Cini NewsSandalwoodTV Serial

ಹೊಸಬರ “ವಲವಾರ” ಟ್ರೇಲರ್ ರಿಲೀಸ್ ಮಾಡಿದ ಶಿವಣ್ಣ..ಇದೇ ತಿಂಗಳ 30ಕ್ಕೆ ಸಿನಿಮಾ ಬಿಡುಗಡೆ.

Spread the love

ದಕ್ಷಿಣ ಭಾರತ ಚಿತ್ರರಂಗದಲ್ಲೀಗ ನೆಲ ಮೂಲದ‌ ಕಥೆಗಳು ಪ್ರೇಕ್ಷಕರ ಗಮನ‌ ಸೆಳೆಯುತ್ತಿವೆ. ಅದರ ಮುಂದುವರಿದ ಭಾಗವಾಗಿ ತಯಾರಾಗಿರುವ ಸಿನಿಮಾ “ವಲವಾರ”. ಟೈಟಲ್ ಹಾಗೂ ತನ್ನ ಕಂಟೆಂಟ್ ಮೂಲಕ ಪ್ರೇಕ್ಷಕರ ವಲಯದಲ್ಲಿ ನಿರೀಕ್ಷೆ ಹೆಚ್ಚು ಮಾಡಿರುವ ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇದೇ ತಿಂಗಳ 30ರಂದು ಬಿಡುಗಡೆಯಾಗುತ್ತಿರುವ “ವಲವಾರ” ಸಿನಿಮಾದ ಟ್ರೇಲರ್ ನ್ನು ಶಿವಣ್ಣ ಡಿಜಿಟಲ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭ ಕೋರಿದ್ದಾರೆ.


ಪಶ್ಚಿಮ ಘಟ್ಟಗಳ ಅದ್ಬುತ ಪರಿಸರದಲ್ಲಿ “ವಲವಾರ” ಸಿನಿಮಾದ ಕಥೆ ತೆರೆದುಕೊಳ್ಳುತ್ತದೆ. ಒಂದು ಕುಟುಂಬದಲ್ಲಿ ಒಂದೇ ದಿನದಲ್ಲಿ ನಡೆಯುವ ಕಥೆ ಇದಾಗಿದ್ದು ಗೌರ ಎನ್ನುವ ಹಸು ಕೂಡ ಇಲ್ಲಿ ಮುಖ್ಯ ಪಾತ್ರಧಾರಿ. ಚಿತ್ರದ ಟ್ರೈಲರ್ ಬಹಳ ಮಜವಾಗಿದ್ದು ಸಿನಿ ಪ್ರೇಮಿಗಳಿಗೆ ಕುತೂಹಲ ಹುಟ್ಟಿಸಿ ಎಲ್ಲಾ ವರ್ಗದ ಪ್ರೇಕ್ಷಕರ ಮನ ಗೆಲ್ಲುವ ವಿಶ್ವಾಸ ಮೂಡಿಸಿದೆ. “ವಲವಾರ” ಸಿನಿಮಾವನ್ನು ಈಗಾಗಲೇ ಶಿವಣ್ಣ ನೋಡಿ‌ ಬಹಳ ಮೆಚ್ಚುಗೆ ವ್ಯಕ್ತಪಡಿಸಿರುವುದು ಚಿತ್ರ ತಂಡಕ್ಕೆ ಹೊಸ ಹುರುಪು ನೀಡಿದೆ.

‘ಮಾರ್ಫ್ ಪ್ರೊಡಕ್ಷನ್ಸ್’ ಅಡಿಯಲ್ಲಿ ‘ತಯಾರಾಗಿರುವ “ವಲವಾರ” ಚಿತ್ರಕ್ಕೆ ಸುತನ್ ಗೌಡ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಕದ್ರಿ ಮಣಿಕಾಂತ್ ಸಂಗೀತ, ಪ್ರಮೋದ್‌ ಮರವಂತೆ ಸಾಹಿತ್ಯ ಬಾಲರಾಜ್‌ ಗೌಡ ಛಾಯಾಗ್ರಹಣ, ಶ್ರೀಕಾಂತ್ ಎಸ್.ಹೆಚ್ ಸಂಕಲನ, ವಿ.ಜಿ. ರಾಜನ್ ಅವರ ಶಬ್ಧ ವಿನ್ಯಾಸವಿದೆ. ಸಿಂಕ್ ಸೌಂಡ್ ತಂತ್ರಜ್ಞಾನ ಬಳಸಿಕೊಂಡಿರುವುದು ಚಿತ್ರದ ಮತ್ತೊಂದು ವಿಶೇಷ. ಪಾತ್ರ ವರ್ಗದಲ್ಲಿ ಮಾ||ವೇದಿಕ್ ಕೌಶಲ್, ಮಾ||ಶಯನ್, ಮಾಲತೇಶ್, ಹರ್ಷಿತಾ ಗೌಡ ಮತ್ತು ಅಭಯ್ ಮುಖ್ಯ ಪಾತ್ರದಲ್ಲಿ ನೈಜವಾಗಿ ನಟಿಸಿದ್ದಾರೆ.

Visited 1 times, 1 visit(s) today
error: Content is protected !!