“ವೀಡಿಯೋ” ಚಿತ್ರದ ಮೊದಲ ಟೀಸರ್ ಹಾಗೂ ಥೀಮ್ ಮ್ಯೂಸಿಕ್ ರಿಲೀಸ್.
ದೆವ್ವದ ಹಾಡು ಹಾಡೋ ಮೂಲಕ ವಿಡಿಯೋ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ವಿಡಿಯೋ ಚಿತ್ರತಂಡ. ಬ್ಲಿಂಕ್ ತಂಡದಿಂದ ಮತ್ತೊಂದು ಸಾಹಸ “ವಿಡಿಯೋ” ಹಾರರ್ ಫಿಲಂ.
ಸ್ಯಾಂಡಲ್ ವುಡ್ ನ ಮತ್ತೊಂದು ಯುವ ಪ್ರತಿಭೆಗಳ ಬಳಗ ಸೇರಿಕೊಂಡು ನಿರ್ಮಾಣ ಮಾಡಿರುವಂತಹ ಕುತೂಹಲ ಭರಿತವಾದ ಚಿತ್ರ “ವಿಡಿಯೋ”.
ಈ ಹಿಂದೆ ಬಂದಂತ 6-5=2 ಚಿತ್ರ ಸೇರದಂತೆ ಹಲವಾರು ಪ್ರೇತಾತ್ಮಕ ಕಾಟಗಳ ಕಥಾನಕ ಚಿತ್ರಗಳು ಪ್ರೇಕ್ಷಕರ ಗಮನವನ್ನು ಸೆಳೆದಿದೆ. ಆ ನಿಟ್ಟಿನಲ್ಲಿ ಈಗ ಮತ್ತೊಂದು ತಂಡ “ವಿಡಿಯೋ” ಎಂಬ ಶೀರ್ಷಿಕೆ ಮೂಲಕ ಇಂಥದ್ದೇ ಒಂದು ಕುತೂಹಲ ಭರಿತ ನೈಜ್ಯ ಅನುಭವಗಳನ್ನು ತಮ್ಮ ಕ್ಯಾಮೆರಾ ಕಣ್ಣುಗಳಿಂದ ಸರಿ ಹಿಡಿದಿರುವ ದೃಶ್ಯಗಳನ್ನ ತೋರಿಸುವ ನಿಟ್ಟಿನಲ್ಲಿ ಈ ವಿಡಿಯೋ ಚಿತ್ರದ ಮೊದಲ ಟೀಸರ್ ಹೊರ ತರಲು ಸಜ್ಜಾಗಿತ್ತು.
ಎಂ.ಎಂ.ಬಿ ಲೆಗಸಿಯಲ್ಲಿ ಆಯೋಜನೆಗೊಂಡ ಈ ಕಾರ್ಯಕ್ರಮದ ನಿರೂಪಣೆಯನ್ನು ನಟ ಸಿದ್ದು ಮೂಲೆಮನೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ಈ ತಂಡದ ಗುರುಗಳಾದ ಉಷಾ ಭಂಡಾರಿ ಸೇರಿದಂತೆ ಯುವ ನಿರ್ದೇಶಕರಾದ ಹಯವದ ವಾದಿರಾಜ್ , ಬಿ.ಎಸ್. ಪ್ರದೀಪ್ ವರ್ಮ , ದೇವ, ಅರುಣ್,ಜಗದೀಶ್ ಗೌಡ, ಉತ್ಸವ್, ಭರತ್ ಬೋಪಣ್ಣ , ಅರುಣ್ , ಕುಲ್ದೀಪ್ ಕಾರ್ಯಪ್ಪ , ಶ್ರೀಕಾಂತ್ , ನಟಿಯರಾದ ಬೃಂದಾ ಆಚಾರ್ಯ , ಕಾಜಲ್ ಕುಂದರ್ , ಮಂದಾರ , ಅನುಪ, ಸಂಜನಾ ಸೇರಿದಂತೆ ಹಲವು ಗಣ್ಯರು ಆಗಮಿಸಿ ಚಿತ್ರದ ಟೀಸರ್ ಬಿಡುಗಡೆ ಮಾಡುವುದರ ಜೊತೆಗೆ ತಂಡದ ಶ್ರಮವನ್ನ ಮೆಚ್ಚಿಕೊಂಡು ಚಿತ್ರಕ್ಕೆ ಯಶಸ್ಸು ಸಿಗಲಿ ಎಂದು ಶುಭವನ್ನು ಹಾರೈಸಿದರು.
ಈ ಚಿತ್ರವನ್ನು ನಿರ್ಮಿಸುತ್ತಿರುವಂತಹ ನಟ , ನಿರ್ಮಾಪಕ ದೀಕ್ಷಿತ್ ಶೆಟ್ಟಿ ಮಾತನಾಡುತ್ತಾ ಇದೊಂದು ಗೆಳೆಯರ ಬಳಗ ಸೇರಿಕೊಂಡು ನಿರ್ಮಾಣ ಮಾಡುತ್ತಿರುವಂತಹ ಚಿತ್ರ. ದಿಯಾ , ಬ್ಲಿಂಕ್ ಸೇರಿದಂತೆ ಒಂದಷ್ಟು ಚಿತ್ರ ನನಗೊಂದು ಉತ್ತಮ ಅವಕಾಶವನ್ನು ನೀಡಿತ್ತು , ತದನಂತರ ತೆಲುಗು ದಸರಾ ಚಿತ್ರ ಕೂಡ ನನ್ನ ಪ್ರತಿಭೆಯನ್ನ ಗುರುತಿಸಿದೆ , ಈಗ ಒಂದಷ್ಟು ಉತ್ತಮ ಅವಕಾಶ ಸಿಕ್ಕಿದೆ. ನಮಗೆ ನಾವೇ ದಾರಿ ಮಾಡಿಕೊಳ್ಳಬೇಕು, ಪ್ರತಿಭೆ , ಶ್ರಮಪಡುವವರು ಗೆಲ್ಲಬೇಕು , ಹಾಗಾಗಿ ನಮ್ಮದೇ ತಂಡದ ಜೊತೆ ಈ ವಿಡಿಯೋ ಚಿತ್ರವನ್ನ ನಿರ್ಮಿಸಲು ಮುಂದಾದೆ. ನಟನೆಯ ಜೊತೆ ಮುಂದೆ ನಿರ್ಮಾಣದ ಸಂಸ್ಥೆಯನ್ನು ಬೆಳಸಬೇಕೆಂಬ ಉದ್ದೇಶವಿದೆ. ಈ ನನ್ನ ಚಿತ್ರಕ್ಕೆ ಸ್ವಲ್ಪ ಹೆಚ್ಚೇ ಪ್ರಚಾರವನ್ನು ಕೊಡಿ , ಸಹಕಾರ ನೀಡಿ , ನಮ್ಮನ್ನ ಬೆಳೆಸಿ , ಎಲ್ಲಾ ಅಂದುಕೊಂಡಂತೆ ನಡೆದಿದ್ದು ಜುಲೈ ತಿಂಗಳಲ್ಲಿ ಚಿತ್ರವನ್ನ ಬಿಡುಗಡೆ ಮಾಡುವ ಪ್ಲಾನ್ ಇದೆ ಎಂದು ಹೇಳಿದರು.
ಈ ಚಿತ್ರದ ನಿರ್ದೇಶಕ ಶ್ರೀನಿಧಿ ಬೆಂಗಳೂರು ಮಾತನಾಡುತ್ತಾ ಈ ಒಂದು ಸಬ್ಜೆಕ್ಟ್ ಹೊರ ತರಲು ಬಹಳಷ್ಟು ಶ್ರಮ ಪಟ್ಟಿದ್ದೇವೆ , ಮತ್ತೆ ಗೆಳೆಯರ ಸಹಕಾರ ಸಿಕ್ಕಿದೆ. ಪ್ಯಾರಾ ನಾರ್ಮಲ್ ಆಕ್ಟಿವಿಟೀಸ್ ಕಂಟೆಂಟ್ ಒಳಗೊಂಡಿದ್ದು , ಮೈ ಜುಮ್ ಎನಿಸುವಂತಹ ಸನ್ನಿವೇಶಗಳು ಚಿತ್ರೀಕರಣಗೊಂಡಿದೆ. ಈ ಚಿತ್ರದ ರೀ ರೆಕಾರ್ಡಿಂಗ್ ಬಹಳ ವಿಭಿನ್ನವಾಗಿದ್ದು , ಸಿಂಕ್ ಸೌಂಡ್ ಕೂಡ ಬಳಸಲಾಗಿದೆ. ಮತ್ತೊಮ್ಮೆ ಪ್ರೇಕ್ಷಕರನ್ನ ಸೆಳೆಯೋದರಲ್ಲಿ ನಮ್ಮ ಈ ವಿಡಿಯೋ ಚಿತ್ರ ಗೆಲ್ಲುತ್ತೆ ಎಂಬ ಭರವಸೆ ನಮಗಿದೆ. ನಮ್ಮ ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರು ಹಗಲು ರಾತ್ರಿ ಎನ್ನದೆ ಬಹಳ ಶ್ರಮಪಟ್ಟು ಕೆಲಸ ಮಾಡಿದ್ದಾರೆ. ಈಗ ಮೊದಲು ಟೀಸರ್ ಬಿಟ್ಟಿದ್ದೇವೆ. ಮುಂದೆ ಹಂತ ಹಂತವಾಗಿ ಮತ್ತಷ್ಟು ಮಾಹಿತಿಯನ್ನು ನೀಡುತ್ತೇವೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಕೊನೆ ಹಂತದಲ್ಲಿದೆ. ಸದ್ಯದಲ್ಲೇ ತೆರೆಯ ಮೇಲೆ ತರುತ್ತೇವೆ ನಿಮ್ಮೆಲ್ಲರ ಪ್ರೀತಿ ಸಹಕಾರ ಇರಲಿ ಎಂದು ಕೇಳಿಕೊಂಡರು.
ಧೀ ಸಿನಿಮಾಸ್ ಬ್ಯಾನರ್ ನಡಿಯಲ್ಲಿ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಚೊಚ್ಚಲ ನಿರ್ಮಾಣ “ವಿಡಿಯೋ” ಚಿತ್ರವನ್ನ ಬ್ಲಿಂಕ್ ಖ್ಯಾತಿಯ ಶ್ರೀನಿಧಿ ಬೆಂಗಳೂರು ನಿರ್ದೇಶಿಸುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ಅಭಿನಯಿಸಿರುವ ಯುವ ಪ್ರತಿಭೆಗಳ ಭರತ , ಜೀವನ್ ಶಿವಕುಮಾರ್, ತೇಜೇಶ್, ಪ್ರಿಯಾ. ಜೆ ಆಚಾರ್, ನಲ್ಮೇ ನಾಚಿಯಾರ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು , ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು.
ಹಾಗೆಯೇ ಸಂಗೀತ ನೀಡಿದ ಪ್ರಸನ್ನ ಕುಮಾರ್ ಕೂಡ ತಮ್ಮ ಕೆಲಸದ ಬಗ್ಗೆ ಮಾಹಿತಿ ನೀಡಿದರು. ಈ ಚಿತ್ರಕ್ಕೆ ಖ್ಯಾತ ವಸ್ತ್ರವಿನ್ಯಾಸಕ ಭರತ್ ಸಾಗರ್ ಕಾರ್ಯಕಾರಿ ನಿರ್ಮಾಪಕರಾಗಿದ್ದು ಚಿತ್ರೀಕರಣದ ಅನುಭವವನ್ನು ಹಂಚಿಕೊಂಡರು. ಈ ಚಿತ್ರಕ್ಕೆ ಅವಿನಾಶ್ ಶಾಸ್ತ್ರಿ ಛಾಯಾಗ್ರಣವಿದೆ. ತಾಂತ್ರಿಕವಾಗಿ ತಂಡ ಬಹಳಷ್ಟು ಶ್ರಮ ಪಟ್ಟಿದ್ದು , ಚಿತ್ರದ ಕುರಿತು ಮತ್ತಷ್ಟು ಮಾಹಿತಿಯನ್ನು ತಂಡ ಮುಂದಿನ ದಿನಗಳಲ್ಲಿ ನೀಡಲಿದೆಯಂತೆ.