ಮನುಷ್ಯರ ಜೀವದ ಜೊತೆ ಕ್ಲಿನಿಕಲ್ ಟ್ರಯಲ್ಸ್ ರಹಸ್ಯ “ದಿ ಟಾಸ್ಕ್” (ಚಿತ್ರವಿಮರ್ಶೆ -ರೇಟಿಂಗ್ : 4/5)
ಮನುಷ್ಯರ ಜೀವದ ಜೊತೆ ಕ್ಲಿನಿಕಲ್ ಟ್ರಯಲ್ಸ್ ರಹಸ್ಯ…
ರೇಟಿಂಗ್ : 4/5
ಚಿತ್ರ : ದಿ ಟಾಸ್ಕ್
ನಿರ್ದೇಶಕ : ರಾಘು ಶಿವಮೊಗ್ಗ
ನಿರ್ಮಾಪಕರು : ವಿಜಯ್ ಕುಮಾರ್, ರಾಮಣ್ಣ
ಸಂಗೀತ : ಜೂಡೋ ಸ್ಯಾಂಡಿ
ಛಾಯಾಗ್ರಹಣ : ಪ್ರದೀಪ್
ತಾರಾಗಣ : ಜಯಸೂರ್ಯ ಆರ್. ಅಜಾದ್ , ಸಾಗರ್ ರಾಮ್, ಬಾಲ ನಟಿ ಶ್ರೀಲಕ್ಷ್ಮಿ , ಅಚ್ಯುತ್ ಕುಮಾರ್, ಸಂಗೀತ ಭಟ್, ಗೋಪಾಲಕೃಷ್ಣ ದೇಶಪಾಂಡೆ, ಹರಿಣಿ ಶ್ರೀಕಾಂತ್, ಅರವಿಂದ್ ಕುಪ್ಳಿಕರ್, ಸಂಪತ್ ಮೈತ್ರಿಯಾ, ಬಾಲಾಜಿ ಮನೋಹರ್ , ರಾಘು ಶಿವಮೊಗ್ಗ ಹಾಗೂ ಮುಂತಾದವರು…
ಸಮಾಜದಲ್ಲಿ ನಡೆಯುತ್ತಿರುವ ಬಹಳಷ್ಟು ನಿಗೂಢತೆಗಳು ಕಣ್ಣಿಗೆ ಕಾಣದಂತೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಅದರಲ್ಲೂ ಮನುಷ್ಯನ ಆರೋಗ್ಯದಲ್ಲಿ ಏರುಪೇರಾದಾಗ ಔಷಧಿಯೇ ಮೂಲ ಮಂತ್ರ. ಅದಕ್ಕಾಗಿ ಔಷಧಿ ಪ್ರಯೋಗಗಳು ಪ್ರಾಣಿಗಳ ಮೇಲೆ ನಡೆದು ಯಶಸ್ವಿಯಾದ ನಂತರ ಮನುಷ್ಯರಿಗೆ ಸಿಗುತ್ತದೆ. ಇಂತದ್ದೇ ಒಂದು ಮನುಷ್ಯರ ಮೇಲೆ ನಡೆಯುವ ಪ್ರಯೋಗ , ಅದರ ಹಿಂದಿರುವ ಸತ್ಯತೆಗೆ ಹೋರಾಡುವ ಪ್ರಾಮಾಣಿಕರು , ಇದಕ್ಕೆ ಸಾತ್ ಕೊಡುವ ಹುಡುಗರಿಬ್ಬರ ಪರಿಶ್ರಮದ ಕಥಾನಕದೊಂದಿಗೆ ಕರಾಳ ಸತ್ಯದ ಟೆರಿಫಿಕ್ ಆಕ್ಷನ್ ಲೋಡೆಡ್ ಟಾಸ್ಕ್ ಈ ವಾರ ಪ್ರೇಕ್ಷಕರ ಮುಂದೆ ಬಂದಿದೆ. ಇವತ್ತಿನ ಸೋಶಿಯಲ್ ಮೀಡಿಯಾ ಎಲ್ಲಾ ವರ್ಗದ ಜನರಿಗೂ ಬಹಳ ಹತ್ತಿರವಾಗಿದ್ದು , ಪ್ರತಿ ವಿಚಾರವೂ ಬಹಳ ಬೇಗ ಮುಟ್ಟುತ್ತದೆ.
ಅಂತದ್ದೇ ಎಚ್ಚರಿಕೆ , ಉತ್ತಮ ಸಂದೇಶ , ಸಹಾಯ ಮಾಡುವ ಮೂಲಕ ಸಾಧನೆ ಮಾಡಿದ ಗಣ್ಯರಾದ ನಿವೃತ್ತ ಪೊಲೀಸ್ ಅಧಿಕಾರಿ ಎಲ್ ವೈ ರಾಜೇಶ್ (ಅಚ್ಚುತ್ ಕುಮಾರ್) , ಲಾಯರ್ ಪ್ರತಿಮಾ (ಸಂಗೀತ ಭಟ್) ಹಾಗೂ ಆಂಬುಲೆನ್ಸ್ ಡ್ರೈವರ್ ನಾಗೇಶ್ (ಅರವಿಂದ್ ಕುಪ್ಲಿಕರ್) ಅವರಿಗೆ ಸ್ಟಾರ್ ಆಫ್ ಸೋಶಿಯಲ್ ಮೀಡಿಯಾ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ. ತನ್ನ ಬದುಕಿಗಿಂತ ಜನರ ಸೇವೆ ಮುಖ್ಯ ಎನ್ನುವ ನಾಗೇಶ್ ಅನಾರೋಗ್ಯ , ಆಕ್ಸಿಡೆಂಟ್ ಆದವರನ್ನು ತನ್ನ ಅಂಬುಲೆನ್ಸ್ ಮೂಲಕ ಉಚಿತ ಸೇವೆ ಮಾಡುವ ಡಾಕ್ಟರ್ ಸೂರ್ಯ ಪ್ರಕಾಶ್ (ಬಾಲಾಜಿ ಮನೋಹರ್) ರವರ ಸಂಜೀವಿನಿ ಹಾಸ್ಪಿಟಲ್ ಗೆ ಸೇರಿಸುವ ನಿರಂತರ ಸೇವೆಯನ್ನ ಮಾಡುತ್ತಾನೆ.
ಆದರೆ ಕೋವಿಡ್ ಎಫೆಕ್ಟ್ ಅನ್ನು ಮೂಲ ಅಸ್ತ್ರವಾಗಿ ಮಾಡಿಕೊಂಡು ನಡೆಯುವ ಕರಾಳ ಸತ್ಯ ನಾಗೇಶ್ ಗೆ ತಿಳಿಯುತ್ತದೆ. ಡಾಕ್ಟರ್ ಸೂರ್ಯ ಪ್ರಕಾಶ್ ತನ್ನ ಹಾಸ್ಪಿಟಲ್ ರೆಪ್ಯುಟೇಷನ್ ಗಾಗಿ ಬೇರೆ ಪ್ಲಾನ್ ನಡುವೆ ನಾಗೇಶ್ ಆತ್ಮಹತ್ಯೆ ಎಂಬ ವಿಚಾರ ಹೊರಬರುತ್ತದೆ. ಆದರೆ ಇದರ ಸತ್ಯದ ಕಣ್ಣು ಸಿರಿ (ಬೇಬಿ ಶ್ರೀ ಲಕ್ಷ್ಮಿ) ಗೆ ಗೊತ್ತಿರುತ್ತದೆ.
ಮಡಿಕೇರಿಯಲ್ಲಿ ಓದುತ್ತಿರುವ ಸಿರಿ ಸಾಮಾಜಿಕ ಜಾಲತಾಣದ ಮೂಲಕ ಲಾಯರ್ ಪ್ರತಿಮಾಗೆ ವಿಷಯ ತಿಳಿಸುತ್ತಾಳೆ. ಮುಂದೆ ಇದು ನಿವೃತ್ತ ಅಧಿಕಾರಿ ಎಲ್ ವೈ ರಾಜೇಶ್ ಗಮನಕ್ಕೆ ಬರುತ್ತದೆ. ಇನ್ನು ವಿದ್ಯಾರ್ಥಿ ಜೀವನದಲ್ಲಿ ಹಾಸ್ಟೆಲ್ ವಾರ್ಡನ್ ಜೊತೆ ಹೊಡೆದಾಡಿಕೊಂಡು ಜೈಲು ಸೇರಿದ ಕಂಠಿ (ಜಯಸೂರ್ಯ. ಆರ್. ಆಜಾದ್) ಹಾಗೂ ವಿಷ್ಣು( ಸಾಗರ್ ರಾಮ್) ಮನಃಪರಿವರ್ತನಾ ಕೇಂದ್ರದಲ್ಲಿ ರಿಟೈರ್ಡ್ ಪೊಲೀಸ್ ಅಧಿಕಾರಿ ಎಲ್ ವೈ ರಾಜೇಶ್ ಮಾರ್ಗದರ್ಶನದಲ್ಲಿ ಬದುಕು ಇವರಿಬ್ಬರಿಗೆ ಸತ್ಯ ತಿಳಿದಿರುವ ಸಿರಿಯನ್ನ ಕರೆತರಲು ಜವಾಬ್ದಾರಿ ನೀಡುತ್ತಾರೆ.
ಇನ್ನು ಸಿರಿಯನ್ನ ಗೋಪ್ಯವಾಗಿ ಕಾಪಾಡಿಕೊಳ್ಳುವ ತಂದೆ ತಾಯಿಯ ಮಧ್ಯ ಕಿಡ್ನಾಪ್ ಚೇಸಿಂಗ್ , ಹೊಡೆದಾಟ ನಡೆಯುತ್ತದೆ. ಇದೇ ಊರಿನ ಕ್ರೂರ ವ್ಯಕ್ತಿ ಬರಮಪ್ಪ (ರಾಘು ಶಿವಮೊಗ್ಗ) ಹಣ , ಹೆಣ್ಣು ಸಿಕ್ಕರೆ ಬಿಡುವ ಮನುಷ್ಯನೆಲ್ಲ. ಅಫ್ತಾ ಪಡೆಯುವ ಬರಮಪ್ಪ ಹುಡುಗಿಯನ್ನು ಕೊಲ್ಲಲು ನಿರ್ಧಾರ ಮಾಡುತ್ತಾನೆ. ಮುಂದೆ ಎದುರಾಗುವ ರೋಚಕ ತಿರುವುಗಳು ಕೊನೆಯ ಹಂತವನ್ನು ತಲುಪುತ್ತದೆ.
ಸಿರಿ ನೋಡಿದ ಸತ್ಯ ಏನು…
ಕ್ಲಿನಿಕಲ್ ಟ್ರಯಲ್ಸ್ ಗುಟ್ಟು…
ಹುಡುಗರ ಕೆಲಸ ಕೈಗೂಡುತ್ತಾ…
ಟಾಸ್ಕ್ ಏನಾಗುತ್ತೆ…
ಇದೆಲ್ಲದರ ಸತ್ಯ ತಿಳಿಯಬೇಕಾದರೆ ಒಮ್ಮೆ ಈ ಚಿತ್ರವನ್ನು ನೋಡಬೇಕು.
ಒಂದು ನಿಗೂಢ ಸತ್ಯದ ಬಗ್ಗೆ ಬೆಳಕು ಚೆಲ್ಲಿರುವಂತಹ ನಿರ್ದೇಶಕರ ಆಲೋಚನೆ ಮೆಚ್ಚುವಂಥದ್ದು , ಮನುಷ್ಯರ ಮೇಲೆ ನಡೆಯುವ ಕ್ಲಿನಿಕಲ್ ಟ್ರಯಲ್ಸ್ , ತಂದೆ ತಾಯಿಯ ಪರದಾಟ , ಗೆಳೆಯರ ದೃಢ ನಿರ್ಧಾರ , ಸತ್ಯದ ಅನಾವರಣಕ್ಕಾಗಿ ಮಾಡುವ ಸಾಹಸ ಎಲ್ಲವೂ ಕುತೂಹಲಕಾರಿಯಾಗಿ ತೆರೆ ಮೇಲೆ ಕಾಣುತ್ತದೆ.
ಚಿತ್ರಕಥೆಯಲ್ಲಿ ಇನ್ನಷ್ಟು ವೇಗ ಮಾಡಿದರೆ ಚೆನ್ನಾಗಿರುತ್ತಿತ್ತು. ನಿರ್ದೇಶಕ ರಾಘು ಶಿವಮೊಗ್ಗ ಕ್ರೂರ ಪಾತ್ರಕ್ಕೆ ಜೀವ ತುಂಬಿ ಗಮನ ಸೆಳೆಯುವಂತೆ ನಟಿಸಿದ್ದಾರೆ. ಇಂತಹ ವಿಭಿನ್ನ ಕಥೆಗೆ ಹಣ ಹಾಕಿರುವ ನಿರ್ಮಾಪಕರ ಧೈರ್ಯವನ್ನು ಮೆಚ್ಚಲೇಬೇಕು. ಇನ್ನು ಚಿತ್ರದ ಹಿನ್ನೆಲೆ ಸಂಗೀತ ಉತ್ತಮವಾಗಿ ಮೂಡಿ ಬಂದಿದ್ದು , ಛಾಯಾಗ್ರಹಕರ ಕೈಚಳಕವೂ ಕೂಡ ಸೊಗಸಾಗಿದೆ. ಅದೇ ರೀತಿ ಸಾಹಸ ಸನ್ನಿವೇಶವು ಅದ್ಭುತವಾಗಿ ಮೂಡಿಬಂದಿದೆ.
ತಾಂತ್ರಿಕವಾಗಿ ತಂಡ ಬಹಳಷ್ಟು ಶ್ರಮ ಶ್ರಮಪಟ್ಟಿದ್ದಾರೆ. ಇನ್ನು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಯುವ ನಟ ಜಯಸೂರ್ಯ ಆರ್ ಆಜಾದ್ ನಾಯಕನಾಗಿ ಪ್ರಥಮ ಪ್ರಯತ್ನದಲ್ಲಿ ಬಹಳ ಶ್ರಮ ಪಟ್ಟು ಪಾತ್ರಕ್ಕೆ ನ್ಯಾಯ ನೀಡಿದ್ದಾರೆ. ಅದರಲ್ಲೂ ಆಕ್ಷನ್ ಸನ್ನಿವೇಶವನ್ನು ಅದ್ಭುತವಾಗಿ ನಿಭಾಯಿಸಿದ್ದು , ಇನ್ನಷ್ಟು ಪರಿಪಕ್ವತೆ ಮಾಡಿಕೊಂಡರೆ ಉತ್ತಮ ಭವಿಷ್ಯವಿದೆ. ಅದೇ ರೀತಿ ಮತ್ತೊಬ್ಬ ನಟ ಸಾಗರ್ ರಾಮ ಕೂಡ ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಆಕ್ಷನ್ ಸನ್ನಿವೇಶಕ್ಕೂ ಸೈ ಎಂದಿದ್ದಾರೆ.
ಇನ್ನು ಮುದ್ದಾದ ಹುಡುಗಿ ಶ್ರೀ ಲಕ್ಷ್ಮಿ ಕೂಡ ಬಹಳ ಅದ್ಭುತವಾಗಿ ಪಾತ್ರವನ್ನು ನಿರ್ವಹಿಸಿದ್ದು , ಎದ್ದು ಬಿದ್ದು ಕಷ್ಟಪಟ್ಟಿರೋದು ತೆರೆಯ ಮೇಲೆ ಕಾಣುತ್ತದೆ. ಇನ್ನು ಉಳಿದಂತೆ ಬಾಲಾಜಿ ಮನೋಹರ್ , ಅಚ್ಯುತ್ ಕುಮಾರ್, ಸಂಗೀತ ಭಟ್ , ಗೋಪಾಲಕೃಷ್ಣ ದೇಶಪಾಂಡೆ , ಹರಿಣಿ ಶ್ರೀಕಾಂತ್ , ಭರತ್ ಜಿಬಿ ಸೇರಿದಂತೆ ಎಲ್ಲಾ ಕಲಾವಿದರು ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದ್ದಾರೆ. ಒಟ್ಟಾರೆ ಒಂದು ಜಾಗೃತಿ ಮೂಡಿಸುವ ವಿಚಾರದೊಂದಿಗೆ ಆಕ್ಷನ್ , ಥ್ರಿಲ್ಲರ್ ಕಥನ ಕವಾಗಿದ್ದು , ಎಲ್ಲರೂ ಒಮ್ಮೆ ನೋಡುವಂತಿದೆ.