Cini NewsSandalwood

ಗೆಲುವಿನ ಸಂಭ್ರಮದಲ್ಲಿ “ಸೂತ್ರಧಾರಿ” ಚಿತ್ರತಂಡ

ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ನವರಸನ್‌ ನಿರ್ಮಾಣ‌ ಮಾಡಿರುವ,‌ ಕಿರಣ್ ಕುಮಾರ್ ನಿರ್ದೇಶನದಲ್ಲಿ ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ “ಸೂತ್ರಧಾರಿ” ಚಿತ್ರ ಮೇ 9 ರಂದು ಬಿಡುಗಡೆಯಾಗಿತ್ತು. ಮೊದಲ ದಿನದಿಂದಲೇ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿರುವ ಈ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಂತಸವನ್ನು ಹಂಚಿಕೊಳ್ಳಲು ಆಯೋಜಿಸಲಾಗಿದ್ದ ಸಕ್ಸಸ್ ಮೀಟ್ ನಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ಮೊದಲು ಮಾತನಾಡಿದ ನಿರ್ಮಾಪಕ ನವರಸನ್, ಕಳೆದವಾರ ಬಿಡುಗಡೆಯಾದ “ಸೂತ್ರಧಾರಿ” ಚಿತ್ರವನ್ನು ಕನ್ನಡ ಜನತೆ ಸ್ವಾಗತಿಸಿದ ರೀತಿ ಕಂಡು ಖುಷಿಯಾಗಿದೆ. ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ಚಿತ್ರವಾದರೂ, ಅವರ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಮ್ಮ ಚಿತ್ರವನ್ನು ಮಲ್ಟಿಪ್ಲೆಕ್ಸ್ ಗಳಲ್ಲಿ ಹೆಚ್ಚಿನ ಜನರು ನೋಡುತ್ತಿದ್ದಾರೆ. ಈ ಯಶಸ್ಸಿಗೆ ಕಾರಣರಾದ ಮಾಧ್ಯಮದವರಿಗೆ, ಪ್ರೇಕ್ಷಕರಿಗೆ ಹಾಗೂ ನನ್ನ ಚಿತ್ರತಂಡಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು.

ಮೊದಲ ಪ್ರದರ್ಶನಕ್ಕೂ ಮುನ್ನ ಅಣ್ಣಮ್ಮನ ದೇವಸ್ಥಾನಕ್ಕೆ ಹೋದೆ. ಅಲ್ಲಿ ನನ್ನನ್ನು ಗರ್ಭಗುಡಿ ಒಳಗೆ ಕರೆದರು. ಬೆಂಗಳೂರಿಗೆ ಬಂದು ಹದಿನೈದು ವರ್ಷಗಳಾಯಿತು. ಇದೇ ಮೊದಲು ತಾಯಿಯನ್ನು ಅಷ್ಟು ಹತ್ತಿರದಿಂದ ಕಂಡಿದ್ದು. ಆ ಕ್ಷಣ ರೋಮಾಂಚನವಾಯಿತು. ಇನ್ನೂ, ಥಿಯೇಟರ್ ಮುಂದೆ ಬಂದಾಗ ಕಟೌಟ್ ನೋಡಿ ಸಂತೋಷ ಇಮ್ಮಡಿಯಾಯಿತು. ಇದೆಲಾ ಸಾಧ್ಯವಾಗಿದ್ದು ನವರಸನ್ ಅವರಿಂದ. ಅದಕ್ಕಾಗಿ ಅವರಿಗೆ, ನನ್ನ ಚಿತ್ರತಂಡಕ್ಕೆ ಹಾಗೂ ಮಾಧ್ಯಮ ಮಿತ್ರರಿಗೆ ಧನ್ಯವಾದ ತಿಳಿಸುತ್ತೇನೆ. ಹಾಗೂ “ಸೂತ್ರಧಾರಿ”ಯನ್ನು ನಮ್ಮ ನಿರೀಕ್ಷೆಗೂ ಮೀರಿ ಯಶಸ್ಸು ಮಾಡುತ್ತಿರುವ ನಾಡಿನ ಜನತೆಗೆ ವಿಶೇಷ ಧನ್ಯವಾದ ಹೇಳುತ್ತೇನೆ ಎಂದರು ಚಂದನ್ ಶೆಟ್ಟಿ.

ಜನರು ನಮ್ಮ ಚಿತ್ರಕ್ಕೆ ತೋರುತ್ತಿರುವ ಪ್ರೀತಿಗೆ ಎಷ್ಟು ಹೇಳಿದರೂ ಕಡಿಮೆ. ನನ್ನ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ ಎಂದರು ನಾಯಕಿ ಅಪೂರ್ವ. ನನ್ನ ಮೊದಲ ನಿರ್ದೇಶನದ ಚಿತ್ರವನ್ನು ಜನರು ಇಷ್ಟರ ಮಟ್ಟಿಗೆ ಮೆಚ್ಚಿಕೊಳ್ಳುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಪ್ರೇಕ್ಷಕರಿಗೆ, ಚಿತ್ರತಂಡಕ್ಕೆ ಹಾಗೂ ವಿಶೇಷವಾಗಿ ನಿರ್ಮಾಪಕ ನವರಸನ್ ಅವರಿಗೆ ಧನ್ಯವಾದ ಎಂದರು ನಿರ್ದೇಶಕ ಕಿರಣ್ ಕುಮಾರ್. ನವರಸನ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ ಸಂಜಯ್ ಗೌಡ ಅವರು ” ಸೂತ್ರಧಾರಿ” ಚಿತ್ರ ಇನ್ನೂ ಯಶಸ್ವಿಯಾಗಲಿ ಎಂದು ಹಾರೈಸಿದರು.

error: Content is protected !!