ದಾಖಲೆಯ ಬೆಲೆಗೆ “ಲ್ಯಾಂಡ್ ಲಾರ್ಡ್” ಹಾಡುಗಳ ಹಕ್ಕು ಆನಂದ್ ಆಡಿಯೋ ಕಂಪನಿ ಖರೀದಿಸಿದೆ.
“ಲ್ಯಾಂಡ್ ಲಾರ್ಡ್” ಸ್ಯಾಂಡಲ್ ವುಡ್ ಸಲಗ ವಿಜಯ್ ಕುಮಾರ್ ಅಭಿನಯದ ಸಾರಥಿ ಫಿಲಂಸ್ ಬ್ಯಾನರ್ ನಡಿಯಲ್ಲಿ ಹೇಮಂತ್ ಗೌಡ ಕೆ.ಎಸ್ ಹಾಗೂ ಕೆ.ವಿ ಸತ್ಯಪ್ರಕಾಶ್ ನಿರ್ಮಾಣದ ಜಡೇಶ ಕೆ ಹಂಪಿ ನಿರ್ದೇಶನದ ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ. ಸೆಟ್ಟೇರಿದಾಗ್ಲೇ ಭಾರಿ ಸದ್ದು ಸುದ್ದಿ ಮಾಡಿದ್ದ ಈ ಚಿತ್ರದ ಬಹುತೀಕ ಚಿತ್ರೀಕರಣ ಕೆಲಸ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ನಡೀತಿದೆ. ಈ ಹೊತ್ತಲ್ಲಿ ಚಿತ್ರತಂಡ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಸಂತಸದ ಸುದ್ದಿಯೊಂದನ್ನ ಹಂಚಿಕೊಂಡಿದೆ. ಆನಂದ್ ಆಡಿಯೋ ಕಂಪನಿ ಲ್ಯಾಂಡ್ ಲಾರ್ಡ್ ಚಿತ್ರದ ಆಡಿಯೋ ಹಕ್ಕುಗಳನ್ನ ದಾಖಲೆಯ ಬೆಲೆಗೆ ಖರೀದಿಸಿದೆ. ಆ ವಿಚಾರವನ್ನ ಚಿತ್ರತಂಡ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ವಿಶೇಷವಾಗಿ ಹಂಚಿಕೊಂಡಿದೆ.
ಆನಂದ್ ಆಡಿಯೋ ಪಾಲಿಗಿದು ಲಕ್ಕಿ ಮತ್ತು ಹಿಟ್ ಕಾಂಬಿನೇಷಶನ್ ಹೌದು ಸಾಲು ಸಾಲು ವಿಜಯ್ ಕುಮಾರ್ ಅವ್ರ ಸಿನಿಮಾಗಳು ಆನಂದ್ ಆಡಿಯೋ ಕಂಪನಿಗೆ ಒಳ್ಳೆಯ ವ್ಯಾಪಾರವನ್ನ ಮಾಡಿಕೊಟ್ಟಿವೆ. ಅದೇ ರೀತಿ ಅಜನೀಶ್ ಲೋಕನಾಥ್ ಹಾಗೂ ಜಡೇಶ ಕೆ. ಹಂಪಿ ಅವ್ರ ಕಾಂಬಿನೇಶನ್ ಸಿನಿಮಾಗಳು ಆನಂದ್ ಆಡಿಯೋ ಆಯ್ಕೆಯ ಸಕ್ಸಸ್ ಫುಲ್ ಸಿನಿಮಾಗಳಾಗಿವೆ.. ಇನ್ನೂ ಈ ಮೂವರು ಕಾಂಬಿನೇಷಶ್ ನ ಸಿನಿಮಾ ಅಂದ್ರೆ ಸುಮ್ನೆನಾ.. ಬಿಡೋ ಮಾತೇ ಇಲ್ಲ ಅಂತ, ಆನಂದ್ ಆಡಿಯೋ ಕಂಪನಿ ಲ್ಯಾಂಡ್ ಲಾರ್ಡ್ ಆಡಿಯೋ ಹಕ್ಕನ್ನ ದೊಡ್ಡ ಮೊತ್ತ ಕೊಟ್ಟು ಖರೀದಿಸಿದೆ.. ಈ ಆಲ್ಬಂ ತುಂಬಾ ವಿಶೇಷತೆಗಳಿಂದ ಕೂಡಿದ್ದು, ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್ ಗಳಲ್ಲಿ ಒಂದಾಗಿರಲಿದೆಯಂತೆ. ಲ್ಯಾಂಡಲ್ ಲಾರ್ಡ್ ಚಿತ್ರದಲ್ಲಿ ವಿಜಯ್ ಹಿರಿಯ ಮಗಳು ರಿತನ್ಯ ವಿಜಯ್ ಅಭಿನಯಿಸ್ತಿರೋದು ವಿಶೇಷ. ರಚಿತಾರಾಮ್ ಈ ಚಿತ್ರದಲ್ಲಿ ವಿಜಯ್ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ರಿವೀಲ್ ಮಾಡದ ಸಿಕ್ಕಾಪಟ್ಟೆ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆಯಂತೆ. ಅಂದ್ಹಾಗೆ ಲ್ಯಾಂಡ್ ಲಾರ್ಡ್ ಸಿನಿಮಾ ಎಲ್ಲಾ ಅಂದುಕೊಂಡಂತೆಯೇ ಆದ್ರೆ, ದಸರಾ ಅಥವಾ ದೀಪಾವಳಿಗೆ ಪ್ರೇಕ್ಷಕರೆದುರಿಗೆ ಬರಲಿದೆಯಂತೆ.