Cini NewsSandalwood

“ರಾಕ್ಷಸ” ಸಿನಿಮಾಗೆ ಸೋನಲ್ ಮೊಂಥೆರೋ ನಾಯಕಿ…ಶಿವರಾತ್ರಿಗೆ ಚಿತ್ರ ರಿಲೀಸ್

Spread the love

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಪ್ರತಿ ಸಿನಿಮಾದಲ್ಲೂ ಬೇರೆ ಬೇರೆ ರೀತಿಯ ಪಾತ್ರಗಳನ್ನು ಪ್ರಯತ್ನಿಸುತ್ತಿದ್ದಾರೆ. ಆ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಅವರ ಮುಂಬರುವ ಸಿನಿಮಾಗಳ ಬಗ್ಗೆ ನಿರೀಕ್ಷೆ ಇದೆ. ಆ ಪೈಕಿ ‘ರಾಕ್ಷಸ’ ಸಿನಿಮಾ ಕೂಡ ಕುತೂಹಲ ಮೂಡಿಸಿದೆ.‌ಇದೀಗ ರಾಕ್ಷಸ ಸಿನಿಮಾ ಅಂಗಳದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಶಿವರಾತ್ರಿಗೆ ದರ್ಶನ ಕೊಡುತ್ತಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಕರಾವಳಿ ಸುಂದ್ರಿ ಸೋನಲ್ ಮೊಂಥೆರೋ ಅಭಿನಯಿಸಿದ್ದಾರೆ.

ನಿರ್ದೇಶಕ ಹೆಚ್ ಲೋಹಿತ್ ಸಿನಿಮಾಗಳಲ್ಲಿ ನಾಯಕಿಯರಿಗೆ ಪ್ರಾಧಾನ್ಯತೆ ಇದ್ದೇ ಇರಲಿದೆ. ಅದರಂತೆ ಗಮನಸೆಳೆಯುವ ಪಾತ್ರದಲ್ಲಿ ಸೋನಲ್ ನಟಿಸಿದ್ದು, ಶೂಟಿಂಗ್ ನಲ್ಲಿ ತಾವು ಭಾಗಿಯಾಗುತ್ತಿರುವ ಕುತೂಹಲ ಅವರಲ್ಲಿದೆ. ಟೈಮ್ ಲೂಪ್ ಜೊತೆಗೆ ಹಾರರ್ ಕಥೆಯನ್ನು ಒಳಗೊಂಡಿರುವ ರಾಕ್ಷಸನಿಗೆ ಮಮ್ಮಿ, ದೇವಕಿ ಚಿತ್ರಗಳನ್ನ ಡೈರೆಕ್ಟರ್ ಮಾಡಿರುವ ಹೆಚ್ ಲೋಹಿತ್ ಆಕ್ಷನ್ ಕಟ್ ಹೇಳಿದ್ದಾರೆ.

ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಫೆಬ್ರವರಿ 26ರಂದು ಬಿಡುಗಡೆಯಾಗ್ತಿರುವ ರಾಕ್ಷಸ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ಸೋನಲ್ ಮೊಂಥೆರೋ ಜೋಡಿಯಾಗಿ ನಟಿಸಿದ್ದಾರೆ. ಶೋಭಾರಾಜ್, ವತ್ಸಲಾಮೋಹನ್, ಸಿದ್ಲಿಂಗು ಶ್ರೀಧರ್, ಆರ್ನ ರಾಥೋಡ್ ಹೀಗೆ ಇನ್ನು ಹಲವು ಕಲಾವಿದರು ಈ ಚಿತ್ರದಲ್ಲಿದ್ದಾರೆ. ಸಿನಿಮಾಗೆ ಜೇಬಿನ್ ಪಿ ಜೋಕಬ್ ಕ್ಯಾಮರಾವರ್ಕ್ ಮಾಡಿದ್ದಾರೆ.

ವಿನೋದ್ ಸಾಹಸ ನಿರ್ದೇಶನ ಇದೆ. ವರುಣ್ ಉನ್ನಿ ಸಂಗೀತ ನಿರ್ದೇಶಕ ಮಾಡಿದ್ದಾರೆ. ಅವಿನಾಶ್ ಬಸುತ್ಕರ್ ಹಿನ್ನಲೆ ಸಂಗೀತ ಕೊಟ್ಟಿದ್ದಾರೆ. ರವಿಚಂದ್ರನ್ ಸಿ ಸಂಕಲನ ಮಾಡಿದ್ದಾರೆ. ‘ಶಾನ್ವಿ ಎಂಟರ್‌ಟೇನ್ಮೆಂಟ್’ ಮೂಲಕ ದೀಪು ಬಿ.ಎಸ್. ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ನವೀನ್ ಮತ್ತು ಮಾನಸಾ ಕೆ. ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.

Visited 1 times, 1 visit(s) today
error: Content is protected !!