Cini News

ನಿರ್ದೇಶಕ ತರುಣ್ ಹಾಗೂ ನಟಿ ಸೋನಾಲ್ ವಿವಾಹಕ್ಕೆ ಡೇಟ್ ಫಿಕ್ಸ್.

Spread the love

ಬಣ್ಣದ ಬದುಕಿನ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಮತ್ತೊಂದು ಜೋಡಿ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮೊಂಟೀರಿಯೋ ಕೆಲವು ತಿಂಗಳ ಹಿಂದೆ ಇವರೊಬ್ಬರ ಮದುವೆ ವಿಚಾರ ಭಾರಿ ಸದ್ದನ್ನ ಮಾಡಿದ್ದು, ಅದಕ್ಕೊಂದು ಅಂತಿಮ ತೆರೆಯನ್ನು ಈ ಜೋಡಿ ಎಳೆದಿದ್ದಾರೆ. ವಿಶೇಷವಾಗಿ ಸ್ಪೆಷಲ್ ವಿಡಿಯೋ ಮೂಲಕ ಮದುವೆಯ ಸಿಹಿ ಸುದ್ದಿ ಹಂಚಿಕೊಂಡ ತರುಣ್ ಹಾಗೂ ಸೋನಾಲ್ ಹನೆಮಣೆ ಏರಲಿದ್ದಾರೆ.

ಸ್ಯಾಂಡಲ್ವುಡ್ ಸ್ಟಾರ್ ಡೈರೆಕ್ಟರ್ ತರುಣ್ ಹಾಗೂ ಸ್ಟಾರ್ ನಟಿ ಸೋನಾಲ್ ಆಗಸ್ಟ್ 10ರಂದು ರಿಸೆಪ್ಶನ್ ಹಾಗೂ 11ರಂದು ದಾಂಪತ್ಯ ಜೀವನಕ್ಕೆ ಬೆಂಗಳೂರಿನ ಕೆಂಗೇರಿ ಬಳಿ ಇರೋ ಪೂರ್ಣಿಮಾ ಕನ್ವೆಷನ್ ಹಾಲ್ ನಲ್ಲಿ ನಡೆಯಲಿದೆ. ಮತ್ತೊಂದು ಅದ್ದೂರಿ ಮದುವೆಯನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು , ಅದೇ ರೀತಿ ಚಿತ್ರೋದ್ಯಮದಲ್ಲೂ ಕೂಡ ಸಂಭ್ರಮದ ಮನೆ ಮಾಡಲಿದೆ.

Visited 1 times, 1 visit(s) today
error: Content is protected !!