Cini NewsSandalwoodUncategorized

‘ತಾಯವ್ವ’ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಹಿರಿಯ ನಟ ಪ್ರಣಯ ರಾಜ ಶ್ರೀನಾಥ್.

ಚಂದನವನದಲ್ಲಿ ಮತ್ತೊಂದು ಮನಮುಟ್ಟುವಂತಹ ಕಥಾನಕವಾಗಿ ಹೆಣ್ಣನ್ನು ಉಳಿಸಿ, ಹೆಣ್ಣನ್ನು ಬೆಳೆಸಿ ಎಂಬ ಅರ್ಥಪೂರ್ಣ ಸಂದೇಶದೊಂದಿಗೆ ನಿರ್ಮಾಣವಾಗುತ್ತಿರುವಂತಹ ಚಿತ್ರ “ತಾಯವ್ವ”. ಇತ್ತೀಚಿಗೆ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ರೇಣುಕಾಂಬ ಸ್ಟುಡಿಯೋನಲ್ಲಿ ಆಯೋಜನೆಗೊಂಡಿದ್ದು , ಈ ಒಂದು ಕಾರ್ಯಕ್ರಮಕ್ಕೆ ಹಿರಿಯ ನಟ ಪ್ರಣಯರಾಜ ಶ್ರೀನಾಥ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೈಲರ್ ಬಿಡುಗಡೆ ಮಾಡಿದರು , ಇನ್ನೂ ಪದ್ಮಶ್ರೀ ಪುರಸ್ಕೃತೆ ಡಾಕ್ಟರ್ ಕಾಮಿನಿ. ಎ .ರಾವ್ , ಲಹರಿ ಸಂಸ್ಥೆಯ ಮುಖ್ಯಸ್ಥ ವೇಲು ಸೇರಿದಂತೆ ಹಲವು ಡಾಕ್ಟರ್ಸ್ ಹಾಗೂ ಅತಿಥಿ ಗಣ್ಯರು ಆಗಮಿಸಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದರು. ಕಮರ್ಷಿಯಲ್ ಸಿನಿಮಾಗಳ ಅಬ್ಬರದ ನಡುವೆಯೇ ಒಳ್ಳೊಳ್ಳೆ ಕಂಟೆಂಟ್ ಚಿತ್ರವಾಗಿ ಈ ತಾಯವ್ವ ಬರುತ್ತಿದ್ದು , ಸೂಲಗಿತ್ತಿ ಸುತ್ತ ಸಾಗುವ ಕಥೆಯಾಗಿದೆ.

ಇನ್ನು ಹಿರಿಯ ನಟ ಪ್ರಣಯರಾಜ ಶ್ರೀನಾಥ್ ಮಾತನಾಡುತ್ತಾ ಈ ತಾಯವ್ವ ಶೀರ್ಷಿಕೆ ಬಹಳ ವಿಶೇಷ. ತಾಯಿ ಇಲ್ಲದೆ ಜನ್ಮವಿಲ್ಲ , ಜೀವನವಿಲ್ಲ ನನ್ನ ಪ್ರಕಾರ. ನಮ್ಮ ಕಾಲದಲ್ಲಿ ಅಮ್ಮನ ಮಡಿಲಿನಿಂದ ಹೊರಬರಲು ಕಾರಣವಾದದ್ದೆ ಸೂಲಗಿತ್ತಿಯ ಹಾರೈಕೆಯಿಂದ. ಅವರೇ ನಮಗೆ ದೈವ , ಡಾಕ್ಟರ್ಸ್. ಈಗಿನ ಆಧುನಿಕತೆಯಲ್ಲಿ ಪ್ರಸೂತಿ , ವೈದಿಕೀಯ ಕ್ಷೇತ್ರವೇ ಹೊಸ ರೂಪ ಪಡೆದುಕೊಂಡಿದೆ. ಅದರಲ್ಲೂ ನನ್ನ ಪಕ್ಕ ಇಬ್ಬರು ತಾಯವ್ವ ಇದ್ದಾರೆ. ಒಂದು ನನ್ನ ಆತ್ಮೀಯರು , ಬಹಳ ವರ್ಷದ ಸ್ನೇಹಿತೆ ಡಾಕ್ಟರ್ ಕಾಮಿನಿ ರಾವ್ ಸಾವಿರಾರು ದಂಪತಿಗಳ ಮಕ್ಕಳ ಜನ್ಮಕ್ಕೆ ಕಾರಣರಾದವರು. ಇವರ ಸಲಹೆ , ಮಾರ್ಗದರ್ಶನದಿಂದ ಬಹಳಷ್ಟು ಕುಟುಂಬಗಳು, ಮಕ್ಕಳು ನೆಮ್ಮದಿಯಾಗಿದ್ದಾರೆ. ಹಾಗೆಯೇ ಮತ್ತೊಬ್ಬರು ಈ ಚಿತ್ರದ ನಟಿ, ನಿರ್ಮಾಪಕಿ ಗೀತಪ್ರಿಯ ಇವರು 40 ವರ್ಷಗಳಿಂದ ವಿದ್ಯಾ ಸಂಸ್ಥೆಯನ ನಡೆಸುತ್ತಿದ್ದು , ಈ ಚಿತ್ರದಲ್ಲಿ ತಾಯವ್ವ ಪಾತ್ರ ಮಾಡಿ, ಸೂಲಗಿತ್ತಿಯ ಸೇವೆ ಎಷ್ಟು ಪ್ರಮುಖವಾಗಿತ್ತು ಎಂಬುದನ್ನು ಈ ಚಿತ್ರದ ಮೂಲಕ ತೋರಿಸಿದ್ದಾರೆ ಅನ್ಸುತ್ತೆ , ಜನರಿಗೆ ಸದಾ ಒಂದು ಉತ್ತಮ ಚಿತ್ರಗಳನ್ನು ನೀಡುವ ಹಾದಿಯಲ್ಲಿ ಸಾಗಲಿ. ನನಗೆ ನಿರ್ಮಾಪಕ ಬಾ.ಮ. ಹರೀಶ್ ಈ ಒಂದು ಕಾರ್ಯಕ್ರಮಕ್ಕೆ ಬರಬೇಕು ಎಂದು ಕೇಳಿದರು , ಹಾಗಾಗಿ ನಾನು ಬಂದೆ. ಇಲ್ಲಿಗೆ ಬಂದ ಮೇಲೆ ಬಹಳ ಸಂತೋಷವಾಯಿತು ನನ್ನ ಒಂದಷ್ಟು ಸ್ನೇಹಿತರನ್ನು ಭೇಟಿ ಮಾಡಿದೆ. ಇಡೀ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು.

ಇನ್ನು ಡಾಕ್ಟರ್ ಕಾಮಿನಿ ರಾವ್ ಮಾತನಾಡುತ್ತಾ ಈ ತಂಡ ಆಯ್ಕೆ ಮಾಡಿಕೊಂಡಿರುವ ಕಥೆಯೇ ಬಹಳ ಇಷ್ಟವಾಯಿತು. ಇದು ನ್ಯಾಚುರಲ್ ಚಿತ್ರ ಅನ್ಸುತ್ತೆ. ಸೂಲುಗಿತ್ತಿ ನಾರ್ಮಲ್ ಡೆಲಿವರಿ ಮಾಡುತ್ತಿದ್ದರು. ಹಳ್ಳಿಗಳಿಗೆ ಇವರೇ ಫ್ಯಾಮಿಲಿ ಡಾಕ್ಟರ್. ನಮ್ಮ ದೇಶದ ಗ್ರಾಮೀಣ ಭಾಗದ ಬೆನ್ನೆಲುಬಾಗಿ ಇದ್ದವರು ಇವರೇ ಎಂದು ಹೇಳಬಹುದು. ಇತ್ತೀಚಿನ ಕಾರ್ಪೊರೇಟ್ ಹಾಸ್ಪಿಟಲ್ ಗಳು ಬಂದು ಬದಲಾವಣೆ ಕಾಣುತ್ತಾ ಸಾಗಿದೆ. ನನ್ನ ಕ್ಷೇತ್ರದಲ್ಲಿ ನಾನು ಏನೆಲ್ಲಾ ಸೇವೆ ಮಾಡಬೇಕು ಅದನ್ನ ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದ್ದೇನೆ. ಅದಕ್ಕೆ ಒಳ್ಳೆಯ ಪ್ರತಿಫಲ , ಗೌರವವು ಸಿಕ್ಕಿದೆ. ಈ ಚಿತ್ರದ ನಿರ್ಮಾಪಕಿ ಗೀತಾ ನನ್ನ ಸಂಬಂಧಿ ಅನುವದಕ್ಕಿಂತ ಚಡ್ಡಿ ದೋಸ್ತ್ ಅನ್ನಬಹುದು. ಒಂದು ದೊಡ್ಡ ವಿದ್ಯಾಸಂಸ್ಥೆ ನಡೆಸುತ್ತಿದ್ದರೂ ಜನರಿಗೆ ಒಂದು ಉತ್ತಮ ಚಿತ್ರ ನೀಡುವ ಉದ್ದೇಶದಿಂದ ನಿರ್ಮಿಸಿ , ಅವರೇ ನಟಿಸಿದ್ದಾರೆ. ಈ ಚಿತ್ರ ಯಶಸ್ವಿಯಾಗಲಿ ನಮ್ಮ ಕಡೆಯಿಂದ ಏನೆಲ್ಲಾ ಸಹಕಾರ ನೀಡಬೇಕು ಅದನ್ನ ನೀಡುತ್ತೇವೆ ಎಂದು ಹೇಳಿದರು. ಹಾಗೆಯೇ ಲಹರಿ ಸಂಸ್ಥೆಯ ಮುಖ್ಯಸ್ಥ ವೇಲು ಮಾತನಾಡುತ್ತಾ ಕೃಪಾನಿಧಿ ವಿದ್ಯಾಸಂಸ್ಥೆ ನಡೆಸುತ್ತಿರುವ ಗೀತಪ್ರಿಯ ರವರು ಚಿತ್ರದ್ಯಮಕ್ಕೆ ಬರುತ್ತಿರುವುದು ಬಹಳ ಖುಷಿಯಾಗಿದೆ. ಅದರಲ್ಲೂ ಒಂದು ಅರ್ಥಪೂರ್ಣ ಉತ್ತಮ ಚಿತ್ರವನ್ನು ನಿರ್ಮಿಸಿ ಜೊತೆಯಲ್ಲಿ ಅಭಿನಯಿಸಿರುವುದು ವಿಶೇಷ. ಈ ತಾಯವ್ವ ಚಿತ್ರ ಎಲ್ಲರ ಪ್ರೀತಿಯನ್ನು ಗಳಿಸಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

 

ಈ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಗೀತಪ್ರಿಯ ಮಾತನಾಡುತ್ತಾ ನಾನು ಈ ಸಿನಿಮಾಗೆ ಬರೋದಕ್ಕೆ ಕಾರಣ ನಮ್ಮ ಆತ್ಮೀಯರಾದ ನಿರ್ಮಾಪಕ ಭಾ.ಮ .ಹರೀಶ್ ಹಾಗೂ ಪದ್ಮಾವತಿ ಚಂದ್ರಶೇಖರ್. ಯಾಕಂದ್ರೆ ಇದೊಂದು ಒಳ್ಳೆ ಕಂಟೆಂಟ್ ಇರುವ ಸಬ್ಜೆಕ್ಟ್ ಈ ಚಿತ್ರವನ್ನ ಮಾಡೋಣ ಎಂದರು ಹಾಗಾಗಿ ನಾನು ಮುಂದಾದೆ. ಈ ಚಿತ್ರದಲ್ಲಿ ಬಹಳಷ್ಟು ಕಲ್ತಿದ್ದೇನೆ. ಚಿತ್ರೀಕರಣದ ಅನುಭವ ಬಹಳ ಖುಷಿಯಾಗಿದೆ. ನನಗೆ ಸಪೋರ್ಟ್ ಮಾಡಲು ಬಂದ ಎಲ್ಲರಿಗೂ ಧನ್ಯವಾದಗಳು ತಿಳಿಸುತ್ತೇನೆ ನಮ್ಮ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ ನಿಮ್ಮೆಲ್ಲರ ಸಹಕಾರ ಇರಲಿ ಎಂದು ಕೇಳಿಕೊಂಡರು.


ಈ ಚಿತ್ರದ ಸಹ ನಿರ್ಮಾಪಕಿ ಯಾದ ಪದ್ಮಾವತಿ ಚಂದ್ರಶೇಖರ್ ಮಾತನಾಡುತ್ತಾ ಈ ಚಿತ್ರದ ಸಬ್ಜೆಕ್ಟ್ ಬಹಳ ವಿಶೇಷ. ಹಾಗಾಗಿ ನಾನು ಮೇಡಂ ಗೆ ಈ ಕಥೆ ಬಗ್ಗೆ ಹೇಳಿದೆ , ಅವರು ಇಷ್ಟಪಟ್ಟರು ಅಂದುಕೊಂಡಂತೆ ಸಿನಿಮಾ ಬಂದಿದೆ ನಿಮ್ಮೆಲ್ಲರ ಸಪೋರ್ಟ್ ಇರಲಿ ಎಂದರು. ಇನ್ನು ಇಡೀ ಚಿತ್ರತಂಡದ ಬೆನ್ನೆಲುಬಾಗಿ ನಿಂತಿರುವ ಭಾಮ ಹರೀಶ್ ಮಾತನಾಡುತ್ತಾ , ಸಿನಿಮಾ ಬಹಳ ಚೆನ್ನಾಗಿ ಬಂದಿದೆ. ನಾನು ಚಿತ್ರೀಕರಣಕ್ಕೆ ಹೋದಾಗ ನಮ್ಮ ಗೀತಪ್ರಿಯ ಮೇಡಂ ರವರು ಬಹಳ ಶಿಸ್ತಾಗಿ ಚಿತ್ರಿಕರಣದಲ್ಲಿ ಭಾಗಿಯಾಗುತ್ತಿದ್ದರು, ನಾನು ಇಲ್ಲದಿದ್ದಾಗ ಬಹಳ ಜಾಲಿಯಾಗಿ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದರಂತೆ. ತಂಡ ಬಹಳ ಖುಷಿಯಿಂದ ಕೆಲಸ ಮಾಡಿದೆ. ಹಾಗೆ ಈ ಚಿತ್ರದಲ್ಲಿ ಹಾಡನ್ನು ಗೀತಪ್ರಿಯ ಅವರೇ ಹಾಡಿದ್ದಾರೆ. ನಮ್ಮ ತಂಡಕ್ಕೆ ಈಗಾಗಲೇ ಕಿಚ್ಚ ಸುದೀಪ್ , ನಟಿ ಉಮಾಶ್ರೀ , ಶಾಸಕ ಆರ್. ಅಶೋಕ್ , ಹಿರಿಯ ನಟ ಪ್ರಣಯರಾಜ ಶ್ರೀನಾಥ್ , ಡಾಕ್ಟರ್ ಕಾಮಿನಿ. ಕೆ .ರಾವ್ ಸೇರಿದಂತೆ ಹಲವಾರು ಗಣ್ಯರು ನಮ್ಮ ತಂಡಕ್ಕೆ ಸಾತ್ ನೀಡಿದ್ದಾರೆ. ಚಿತ್ರ ಸದ್ಯದಲ್ಲೇ ಬಿಡುಗಡೆ ಆಗಲಿದೆ. ನಿಮ್ಮೆಲ್ಲರ ಸಹಕಾರ ಇರಲಿ ಎಂದು ಕೇಳಿಕೊಂಡರು. ಈ ಚಿತ್ರವನ್ನು ಸಾತ್ವಿಕ್ ಪವನ್ ಕುಮಾರ್ ನಿರ್ದೇಶನದ ಜೊತೆಗೆ ಛಾಯಾಗ್ರಹಣ ಜವಾಬ್ದಾರಿ ಕೂಡ ನಿಭಾಯಿಸಿದ್ದಾರೆ. ಪಿ.ಶೇಷಗಿರಿ ಕಥೆ ಚಿತ್ರಕಥೆ ಸಂಭಾಷಣೆ ಬರೆದಿರುವ ತಾಯವ್ವನಿಗೆ ಅನಂತ್ ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ. ಹಾಗೆಯೇ ಚಿತ್ರದ ಟೈಟಲ್ ಹಾಡನ್ನು ಅವರೇ ಹಾಡಿದ್ದಾರೆ. ತಾಯವ್ವ ಚಿತ್ರದ ಮೂಲಕ ಗೀತಪ್ರಿಯ ಚಿತ್ರರಂಗ ಪರಿಯಚವಾಗುತ್ತಿದ್ದು, ಉಳಿದಂತೆ ರಂಗಭೂಮಿ ಕಲಾವಿದರು ನಟಿಸಿದ್ದಾರೆ. ಚಿತ್ರ ಅಂದುಕೊಂಡಂತೆ ಬಂದಿದ್ದು , ವೀಕ್ಷಕರೆ ಮುಂದೆ ತಾಯವ್ವ ಅತಿ ಶೀಘ್ರದಲ್ಲಿ ಬರಲಿದೆ.

error: Content is protected !!