Cini NewsSandalwood

ನಿರ್ಮಾಪಕ ಎಂ. ರಮೇಶ್ ರೆಡ್ಡಿ ಸುಪುತ್ರಿ ತೇಜಸ್ವಿನಿ ರಮೇಶ್ ಹಾಗೂ ಕಾರ್ತಿಕ್ ರೆಡ್ಡಿ ಆರತಕ್ಷತೆ ಸಮಾರಂಭ

Spread the love

ಫೋಟೋಸ್ : ಕೆ. ಎನ್. ನಾಗೇಶ್ ಕುಮಾರ್
ಚಂದನವನದಲ್ಲಿ ಮತ್ತೊಂದು ಅದ್ದೂರಿ ಮದುವೆಯ ಆರತಕ್ಷತೆ ಹಾಗೂ ಬೀಗರ ಔತಣ ಕೂಟದ ಸಮಾರಂಭ ನೆರವೇರಿದೆ. ಸಾಮಾನ್ಯವಾಗಿ ನಟ , ನಟಿಯರ ಕುಟುಂಬಗಳ ಮದುವೆ ಕಾರ್ಯಕ್ರಮ ಗಮನ ಸೆಳೆಯುವುದು ಸರ್ವೇ ಸಾಮಾನ್ಯ. ಆ ನಿಟ್ಟಿನಲ್ಲಿ ಪಡ್ಡೆ ಹುಲಿ , 100, ಉಪ್ಪು ಹುಳಿ ಖಾರ , ನಾತಿಚರಾಮಿ , ಗಾಳಿಪಟ – 2, ಸೇರಿದಂತೆ ಬಿಡುಗಡೆಗೆ ಸಿದ್ಧವಿರುವ 45 ಚಿತ್ರದ ಹೆಸರಾಂತ ಖ್ಯಾತ ನಿರ್ಮಾಪಕ ಎಂ. ರಮೇಶ್ ರೆಡ್ಡಿ , ಶ್ರೀಮತಿ ಎಸ್. ಉಮಾ ಅವರ ಸುಪುತ್ರಿ ತೇಜಸ್ವಿನಿ ರಮೇಶ್ ಹಾಗೂ ಡಿ. ಚಂದ್ರಶೇಖರ್ ರೆಡ್ಡಿ ಹಾಗೂ ಶ್ರೀಮತಿ ಎಲ್. ಅನಿತಾ ರವರ ಸುಪುತ್ರ ಕಾರ್ತಿಕ್ ರೆಡ್ಡಿ .ಸಿ ಅವರ ಮದುವೆಯ ಆರತಕ್ಷತೆ ಬೆಂಗಳೂರಿನ ಅರಮನೆ ಆವರಣದಲ್ಲಿರುವ ಗಾಯಿತ್ರಿ ವಿಹಾರ್ ನಲ್ಲಿ ಅದ್ದೂರಿಯಾಗಿ ನೆರವೇರಿತು.

ಈ ಒಂದು ಸಮಾರಂಭಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ , ಮದರಂಗಿ ಕೃಷ್ಣ , ದಿಗಂತ್, ನಿರ್ದೇಶಕ ಯೋಗರಾಜ್ ಭಟ್ , ಗುರುದೇಶ್ ಪಾಂಡೆ , ನಿರ್ಮಾಪಕ ಉಮಾಪತಿ , ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸೇರಿದಂತೆ ಚಿತ್ರೋದ್ಯಮದ ನಿರ್ಮಾಪಕರು, ನಿರ್ದೇಶಕರು , ವಿ , ಹಂಚಿಕೆದಾರರು , ಹಿತೈಷಿಗಳು ಸೇರಿದಂತೆ ಕುಟುಂಬದ ಸದಸ್ಯರು ಆಗಮಿಸಿ ನೂತನ ಜೋಡಿಗೆ ಶುಭವನ್ನ ಹಾರೈಸಿದರು . ಅದ್ದೂರಿ ಸಮಾರಂಭದ ನಡುವೆಯೇ ಸಂಗೀತದ ರಸಮಂಜರಿ ಕಾರ್ಯಕ್ರಮವು ಕೂಡ ವಿಶೇಷವಾಗಿತ್ತು.

Visited 1 times, 1 visit(s) today
error: Content is protected !!