Cini NewsSandalwood

ಹಂಸಲೇಖ ಸ್ಟುಡಿಯೋನಲ್ಲಿ “ಅಕ್ಕಮಹಾದೇವಿ” ಚಿತ್ರಕ್ಕೆ ಹಾಡುಗಳ ಧ್ವನಿಮುದ್ರಣ

Spread the love

ಭರತ್ ಸಿನಿ ಕ್ರಿಯೇಶನ್ಸ್ ಮೂಲಕ ನಿರ್ಮಾಣಗೊಳ್ಳುತ್ತಿರುವ ಶ್ರೀ ಜಗನ್ಮಾತೆ “ಅಕ್ಕಮಹಾದೇವಿ” ಚಿತ್ರಕ್ಕೆ ಹಂಸಲೇಖ ಸ್ಟುಡಿಯೋದಲ್ಲಿ ಹಾಡುಗಳ ಧ್ವನಿಮುದ್ರಣ ಕಾರ್ಯ ನಡೆದಿದೆ. ಸುಮಾರು 900 ವರ್ಷಗಳ ಹಿಂದೆ ನಡೆದ ಅಕ್ಕಮಹಾದೇವಿಯ ಕಥೆಯನ್ನು ರಚಿಸಿ , ನಿರ್ಮಾಪಕರಾಗಿ ನಿರ್ದೇಶನ ಮಾಡುತ್ತಿದ್ದಾರೆ.

ವಿಷ್ಣುಕಾಂತ್ ಬಿ.ಜೆ. ಈ ಚಿತ್ರಕ್ಕೆ ರವಿ ಸುವರ್ಣ ಛಾಯಾಗ್ರಹಣ , ಆರ್ . ಪಳನಿ ಸೇನಾಪತಿ ಸಂಗೀತ , ರಂಗಸ್ವಾಮಿ ನಿರ್ವಹಣೆ ಇರುವ ಈ ಚಿತ್ರಕ್ಕೆ ತಾರಾಗಣ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ. ಶ್ರೀ ಬಸವಣ್ಣನವರ ಹಾಗೂ ಅಕ್ಕಮಹಾದೇವಿಯವರ 21 ವಚನಗಳಿಗೆ ನಿರ್ದೇಶಕ ವಿಷ್ಣುಕಾಂತ್ ರಚಿಸಿರುವ ಮೂರು ಗೀತೆಗಳು ಲೈವ್ ವಾದ್ಯದೊಂದಿಗೆ ಹಾಡುಗಳನ್ನು ಮುದ್ರಣ ನಡೆಯುತ್ತಿದೆ.

ವಿಷ್ಣುಕಾಂತ್, ಸುರಕ್ಷಾ, ಭವ್ಯ, ಬಿರಾದರ್, ಎಂ. ಪಾಟೀಲ್ ಮುಂತಾದವರಿದ್ದಾರೆ. ಮುಂದಿನ ತಿಂಗಳು ಆರಂಭಗೊಳ್ಳಲಿರುವ ಈ ಚಿತ್ರವನ್ನ ಶಿವಮೊಗ್ಗ , ಬೀದರ್, ಮಂಗಳೂರು, ಶ್ರೀಶೈಲ, ಹಿಮಾಚಲ ಸೇರಿದಂತೆ ಹಲವು ಸ್ಥಳದಲ್ಲಿ ಚಿತ್ರೀಕರಣ ಮಾಡಲು ತಂಡ ಯೋಜನೆಯನ್ನು ಹಾಕಿಕೊಂಡಿದೆ.

 

Visited 2 times, 1 visit(s) today
error: Content is protected !!