Cini NewsSandalwood

‘ಮರ್ಫಿ’ಯಿಂದ ಬಂತು ಡ್ಯಾನ್ಸಿಂಗ್ ನಂಬರ್…ಅಕ್ಟೋಬರ್ 18ಕ್ಕೆ ಸಿನಿಮಾ ತೆರೆಗೆ

Spread the love

ಕನ್ನಡ ಚಿತ್ರರಂಗವೀಗ ಹೊಸ ದಿಕ್ಕಿಗೆ ಹೊರಳಿದೆ. ಹೊಸ ಹೊಸ ಪ್ರಯತ್ನಗಳು ನಡೆಯುತ್ತಿದೆ. ಅದರ ಭಾಗವಾಗಿ ತಯಾರಾಗಿರುವ ಮರ್ಫಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅಕ್ಟೋಬರ್ 18ಕ್ಕೆ ತೆರೆಗೆ ಬರ್ತಿರುವ ಈ ಚಿತ್ರದ ಡ್ಯಾನ್ಸಿಂಗ್ ನಂಬರ್ ಅನಾವರಣಗೊಂಡಿದೆ.

ಮೊಗಾಚಿ ಎಂಬ ಹಾಡಿಗೆ ಧನಂಜಯ್ ರಂಜನ್ ಪದಗೀಚಿದ್ದು, ಅರ್ಜುನ್ ಜನ್ಯ ಟ್ಯೂನ್ ಹಾಕಿದ್ದಾರೆ. ಗೋವಾದ ಪೋರ್ಚುಗೀಸ್ ಮತ್ತು ಕೊಂಕಣಿ ಸಂಸ್ಕೃತಿಯನ್ನು ಬಿಂಬಿಸಿರುವ ಹಾಡಿಗೆ ರಜತ್ ಹೆಗ್ಡೆ ಮತ್ತು ನಾಡಿಯಾ ರೆಬೆಲೊ ಧ್ವನಿಯಾಗಿದ್ದಾರೆ. ಮಾಧುರಿ ಪರಶುರಾಮ್ ನೃತ್ಯ ಸಂಯೋಜನೆ ಹಾಡಿನ ತೂಕ ಹೆಚ್ಚಿಸಿದೆ.

BSP ವರ್ಮಾ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಪ್ರಭು ಮುಂಡ್ಕೂರ್ ವರ್ಮಾ ಜೊತೆಗೂಡಿ ಚಿತ್ರಕಥೆ ಬರೆದಿದ್ದಾರೆ. ರೋಮ್ಯಾಂಟಿಕ್ ಡ್ರಾಮಾ ಎಳೆಯ ಮರ್ಫಿ ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಪ್ರಭು ಮುಂಡ್ಕೂರ್, ರೋಶಿನಿ ಪ್ರಕಾಶ್ , ಇಳಾ ವೀರಮಲ್ಲ ಜೊತೆಯಲ್ಲಿ ದತ್ತಣ್ಣ, ಅಶ್ವಿನಿ ರಾವ್ ಪಲ್ಲಕ್ಕಿ, ಮಹಾಂತೇಶ್ ಹೀರೇಮಠ್, ರಾಮಪ್ರಸಾದ್ ಬಾಣಾವರ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ನವೀನ್ ರೆಡ್ಡಿ, ಪ್ರಭು, ವರ್ಮಾ ಸಂಭಾಷಣೆ ಬರೆದಿದ್ದು, ಮಹೇಶ ತೊಗಟ ಸಂಕಲನ, ಆದರ್ಶ ಆರ್ ಕ್ಯಾಮೆರಾ ಹಿಡಿದ್ದಾರೆ.

ಸೋಮಣ್ಣ ಟಾಕೀಸ್ ಮತ್ತು ವರ್ಣಸಿಂಧು ಸ್ಟುಡಿಯೋಸ್ ಬ್ಯಾನರ್ ನಡಿ ರಾಮ್ ಕೋ ಸೋಮಣ್ಣ ಹಾಗೂ ಬಿಎಸ್ ಪಿ ವರ್ಮಾ ಮರ್ಫಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅಕ್ಟೋಬರ್ 18ಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ

Visited 1 times, 1 visit(s) today
error: Content is protected !!