Cini NewsSandalwood

ಶಿವರಾಜ್ ಕುಮಾರ್ ಹುಟ್ಟುಹಬ್ಬದ ಅಂಗವಾಗಿ “ಉತ್ತರಕಾಂಡ” ಫಸ್ಟ್ ಲುಕ್ ಬಿಡುಗಡೆ

Spread the love

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಚಿತ್ರ”ಉತ್ತರಕಾಂಡ” ಇದೀಗ ಬಹು ಬೇಡಿಕೆಯಲ್ಲಿದ್ದ ಲುಕ್ ಒಂದನ್ನು ಬಿಡುಗಡೆ ಮಾಡಿದೆ. ಕರುನಾಡ ಡಾ.ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿ ಎಲ್ಲೆಡೆ ಸದ್ದು ಮಾಡಿದೆ. “ಮಾಲೀಕ” ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಶಿವಣ್ಣ ತಮ್ಮ ಲುಕ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಪ್ರತಿ ಒಂದು ಪಾತ್ರದಲ್ಲೂ, ವಿಶಿಷ್ಟವಾಗಿ ಕಾಣುವ ಶಿವಣ್ಣ, ಇದೀಗ “ಉತ್ತರಕಾಂಡ”ದಲ್ಲೂ ತಮ್ಮ ಲುಕ್ ಮೂಲಕ ಎಲ್ಲರ ಮನೆ ಮಾತಾಗಿದ್ದಾರೆ‌.

ಬಹು ನಿರೀಕ್ಷಿತ ಚಿತ್ರ “ಉತ್ತರಕಾಂಡ” ಒಂದು ಆಕ್ಷನ್‌ ಡ್ರಾಮಾ ಚಿತ್ರವಾಗಿದ್ದು, ಇದು ರೋಹಿತ್‌ ಪದಕಿಯ ಕೃತಿಯಾಗಿದೆ. ಚಿತ್ರಕ್ಕೆ ಖ್ಯಾತ ಗಾಯಕ, ಸಂಯೋಜಕ ಅಮಿತ್‌ ತ್ರಿವೇದಿ ಸಂಗೀತ ಸಂಯೋಜನೆ ಮಾಡಿದ್ದು, ಅಧ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ. ಚಿತ್ರಕ್ಕೆ ವಿಶ್ವಾಸ್‌ ಕಶ್ಯಪ್‌ ಪ್ರೊಡಕ್ಷನ್‌ ವಿನ್ಯಾಸ ಮಾಡಿದ್ದು, ಅನಿಲ್ ಅನಿರುದ್ಧ್ ಮುಖ್ಯ ಸಂಕಲನಕಾರರಾಗಿರುತ್ತಾರೆ. ಕಾರ್ತಿಕ್‌ ಗೌಡ ಮತ್ತು ಯೋಗಿ ಜಿ ರಾಜ್‌ ಕೆ.ಆರ್.ಜಿ. ಸ್ಟೂಡಿಯೋಸ್‌ ಬ್ಯಾನರ್‌ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ.

ಬಹು ಪ್ರಮುಖ ತಾರಾಬಳಗವನ್ನು ಹೊಂದಿರುವ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ.ಶಿವರಾಜ್‌ ಕುಮಾರ್‌, ನಟರಾಕ್ಷಸ ಡಾಲಿ ಧನಂಜಯ, ಭಾವನಾ ಮೆನನ್‌, ಐಶ್ವರ್ಯ ರಾಜೇಶ್‌, ದಿಗಂತ್‌ ಮುಂತಾದವರು ಬಣ್ಣ ಹಚ್ಚಿದ್ದಾರೆ

Visited 1 times, 1 visit(s) today
error: Content is protected !!