Cini NewsSandalwood

ಭಾರೀ ಮೊತ್ತಕ್ಕೆ ಮಾರಾಟವಾಯಿತು “ಘೋಸ್ಟ್” ಚಿತ್ರದ ರೈಟ್ಸ್

ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ಎನ್ ನಿರ್ಮಿಸಿರುವ, ಶ್ರೀನಿ ನಿರ್ದೇಶನದ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ, ಬಹು ನಿರೀಕ್ಷಿತ “ಘೋಸ್ಟ್” ಚಿತ್ರದ ಥಿಯೇಟ್ರಿಕಲ್, ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ.

“ಆರ್ ಆರ್ ಆರ್”, “ಜವಾನ್” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ವಿತರಣೆ ಮಾಡಿರುವ ಪೆನ್ ಸ್ಟುಡಿಯೋ ಸಂಸ್ಥೆ ಈಗ “ಘೋಸ್ಟ್” ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡಿದ್ದಾರೆ. ಕನ್ನಡ, ತಮಿಳು ಹಾಗೂ ಮಲೆಯಾಳಂ ಭಾಷೆಗಳನ್ನು ಹೊರೆತು ಪಡಿಸಿ ಮಿಕ್ಕೆಲ್ಲಾ ಭಾಷೆಗಳಲ್ಲಿ “ಘೋಸ್ಟ್” ಚಿತ್ರವನ್ನು ಪೆನ್ ಸ್ಟುಡಿಯೋ ಸಂಸ್ಥೆ ಬಿಡುಗಡೆ ಮಾಡುತ್ತಿರುವುದಾಗಿ ನಿರ್ಮಾಪಕ ಸಂದೇಶ್ ತಿಳಿಸಿದ್ದಾರೆ.

ಪ್ರಾಮಿಸಿಂಗ್ ಆಗಿದೆ ‘ಸೇನಾಪುರ’ ಟ್ರೇಲರ್

ಇತ್ತೀಚೆಗೆ ಪೆನ್ ಸ್ಟುಡಿಯೋ ಸಂಸ್ಥೆ ಮುಖ್ಯಸ್ಥರಾದ ಜಯಂತಿ ಲಾಲ್ ಗಡ ಹಾಗೂ ನಿರ್ಮಾಪಕ ಸಂದೇಶ್ ಈ ಕುರಿತು ಮಾತನಾಡಿದ್ದಾರೆ. ಅಕ್ಟೋಬರ್ ಮೊದಲವಾರ “ಘೋಸ್ಟ್” ಚಿತ್ರದ ಪ್ರಚಾರಕ್ಕಾಗಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಮುಂಬೈ, ದೆಹಲಿ ಮುಂತಾದ ಕಡೆ ತೆರಳುತ್ತಿದ್ದಾರೆ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದಾರೆ‌.

#Shivarajkumar, #GhostMovie, #DigitalRights,

error: Content is protected !!