್ದಾರೆ. ಈ ಚಿತ್ರ ಅವರ ಸಿನಿ ಬದುಕಿಗೆ ಒಂದು ದೊಡ್ಡ ತಿರುವನ್ನ ನೀಡುತ್ತದೆ ಎಂಬ ನಂಬಿಕೆಯನ್ನು ಹೊಂದಿದ್ದಾರೆ. ಮಾಧ್ಯಮ ಮಿತ್ರರಿಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು ತಿಳಿಸಿರುವುದರ ಜೊತೆಗೆ ನನ್ನ ಸರಿ ತಪ್ಪನ್ನ ತಿದ್ದಿ ಮಾರ್ಗದರ್ಶನ ನೀಡಿ ಎಂಬ ಸಂದೇಶ ಕಳಿಸಿರುವ ಈ ನಟಿಯ ಸಿನಿ ಬದುಕಿಗೆ ಯಾವ ವಿಘ್ನವು ಬಾರದಂತೆ ವಿನಾಯಕನ ಆಶೀರ್ವಾದ ಇರಲಿ, ಚಿತ್ರರಂಗದಲ್ಲಿ ಉತ್ತಮ ಚಿತ್ರಗಳು ಸಿಕ್ಕಿ , ಯಶಸ್ಸಿನ ಹಾದಿಯಲ್ಲಿ ಮುಂದುವರೆಯಲಿ ಎಂಬುವುದೇ ನಮ್ಮ ಆಶಯ.

error: Content is protected !!