Cini NewsMovie Review

ಭಾವೈಕ್ಯತೆಯ ಪಯಣದಲ್ಲಿ ಕೋಟಿಗಳ ಕರಾಮತ್ತು : 13 ಚಿತ್ರದ ವಿಮರ್ಶೆ -ರೇಟಿಂಗ್ : 3.5/5

ರೇಟಿಂಗ್ : 3.5/5
ಚಿತ್ರ : 13
ನಿರ್ದೇಶಕ :ಕೆ. ನರೇಂದ್ರಬಾಬು
ನಿರ್ಮಾಪಕರು : ಸಂಪತ್ ಕುಮಾರ್ , ಮಂಜುನಾಥ ಗೌಡ , ಮಂಜುನಾಥ್ ಹೆಚ್.ಎಸ್. ಕೇಶವಮೂರ್ತಿ. ಸಿ.
ಸಂಗೀತ : ಶೋಗನ್‌ ಬಾಬು
ಛಾಯಾಗ್ರಾಹಕ : ಅಜಯ್ ಮಂಜು
ತಾರಾಗಣ : ರಾಘವೇಂದ್ರ ರಾಜ್‌ಕುಮಾರ್, ಶೃತಿ , ಪ್ರಮೋದ್ ಶೆಟ್ಟಿ ‌, ಲೋಕೇಶ್ , ದಿಲೀಪ್ ಪೈ , ವಿನಯ ಸೂರ್ಯ ಹಾಗೂ ಮುಂತಾದವರು…

ದುಡ್ಡೇ ದೊಡ್ಡಪ್ಪ ಅನ್ನೋ ಮಾತಿನಂತೆ , ದುಡ್ಡು ಎಂಥವರನ್ನಾದರೂ ಬದಲಿಸುವ ಶಕ್ತಿಯನ್ನು ಹೊಂದಿರುತ್ತೆ. ಅದೇ ಒಂದು ವಿಚಾರದೊಂದಿಗೆ ಹವಾಲ ಸಂದರ್ಭದ ಹಣದ ವಹಿವಾಟಿನ ದಂಧೆಯ ನೋಟಿನ ಸಾಗಾಣಿಕೆಯ ಹಾದಿಯಲ್ಲಿ ನಡೆಯುವ ಎಡವಟ್ಟು , ಮುಗ್ಧ ಗಂಡ ಹೆಂಡತಿಯ ಪರದಾಟ , ಇದರಿಂದರುವ ಕಳ್ಳ ಪೊಲೀಸ ಆಟ , ಕೋಟಿಗಟ್ಟಲೆ ಹಣಕ್ಕಾಗಿ ನಡೆಯುವ ತಂತ್ರಗಾರಿಕೆ , ಗುಮಾನಿ , ಇದೆಲ್ಲದರ ಜೊತೆಗೆ ಕುಟುಂಬ ಎದುರಿಸುವ ಸಮಸ್ಯೆಯನ್ನು ಬಹಳ ಕುತೂಹಲಕಾರಿಯಾಗಿ ಈ ವಾರ ತೆರೆಯ ಮೇಲೆ ತಂದಿರುವಂತಹ ಚಿತ್ರವೇ “13”.

ಚಿಕ್ಕಮಗಳೂರಿನ ಸುಂದರ ಪರಿಸರದ ತಾಣದ ಸಮೀಪ ಇರುವ ಕೊಟ್ಟಿಗೆಹಾರ ಸಮೀಪ ಸಣ್ಣ ಗುಜರಿ ಅಂಗಡಿ ಇಟ್ಟುಕೊಂಡಿರುವ ಮೋಹನ್ ಕುಮಾರ್ (ರಾಘವೇಂದ್ರ ರಾಜ್ ಕುಮಾರ್ ) ಹಾಗೂ ಅದರ ಪಕ್ಕದಲ್ಲೇ ಟೀ ಅಂಗಡಿ ನಡೆಸುತ್ತಿರುವ ಸಾಯಿರಾ ಬಾನು (ಶೃತಿ) ಇಬ್ಬರು ಅನ್ಯ ಜಾತಿಯವರಾದರು ಪ್ರೀತಿಯಿಂದ ಸತಿಪತಿಗಳಾಗಿ ಜೀವನ ನಡೆಸುತ್ತಿರುತ್ತಾರೆ.

ಒಮ್ಮೆ ಹವಾಲಾ ಗ್ಯಾಂಗಿನ ಗುಂಪೊಂದು ಕೋಟಿಗಟ್ಟಲೆ ಹಣವನ್ನು ಸಾಗಿಸಲು ಇಬ್ಬರು ಕಳ್ಳ ಪ್ರೇಮಿಗಳಿಗೆ ವಹಿಸುತ್ತಾರೆ. ಆದರೆ ಇಂತಹ ದೊಡ್ಡ ಮೊತ್ತವನ್ನು ನೋಡಿದ ಅವರು ತಾವೇ ಹಣವನ್ನು ಲೂಟಿ ಮಾಡಲು ನಿರ್ಧರಿಸಿ ಸಾಗುವ ರಸ್ತೆಯ ಪಕ್ಕದಲ್ಲಿರುವ ಹುಲ್ಲಿನ ಮೆದೆಯೊಳಗೆ ಬಚ್ಚಿಟ್ಟು ಹೋಗುತ್ತಾರೆ. ಅದು ಸಾಯಿರಾ ಬಾನು ಕಣ್ಣಿಗೆ ಬೀಳುತ್ತದೆ.

ಗಂಡನ ಒಪ್ಪಿಸಿ ಬ್ಯಾಗನ್ನು ಮನೆಗೆ ತಂದಾಗ ಹದಿಮೂರು ಕೋಟಿ ಹಣ ಸಿಗುತ್ತದೆ. ಆ ಹಣ ಸಿಕ್ಕಮೇಲೆ ಅವರು ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಪರರ ಹಣ ನಮಗೆ ಬೇಡ , ಪೊಲೀಸರಿಗೆ ಒಪ್ಪಿಸೋಣ ಎಂದು ಗಂಡ ಹೇಳಿದರೂ ತಮ್ಮ‌ ಕಷ್ಟಗಳನ್ನು ಪರಿಹರಿಸಿಕೊಳ್ಳಲು ದೇವರೇ ನೀಡಿದ ಅವಕಾಶ ಎಂದು ಸಾಯಿರಾ ಪರಿ ಪರಿಯಾಗಿ ಕೇಳಿದಾಗ, ಪತ್ನಿಯನ್ನು ನಿರಾಸೆಗೊಳಿಸಲಾಗದೆ ಒಪ್ಪಿಕೊಳ್ಳುತ್ತಾನೆ. ಆ ಹಣದ ಹಿಂದೆ ಬಿದ್ದ ಗ್ಯಾಂಗ್ ಜೊತೆಗೆ ಪೊಲೀಸ್ ಅಧಿಕಾರಿ (ಪ್ರಮೋದ್ ಶೆಟ್ಟ) ಯೂ ಶಾಮೀಲಾಗಿ ಬಚ್ಚಿಟ್ಟಿದ್ದ ಹಣ ತೆಗೆದುಕೊಳ್ಳಲು ಬಂದಾಗ ಹಣ ಮಾಯವಾಗಿರುತ್ತದೆ.

ಅಣತಿ ದೂರದಲ್ಲೇ ಅಂಗಡಿ ಇಟ್ಟುಕೊಂಡಿದ್ದ ಮೋಹನ್ ಕುಮಾರ್ ಬಳಿಯೇ ಆ ಹಣ ಇರಬಹುದೆಂಬ ಅನುಮಾನ ಪೊಲೀಸ್ ಅಧಿಕಾರಿಗೆ ದಟ್ಟವಾಗುತ್ತದೆ. ಮೋಹನ್ ಕುಮಾರ್ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಪೊಲೀಸ್ ಅಧಿಕಾರಿಗೆ, ನಾದಿನಿಯ ಮದುವೆಯನ್ನು ಮೋಹನ್ ವಿಜೃಂಭಣೆಯಿಂದ ಮಾಡಿದಾಗ ಅನುಮಾನ ದಟ್ಟವಾಗುತ್ತದೆ.

ಕ್ಷುಲ್ಲುಕ ಕಾರಣಕ್ಕೆ‌ ಮೋಹನ ಕುಮಾರ್ ನನ್ನ ಠಾಣೆಗೆ ಕರೆಸಿ ಟಾರ್ಚರ್ ನೀಡುತ್ತಾನೆ. ಏನು ಮಾಡಿದರೂ ಹಣದ ಬಗ್ಗೆ ಬಾಯಿ ಬಿಡದ ಮೋಹನ್ ಕುಮಾರ್ ತನ್ನ ಚಾಣಾಕ್ಷತನದಿಂದಲೇ ಎಲ್ಲದರಿಂದ‌ ಪಾರಾಗುತ್ತಾನೆ. ಆ ದೊಡ್ಡ ಮಟ್ಟದ ಹಣ ಏನು ಮಾಡುತ್ತಾರೆ ಎಂಬುವಷ್ಟರಲ್ಲಿ ಚಿತ್ರ ಮುಗಿಯುವ ಹಂತಕ್ಕೆ ಬಂದು ಮುಂದುವರೆದ ಭಾಗಕ್ಕೆ ದಾರಿ ಮಾಡಿಕೊಡುತ್ತದೆ.
ಈ 13 ಎಂದರೇನು…
ಕೋಟಿಗಟ್ಟಲೆ ಹಣ ಏನಾಯ್ತು…
ಮೋಹನ್ ಸಾಯಿರಾ ಬದುಕು ಏನು…
ಕ್ಲೈಮ್ಯಾಕ್ಸ್ ಏನು ಹೇಳುತ್ತೆ…
ಈ ಎಲ್ಲಾ ವಿಚಾರ ತಿಳಿಯಬೇಕಾದರೆ ಒಮ್ಮೆ ನೀವು “13” ನೋಡಬೇಕು.

ಈ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಬಹಳ ಸಹಜ ಅಭಿನಯ ನೀಡಿದ್ದು , ರಿಟೈರ್ಡ್ ಪೊಲೀಸ್ ಅಧಿಕಾರಿಯಾಗಿದ್ದು , ಗುಜರಿ ಅಂಗಡಿ ನಡೆಸುವ ಮೋಹನ್ ಕುಮಾರ್ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇಡೀ ಚಿತ್ರದ ಏರಿಳಿತಕ್ಕೆ ನಾಂದಿ ಹಾಡುವ ಪ್ರಮುಖ ವ್ಯಕ್ತಿಯಾಗಿ ಮಿಂಚಿದ್ದಾರೆ.

ಭಾರೀ ಮೊತ್ತಕ್ಕೆ ಮಾರಾಟವಾಯಿತು “ಘೋಸ್ಟ್” ಚಿತ್ರದ ರೈಟ್ಸ್

ಕೆಲವು ಸನ್ನಿವೇಶಗಳು ನಿರ್ವಹಿಸಿರುವುದು ಬಹಳ ಕಷ್ಟಕರವಾಗಿರುವುದು ಕಾಣುತ್ತದೆ. ಇನ್ನು ನಟಿ ಶೃತಿ ಮುಸ್ಲಿಂ ಮಹಿಳೆ ಸಾಯಿರಾ ಬಾನು ಪಾತ್ರವನ್ನು ಸೊಗಸಾಗಿ ನಿರ್ವಹಿಸಿದ್ದಾರೆ. ಅವರ ಹಾವ ಭಾವದ ಜೊತೆಗೆ ಜಿಂಕೆಯ ಹಾಗೆ ಹಾಡಿ ಕುಣಿದಿದ್ದಾರೆ. ಕೆಲವೊಮ್ಮೆ ಸನ್ನಿವೇಶಗಳಲ್ಲಿ ಅತಿಯಾಗಿ ವರ್ತಿಸಿದಂತೆ ಕಾಣುತ್ತಾರೆ.

ಇನ್ನು ಪೊಲೀಸ್ ಅಧಿಕಾರಿಯಾಗಿ ಪ್ರಮೋದ್ ಶೆಟ್ಟಿ‌ ಒಂದು ದೊಡ್ಡ ಪಾತ್ರವನ್ನೇ ನಿರ್ವಹಿಸಿದ್ದು , ರಾಘಣ್ಣನ ಮುಖಕ್ಕೆ ಸಿಗರೇಟ್ ಬಿಡುವ ಸನ್ನಿವೇಶ ಗಮನ ಸೆಳೆಯುತ್ತದೆ. ಇನ್ನು ಇಬ್ಬರು ಕಳ್ಳರಾಗಿ ಅಭಿನಯಿಸಿರುವ ದಿಲೀಪ್ ಪೈ , ವಿನಯ ಸೂರ್ಯ ಸೇರಿದಂತೆ ಸೂರಜ್ , ಲೋಕೇಶ್ ಎಲ್ಲರೂ ಕೂಡ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವುದಕ್ಕೆ ಶ್ರಮ ಪಟ್ಟಿದ್ದಾರೆ. ಒಂದು ಕುತೂಹಲ ಮೂಡಿಸುವ ಚಿತ್ರವಾಗಿ “13” ಚಿತ್ರವನ್ನು ತೆರೆಯ ಮೇಲೆ ತಂದಿರುವ ನಿರ್ದೇಶಕ ಕೆ. ನರೇಂದ್ರ ಬಾಬುರವರ ಆಲೋಚನೆ ಉತ್ತಮವಾಗಿದೆ.

ಎರಡು ಧರ್ಮಗಳನ್ನು ಪ್ರೀತಿಯ ಬೆಸುಗೆಯೊಳಗೆ ಬಂದಿ ಮಾಡುವುದರ ಜೊತೆಗೆ ಕಾಂಚನ ಮನುಷ್ಯನನ್ನು ಯಾವ ರೀತಿಯಲ್ಲಿ ಆಟ ಆಡಿಸುತ್ತದೆ , ಏನೆಲ್ಲಾ ಅವಾಂತರಗಳನ್ನು ಸೃಷ್ಟಿ ಮಾಡುತ್ತದೆ ಎಂಬುದನ್ನು ತೆರೆಯ ಮೇಲೆ ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಆದರೆ ಚಿತ್ರದ ಓಟ ಇನ್ನಷ್ಟು ಬಿಗಿ ಮಾಡಬಹುದಿತ್ತು. ಇನ್ನು ಈ ಹೈಲೈಟ್ ಅಂದರೆ ಕ್ಯಾಮೆರಾ ವರ್ಕ್, ಸಂಗೀತ ಎನ್ನಬಹುದು. ಇಂತಹ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕರ ಧೈರ್ಯವನ್ನು ಮೆಚ್ಚಲೇಬೇಕು.ಯಾವುದೇ ಮುಜುಗರವಿಲ್ಲದೆ ಇಡೀ ಕುಟುಂಬ ಸಮೇತ ಕುಳಿತು “13” ಚಿತ್ರವನ್ನು ನೋಡಬಹುದಾಗಿದೆ.

#13Movie, #KannadaMovie, #MovieReview, #Sandalwood,  #RaghavendraRajkumar,

error: Content is protected !!