ಇದೆ 29ರಂದು ಸುದೀಪ್ ಹುಟ್ಟುಹಬ್ಬಕ್ಕಾಗಿ “ವಿಷ್ಣುವರ್ಧನ” ಚಿತ್ರ ರೀ ರಿಲೀಸ್
ಸ್ಯಾಂಡಲ್ ವುಡ್ ನ ಅಭಿನಯ ಭಾರ್ಗವ , ಬಾದಷಾ , ಕಿಚ್ಚ ಸುದೀಪ ಅವರ ಹುಟ್ಟುಹಬ್ಬ ಸೆಪ್ಟೆಂಬರ್ 2. ಈ ಶುಭ ದಿನವನ್ನ ಅಭಿಮಾನಿಗಳು ಆಚರಿಸಲು ರಾಜ್ಯದ ನಾನಾ ಮೂಲೆಗಳಿಂದ ಪ್ರತಿ ವರ್ಷ ಬರುವುದು ಸರ್ವೇಸಾಮಾನ್ಯ.
ಈ ಬಾರಿ ವಿಶೇಷ ಏನೆಂದರೆ ಇದೆ ಮೊದಲ ಬಾರಿಗೆ ಕಿಚ್ಚ ಸುದೀಪ್ ಅಭಿನಯದ “ವಿಷ್ಣುವರ್ಧನ” ಚಿತ್ರ ಬೆಳ್ಳಿ ಪರದೆಯ ಮೇಲೆ ಮತ್ತೆ ರೀ ರಿಲೀಸ್ ಆಗುತ್ತಿದೆ. ಈ ವಿಷ್ಣುವರ್ಧನ ಚಿತ್ರವನ್ನು ದೊಡ್ಡ ಮಟ್ಟಕ್ಕೆ ವಿತರಣೆಯ ಹಕ್ಕನ್ನು ಪಡೆದಂತ ನಿರ್ಮಾಪಕ ವಿ. ಮಾದೇಶ್.
ಈ ಹಿಂದೆ “ನಿಂಬಿಯಾ ಬನಾದ ಮ್ಯಾಗ” ಚಿತ್ರವನ್ನ ನಿರ್ಮಿಸಿ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಂತ ನಿರ್ಮಾಪಕ ವಿ. ಮಾದೇಶ್ ನಮ್ಮ ಕಿಚ್ಚ ಸುದೀಪ್ ರವರ ಅಭಿಮಾನಿ , ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನ ಆಚರಿಸುವ ಸಲುವಾಗಿ ಈ ವಿಷ್ಣುವರ್ಧನ ಚಿತ್ರವನ್ನು ಮೂರು ಬಿಡುಗಡೆ ಮಾಡಲು ನಿರ್ಧರಿಸಿ , ಇದೇ ಆಗಸ್ಟ್ 29ರಂದು ರಾಜ್ಯಾದ್ಯಂತ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಎಲ್ಲಾ ಜಿಲ್ಲೆಯ ಅಭಿಮಾನಿಗಳು ಸಂಭ್ರಮಿಸಲು ಅದ್ದೂರಿಯಾಗಿ ಸಿದ್ಧತೆ ಮಾಡಿಕೊಂಡಿದ್ದು , ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದ ಮುಂಭಾಗ ಕಿಚ್ಚ ಸುದೀಪ್ ರವರ ಬೃಹತ್ ಕಟೌಟ್ ಗೆ ಹೂವಿನ ಅಲಂಕಾರಗಳಲ್ಲಿ ಕಂಗೊಳಿಸುವುದರ ಜೊತೆಗೆ ಅಭಿಮಾನಿಗಳ ಸಮ್ಮುಖದಲ್ಲಿ ಕಿಚ್ಚ ಸುದೀಪ್ ಹುಟ್ಟುಹಬ್ಬದ ಆಚರಣೆಯನ್ನು ಸಂಭ್ರಮದಿಂದ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ.
2011ರಲ್ಲಿ ಅದ್ದೂರಿಯಾಗಿ ದ್ವಾರಕೇಶ್ ಚಿತ್ರ ಮೂಲಕ ಕಿಚ್ಚ ಸುದೀಪ್ ನಟನೆಯಲ್ಲಿ ಬಿಡುಗಡೆಗೊಂಡ “ವಿಷ್ಣುವರ್ದನ” ಚಿತ್ರ ಅಭಿಮಾನಿಗಳ ಮನಸ್ಸನ್ನು ಗೆದ್ದು ಭರ್ಜರಿ ಯಶಸ್ಸನ್ನ ಕಂಡಿತು. ಪೋನ್ ಕುಮಾರನ್ ನಿರ್ದೇಶನದ ಈ ಚಿತ್ರದಲ್ಲಿ ಭರ್ಜರಿ ಹಾಡಿನ ಜೊತೆ ಅದ್ದೂರಿ ತಾರಾಗಣವೇ ತುಂಬಿಕೊಂಡಿತ್ತು.
ಈಗ ಕಿಚ್ಚ ಸುದೀಪ್ ಹುಟ್ಟುಹಬ್ಬದ ಸಂಭ್ರಮದ ದಿನ ಮತ್ತೆ ತೆರೆಯ ಮೇಲೆ ವಿಷ್ಣುವರ್ಧನ ಮರು ಬಿಡುಗಡೆ ಆಗುತ್ತಿರುವುದು ಅಭಿಮಾನಿಗಳಲ್ಲಿ ಸಂತೋಷವನ್ನು ಹಿಮ್ಮಡಿಗೊಳಿಸಿದೆ. MGPX ಎಂಟರ್ಪ್ರೈಸಸ್ ವಿ. ಮಾದೇಶ್ ಹಾಗೂ ಆರ್ .ಎಕ್ಸ್. 100 ಗಿರೀಶ್ ಮೂಲಕ lilac ಎಂಟರ್ಟೈನ್ಮೆಂಟ್ ಜೊತೆಯಲ್ಲಿ ಅದ್ದೂರಿಯಾಗಿ ವಿಷ್ಣುವರ್ಧನ ಚಿತ್ರ ತೆರೆಯ ಮೇಲೆ ರಾರಾಜಿಸಲಿದೆ. ಈ ಚಿತ್ರವು ಸಿಂಗಲ್ ಸ್ಕ್ರೀನ್ ಸೇರಿದಂತೆ ಮಲ್ಟಿಪ್ಲೆಕ್ಸ್ ನಲ್ಲೂ ಹಬ್ಬದ ರೀತಿ ಕಿಚ್ಚ ಸುದೀಪ್ ಬರ್ತಡೇ ಯನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಲು ತುದಿಗಾಲಲ್ಲಿ ನಿಂತಿದ್ದಾರೆ.