ಪೆನ್ ಡ್ರೈವ್ ಸುತ್ತಾ ಸಸ್ಪೆನ್ಸ್ , ಕಾಮಿಡಿ ಎಂಟರ್ಟೈನರ್ “ಸೂಪರ್ ಹಿಟ್” ಚಿತ್ರವಿಮರ್ಶೆ (ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಸೂಪರ್ ಹಿಟ್
ನಿರ್ದೇಶಕ : ವಿಜಯಾನಂದ್ ನಿರ್ಮಾಪಕ : ಜಿ ಉಮೇಶ್
ಸಂಗೀತ :ನಾಗೇಂದ್ರ ಪ್ರಸಾದ್
ಛಾಯಾಗ್ರಹಣ : ಆರ್.ಡಿ ನಾಗಾರ್ಜುನ
ತಾರಾಗಣ : ಗಿಲ್ಲಿ ನಟ , ಗೌರವ್ ಶೆಟ್ಟಿ , ಶ್ವೇತಾ , ನಾಗೇಂದ್ರ ಪ್ರಸಾದ್, ಡ್ರ್ಯಾಗನ್ ಮಂಜು, ಸಾಧು ಕೋಕಿಲ , ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜೀಜಿ, ಗಿರಿ, ಟಿನಿಸ್ ಕೃಷ್ಣ ಹಾಗೂ ಮುಂತಾದವರು…
ನೋ ಲಾಜಿಕ್… ಓನ್ಲಿ ಎಂಟರ್ಟೈನರ್… ಎನ್ನುವಂತ ವಿಚಾರಗಳನ್ನು ಬೆಸೆದುಕೊಂಡು ಒಂದಷ್ಟು ಘಟನೆಗಳಿಗೆ ಕೊಂಡಿಯಂತೆ ಟ್ವಿಸ್ಟ್ ಅಂಡ್ ಟರ್ನ್ ಗಳ ಜೊತೆಗೆ ಪೆನ್ ಡ್ರೈವ್ ರಹಸ್ಯದ ಸುಳಿಯ ಸುತ್ತ ಸಾಗುವ ಜರ್ನಿಯ ಮನೋರಂಜನೆ ಕಥಾನಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಸೂಪರ್ ಹಿಟ್”. ಡೇವಿಡ್ ಹಾಗೂ ಡಿಸೋಜ ಸಹೋದರರ ಪಾತಕಿ ಕೆಲಸದ ರಹಸ್ಯವನ್ನು ಪತ್ರಕರ್ತ ರಮೇಶ್ ತನ್ನ ಪೆನ್ ಡ್ರೈವ್ ನಲ್ಲಿ ಇಟ್ಟುಕೊಂಡು ದುಷ್ಟರಿಗೆ ತಕ್ಕ ಪಾಠ ಕಲಿಸಲು ಮುಂದಾಗುವಷ್ಟರಲ್ಲಿ ಒಂದು ಅನಾಹುತ ಎದುರಾಗುತ್ತದೆ.
ಬಹಳಷ್ಟು ಸಾಲಗಾರರ ಒತ್ತಡಕ್ಕೆ ಸಿಲುಕಿ ತನ್ನನ್ನೇ ಪಿಂಟ್ ಬಾಯ್ ಗೆ
ಸುಪಾರಿಯ ಮೂಲಕ ಕಿಡ್ನಾಪ್ ಗೆ ಸೆಂಚು ರೂಪಿಸುವ LKB (ಸಾಧುಕೋಕಿಲ) ಒಂದೆಡೆಯಾದರೆ , ಮತ್ತೊಂದೆಡೆ ಐಷಾರಾಮಿ ಕಾರ್ ಎಂದು ಮೋಸ ಹೋದವನ ಕಾರು ಹಾಗೂ ಪೆನ್ ಡ್ರೈವ್ ಇನ್ನೊಂದೆಡೆ , ಇದರ ನಡುವೆ ಅಮ್ಮನ ಆಸೆಯಂತೆ ಸರ್ಕಾರಿ ಕೆಲಸಕ್ಕಾಗಿ ಹಣವನ್ನ ಲಂಚವಾಗಿ ನೀಡಿ ಪ್ರಯೋಜನವಾಗದೆ ಪರದಾಡುವ ಸತ್ಯ (ಗೌರವ್ ಶೆಟ್ಟಿ)ಗೆ ಸಿಗುವ ಕಾರ.
ಇದನ್ನು ಮಾರಿ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗುವ ಹೊತ್ತಿಗೆ , ಅಪ್ಸರದಂತಹ (ಶ್ವೇತ) ಹುಡುಗಿ ಗ್ಯಾಂಗ್ ನಿಂದ ತಪ್ಪಿಸಿಕೊಳ್ಳುತ್ತಾ ಸತ್ಯನ ಜೊತೆ ಕಾರಿನಲ್ಲಿ ಎಸ್ಕೇಪ್ ಆಗುತ್ತಾಳೆ. ಮತ್ತೊಂದು ಸ್ಥಳದಲ್ಲಿ ಶೂಟ್ ಔಟ್ ಗಲಿಬಿಲಿ ಗೆ ಸಿಲುಕಿ ಈ ಕಾರಿನೊಳಗೆ ಸೇರುವ ಮತ್ತೊಬ್ಬ ವ್ಯಕ್ತಿ ಮುನ್ನ ಬಾಯ್ (ಗಿಲ್ಲಿ ನಟ).
ಹೀಗೆ ಈ ಮೂವರ ಪ್ರಯಾಣದ ನಡುವೆ ಘಟನೆಗಳು ಗೊಂದಲ , ನಗೆಯ ಸಂದರ್ಭಗಳನ್ನ ಎದುರಾಗುತ್ತಾ ಹೋದಂತೆ ಒಂದು ರೋಚಕ ತಿರುವು ಕಾರಿನ ಡಿಕ್ಕಿಯಲ್ಲಿ ಮೂಟೆ ಕಟ್ಟಿರುವ ವ್ಯಕ್ತಿಯನ್ನ ಕಂಡು ಆತಂಕ ಒಳಗಾಗುವ ಈ ಮೂವರ ಬದುಕಿನ ಒದ್ದಾಟದ ಸ್ಥಿತಿ ಕ್ಲೈಮಾಕ್ಸ್ ಹಂತಕ್ಕೆ ಬಂದು ಸತ್ಯದ ವಿಚಾರ ಕೋರ್ಟ್ ಆವರಣದಲ್ಲಿ ಹೊರಬರುತ್ತದೆ. ಏನದು ಆ ಸತ್ಯ… ಈ ಮೂವರ ಬದುಕು ಏನಾಗುತ್ತದೆ… ಮೂಟೆಯಲ್ಲಿ ಇದ್ದಿದ್ದು ಯಾರು… ಪೆನ್ ಡ್ರೈವ್ ರಹಸ್ಯ ಏನು… ಎಂಬ ಎಲ್ಲಾ ವಿಚಾರ ತಿಳಿಯಲು ಒಮ್ಮೆ ನೀವು ಈ ಚಿತ್ರವನ್ನು ನೋಡಿ.
ಈ ಚಿತ್ರದ ನಿರ್ದೇಶಕ ವಿಜಯಾನಂದ್ ಮನೋರಂಜನೆಯ ಜೊತೆಗೆ ಒಂದಷ್ಟು ಬದುಕಿನ ಏರಿಳಿತದ ಸೂಕ್ಷ್ಮ ವಿಚಾರವನ್ನು ಹಾಸ್ಯ ಸನ್ನಿವೇಶಗಳ ಮೂಲಕ ಗಮನ ಸೆಳೆಯುವಂತೆ ಕಟ್ಟಿಕೊಟ್ಟಿದ್ದಾರೆ. ಅದರಲ್ಲೂ (ಗೋಲ್ಗುಪ್ಪ) ಪಾನಿ ಪುರಿ ಮಾರುವ ಜೋಡಿ , ಕಳ್ಳನೊಬ್ಬ ಶಿಕ್ಷೆ ಅನುಭವಿಸಿ ಓದಿ ಜಡ್ಜ್ ಆಗುವ ವಿಚಾರ ಸೇರಿದಂತೆ ಹನ್ಸ್ ನಿಂದ ಹನ್ಸಿಕ ಬ್ರೇಕ್ ಅಪ್ ಆದಂತಹ ಒಂದಷ್ಟು ಮನೋರಂಜನೆ ರಸದೌತಣ ತುಂಬಿಕೊಂಡಿರುವ ಈ ಚಿತ್ರ ಯಾವುದೇ ಲಾಜಿಕ್ ನೋಡದೆ ಎಂಜಾಯ್ ಮಾಡುವ ಅಂಶವನ್ನು ನೀಡಿದ್ದಾರೆ. ಆದರೆ ಚಿತ್ರಕಥೆಯಲ್ಲಿ ಹಿಡಿತ ಮಾಡಬೇಕಿತ್ತು , ಒಂದಷ್ಟು ಸಂದರ್ಭಗಳು ಅನವಶ್ಯಕ ಅನಿಸುತ್ತದೆ. ಆದರೂ ಮನೋರಂಜನೆಗೆ ಕೊರತೆ ಇಲ್ಲದಂತಿದೆ.
ಇನ್ನೂ ಛಾಯಾಗ್ರಹಣ , ಸಂಗೀತ ತಕ್ಕಮಟ್ಟಿಗೆ ಗಮನ ಸೆಳೆಯುತ್ತದೆ. ಇನ್ನು ನಾಯಕನಾಗಿ ಗಿಲ್ಲಿ ನಟ ತನ್ನ ಪಂಚಿಂಗ್ ಡೈಲಾಗ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇನ್ನು ಮತ್ತೊಬ್ಬ ನಟ ಗೌರವ ಶೆಟ್ಟಿ ಕೂಡ ಪಾತ್ರಕ್ಕೆ ನ್ಯಾಯವನ್ನು ನೀಡಿ ಉತ್ತಮ ಟೈಮ್ ಸೆನ್ಸ್ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿದ್ದಾರೆ. ನಟಿ ಶ್ವೇತ ಕೂಡ ಸಿಕ್ಕ ಅವಕಾಶವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ.
ಚಿತ್ರ ಸಾಹಿತಿ , ಸಂಗೀತ ನಿರ್ದೇಶಕ ನಾಗೇಂದ್ರ ಪ್ರಸಾದ್ ಒಂದು ಪ್ರಮುಖ ಪಾತ್ರದಲ್ಲಿ ತಮ್ಮ ವಿಜಯಾನಂದ ಜೊತೆ ತೆರೆಯ ಮೇಲೆ ಮಿಂಚಿದ್ದಾರೆ. ಇನ್ನು ಎಂದಿನಂತೆ ಸಾಧುಕೋಕಿಲ ಸಾತ್ , ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಸೇರಿದಂತೆ ಅಭಿನಯಿಸಿರುವ ಎಲ್ಲಾ ಕಲಾವಿದರು ಕೂಡ ಚಿತ್ರದ ಓಟಕ್ಕೆ ಉತ್ತಮ ಬೆಂಬಲ ನೀಡಿದ್ದಾರೆ. ಯಾವುದೇ ಟೆನ್ಶನ್ ಇಲ್ಲದೆ ಕೂಲಾಗಿ ನೋಡುವಂತಹ ಚಿತ್ರ ಇದಾಗಿದೆ.