Cini NewsSandalwood

“ಕಮಲ್ ಶ್ರೀದೇವಿ” ಪ್ರಚಾರಕ್ಕೆ ಸಿಂಪಲ್ & ಬ್ಯುಟಿಫುಲ್ ಫೋಟೋ ಶೂಟ್.

ಕ್ರಿಯೇಟಿವ್ ಹೆಡ್ ರಾಜವರ್ಧನ್ ಸಾರಥ್ಯದಲ್ಲಿ “ಕಮಲ್ ಶ್ರೀದೇವಿ” ಚಿತ್ರದ ಫೋಟೋ ಶೂಟ್ ಅನ್ನು ಕೆ.ಆರ್ ಮಾರುಕಟ್ಟೆಯ ಹೂ ಮಾರುಕಟ್ಟೆ , ಹಣ್ಣು , ತರಕಾರಿ ಅಂಗಡಿ ಹಾಗೂ ಬಸ್ ಸ್ಟ್ಯಾಂಡ್ ಮತ್ತು ರಸ್ತೆಯ ನಡುವೆ ಸೆರೆ ಹಿಡಿಯಲಾಗಿದೆ. ಇದಕ್ಕಾಗಿ ಬೆಳ್ ಬೆಳ್ಳಿಗೆ ಸೋನೆ ಮಳೆ ಚುಮುಚುಮು ಚಳಿಯಲ್ಲಿ ಚಿತ್ರದ ನಟ ಸಚಿನ್ ಚಲುವರಾಯ ಸ್ವಾಮಿ ಹಾಗೂ ಸಂಗೀತ ಭಟ್ ಫೋಟೋ ಶೂಟ್ ನಲಿ ಭಾಗವಹಿಸಿದ್ದು ವಿಶೇಷ.

ಪ್ರೇಕ್ಷಕರನ್ನ ರಂಜಿಸುವ ಉದ್ದೇಶದಿಂದ ಸಿನಿಮಾ ಮಾಡೋದು ಒಂದು ಸಾಹಸವಾದರೆ. ಚಿತ್ರವನ್ನ ಬಿಡುಗಡೆ ಮಾಡಲು ಪ್ರಚಾರ ಮಾಡುವುದು ಕೂಡ ಮತ್ತೊಂದು ದೊಡ್ಡ ಸಾಹಸವೇ ಸರಿ. ಅದರಲ್ಲೂ ಸಿನಿಮಾ ಪ್ರಚಾರ ಹೇಗ್ ಮಾಡಿದ್ರೂ.. ಎಷ್ಟು ಮಾಡಿದ್ರೂ ಕಡಿಮೆನೇ… ಎನ್ನುವಂತಿದೆ.

ಆ ನಿಟ್ಟಿನಲ್ಲಿ ಪ್ರೇಕ್ಷಕರನ್ನ ಸೆಳೆಯಲು “ಕಮಲ್ ಶ್ರೀದೇವಿ” ಚಿತ್ರತಂಡ ಪ್ರತಿ ಸಲ ವಿಶೇಷ ಮತ್ತು ವಿಶಿಷ್ಠ ವಿಚಾರಗಳಿಗೆ ಸದ್ದು ಮಾಡಿ ಸುದ್ದಿಯಾಗ್ತಿದೆ. ಇತ್ತೀಚೆಗಷ್ಟೇ ಕಮಲ್ ಶ್ರೀದೇವಿ ಚಿತ್ರದ ಕಾನ್ಸೆಪ್ಟ್ ಪೋಸ್ಟರ್ ಬಿಡುಗಡೆ ಮಾಡಿ ಕುತೂಹಲ ಮೂಡಿಸಿದ್ದ ಚಿತ್ರತಂಡ , ಕುಂಬಳಕಾಯಿ ಹೊಡೆದು ಬಂಡೆ ಮಹಕಾಳಿ ದೇವಸ್ಥಾನದಲ್ಲಿ ಪೂಜೆ ಮಾಡಿ ಚಿತ್ರೀಕರಣಕ್ಕೆ ಶುಭಂ ಹೇಳಿತ್ತು. ಇಲ್ಲಿಂದ ಪ್ರಚಾರ ಆರಂಭ ಎಂದಿದ್ದ ಚಿತ್ರತಂಡ, ಇದೀಗ ಸಿನಿಮಾ ಕಥೆಯ ಥೀಮ್ ನಲ್ಲಿ, ಅದೇ ಪಾತ್ರಗಳ‌ , ಅದೇ ಕಾಸ್ಟ್ಯೂಮ್ ನಲ್ಲಿ ಕ್ಯಾಂಡಿಡ್ ಫೋಟೋ ಶೂಟ್ ಮಾಡಿದೆ.

ನಾಯಕ ಸಚಿನ್ ಚಲುವರಾಯ ಸ್ವಾಮಿ, ನಟಿ ಸಂಗೀತಾ ಭಟ್ ಹಾಗೂ ಮತ್ತೊಬ್ಬ ನಟಿ ಅಕ್ಷಿತಾ ಬೋಪಯ್ಯ ಜೊತೆಗೆ ಇಡೀ ಕೆ.ಆರ್ ಮಾರುಕಟ್ಟೆ ಓಡಾಡಿದ್ದಾರೆ. ಹೂ , ಹಣ್ಣು , ಅರಿಶಿಣ ಕುಂಕುಮ , ಬಳೆ ಅಂಗಡಿ‌ಗಳಲ್ಲಿ ಪಾತ್ರಗಳಾಗಿ ಪೋಸ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಕೆ.ಆರ್ ಮಾರ್ಕೆಟ್ ಕಟ್ಟಡದ ಮೇಲೆ ಹೂ ಚೆಲ್ಲಿ ಸಂಭ್ರಮಿಸಿದ್ದಾರೆ.

ಕೋಟೆ ಬೀದಿಯಲ್ಲಿ ಮಂಗಳಮುಖಿ ಯರು ದೃಷ್ಟಿ ತೆಗೆದಿದ್ದಾರೆ. ಕವಡೆ ಶಾಸ್ತ್ರ ಕೇಳಿದ್ದಾರೆ. ಅಲ್ಲದೇ ಖಾಸಗಿ ಬಸ್ ನಿಲ್ದಾಣದಲ್ಲಿ, ಬಸ್ ಒಳಗೆ ನಿಂತು ಪೋಟೋಗೆ ಫೋಸ್ ಕೊಟ್ಟಿದ್ದಾರೆ. ಯುವ ಸೆಲೆಬ್ರಿಟಿ ಛಾಯಾಗ್ರಾಹಕ ಕೆವಿನ್ ಶೆರ್ವಿನ್ ಮಸ್ಕರೇನ್ಹಸ್ ತಮ್ಮ ಕ್ಯಾಮೆರಾ ಕಣ್ಣಲ್ಲಿ “ಕಮಲ್ ಶ್ರೀದೇವಿ” ಥೀಮ್ನ ಕ್ಯಾಂಡಿಡ್ ಆಗಿ ಸೆರೆಹಿಡಿದಿದ್ದಾರೆ.

ಬಹಳ ವಿಭಿನ್ನವಾಗಿ ಬಂದಿರುವ ಈ “ಕಮಲ್ ಶ್ರೀದೇವಿ” ಚಿತ್ರವನ್ನು ಎನ್. ಚಲುವರಾಯ ಸ್ವಾಮಿ ಅರ್ಪಿಸುವ ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ ನಡಿಯಲ್ಲಿ ಬಿ.ಕೆ. ಧನಲಕ್ಷ್ಮೀ ನಿರ್ಮಾಣದ Barnswallow companyಯ ರಾಜವರ್ಧನ್ ಸಹ ನಿರ್ಮಾಣದಲ್ಲಿ ಸಚಿನ್ ಚಲುವರಾಯ ಸ್ವಾಮಿ ಪ್ರಮುಖ ಪಾತ್ರದಲ್ಲಿದ್ದು , ಉಳಿದಂತೆ ಕಿಶೋರ್, ರಮೇಶ್ ಇಂದಿರಾ, ಸಂಗೀತಾ ಭಟ್, ಅಕ್ಷಿತಾ ಬೋಪಯ್ಯ ಸೇರಿದಂತೆ ಪ್ರತಿಭಾವಂತ ದೊಡ್ಡ ತಾರಾ ಬಳಗವೇ ಈ ಚಿತ್ರದಲ್ಲಿ ಕಾಣಿಸಲಿದೆಯಂತೆ.

ಈ ಚಿತ್ರವನ್ನ ವಿ.ಎ. ಸುನೀಲ್ ಕುಮಾರ್ ನಿರ್ದೇಶಿಸಿದ್ದು, ಈ ಚಿತ್ರದ ಸಂಪೂರ್ಣ ಕ್ರಿಯೇಟಿವ್ ಜವಾಬ್ದಾರಿಯ ಜೊತೆ ಸಹ ನಿರ್ಮಾಪಕರಾಗಿ ರಾಜವರ್ಧನ್ ಕಾರ್ಯ ನಿರ್ವಹಿಸಿದ್ದಾರೆ. ಕ್ರಿಯೇಟಿವ್ ಪೋಸ್ಟರ್ ಹಾಗೂ ಅದರ ಗುಣಮಟ್ಟದಿಂದಲೇ ತುಂಬಾ ದೊಡ್ಡ ನಿರೀಕ್ಷೆಯನ್ನ ಹುಟ್ಟಿಸಿದ್ದು , ಚಿತ್ರದ ಕ್ರಿಯೇಟಿವ್ ಹೆಡ್ ರಾಜವರ್ಧನ್ ಇದೀಗ ಈ ಪೋಟೋ ಶೂಟ್ ಮೂಲಕ ಮತ್ತೊಮ್ಮೆ ವಿಶೇಷ ಭರವಸೆಯನ್ನ ಹುಟ್ಟಿಸಿದ್ದಾರೆ.

ಇನ್ನು ನಟ ಸಚಿನ್ ಪ್ರಕಾರ ಈ ಒಂದು ಐಡಿಯಾ ಕ್ರಿಯೇಟಿವ್ ಹೆಡ್ ರಾಜವರ್ಧನ್ ಅವರದು, ಕಮಲ್ ಶ್ರೀದೇವಿ ಚಿತ್ರಕ್ಕೂ ಈ ಫೋಟೋ ಶೂಟಿಗೂ ನಿಕಟ ಸಂಬಂಧವಿದೆ. ಕಮಲ್ ಪಾತ್ರಕ್ಕೂ ಸಂಗೀತ ಭಟ್ ಹಾಗೂ ಅಕ್ಷಿತಾ ಪಾತ್ರ ಏನು ಅನ್ನೋದನ್ನ ನೀವು ಈ ಫೋಟೊಗಳನ್ನ ನೋಡಿದಾಗ ಊಹಿಸಿಕೊಳ್ಳ ಬಹುದು ಎಂದಿದ್ದಾರೆ. ಅದೇ ರೀತಿ ನಟಿ ಸಂಗೀತ ಭಟ್ ಹೇಳೋದು  ಕಮಲ್ ಶ್ರೀದೇವಿ ಚಿತ್ರದಲ್ಲಿ ನಾನೇನು..? ನನ್ನ ಪಾತ್ರವೇನು..? ಅನ್ನೋದಕ್ಕೆ ಈ ಪೋಟೋ ಶೂಟ್ ಒಂದು ಕ್ಲ್ಯೂ..!!! ಇದು ರಾಜವರ್ಧನ್ ಅವ್ರ ಐಡಿಯಾ. ಅವ್ರಲ್ಲೊಬ್ಬ ಡೈರೆಕ್ಟರ್ ಇದ್ದಾನೆ. ಅವ್ರು ಬೇಗ ಆಚೆ ಬರ್ಲಿ. ಮಾರ್ಕೆಟ್ ನಲ್ಲಿ ಫೋಟೋ ಶೂಟ್ ವಿಶೇಷವಾಗಿತ್ತು. ಸಾಮಾನ್ಯರ ನಡುವೆ ಶೂಟಿಂಗ್ ಹಾಗೂ ನಮ್ಮ ಕಡೆಗೆ ಅವ್ರ ಪ್ರತಿಕ್ರಿಯೆ ತುಂಬಾ ಪಾಸಿಟಿವ್ ಫೀಲಿಂಗ್ ಕೊಡ್ತು ಎಂದಿದ್ದಾರೆ. ಕ್ರಿಯೇಟಿವಿಡ್ ರಾಜವರ್ಧನ್ ಹೇಳುವುದು ಇವತ್ತಿಗೆ ಈ ರೀತಿ‌‌ ಫೀಲ್ಡಿಳಿದು, ನುಗ್ಗಿ , ಪ್ರಚಾರ ಮಡ್ಲೇಬೇಕು. ಹೊಸದಾಗಿ‌ ಪ್ರೇಕ್ಷಕರಿಗೆ ನಾಟೋ ವಿಷ್ಯ ಯಾವಾಗ್ಲೂ ಆರ್ಗ್ಯಾನಿಕ್ ಆಗಿರುತ್ತೆ. ಅದಕ್ಕೆ ಈ ಪ್ರಯತ್ನ ಎಂದಿದ್ದಾರೆ. ಇನ್ನೂ ನಿರ್ದೇಶಕ ಸುನಿಲ್ ಕುಮಾರ್ ಪ್ರಕಾರ ನಾನೂ ಜಾಕಿ ಹಾಗೂ ಅಣ್ಣಾಬಾಂಡ ಚಿತ್ರಗಳಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡೋವಾಗ ಸೂರಿ ಸರ್ ಜೊತೆಗೆ ಈ ಜಾಗದಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದೆ. “ಕಮಲ್ ಶ್ರೀದೇವಿ” ಚಿತ್ರೀಕರಣದ ವೇಳೆ ಇಲ್ಲಿ ಏನಾದ್ರೂ ಮಾಡಬಹುದು ಅನ್ನೋ ಆಲೋಚನೆ ಬಂದಿತ್ತು. ಸಿನಿಮಾಗೂ ಈ ಜಾಗಕ್ಕೂ ಈ ಪೋಟೋ ಶೂಟಿಗೂ ಖಂಡಿತ ಲಿಂಕ್ ಇದೆ. ಅದು ಸಿನಿಮಾ ನೋಡಿದಾಗ ಗೊತ್ತಾಗುತ್ತೆ ಎಂದಿದ್ದಾರೆ. ಒಟ್ಟರೆ ಬಹಳಷ್ಟು ಆಲೋಚನೆ ಮೂಲಕ ಪ್ರೇಕ್ಷಕರನ್ನ ಸೆಳೆಯುವುದಕ್ಕೆ ಮಾಡುತ್ತಿರುವ ಈ ಚಿತ್ರ ತಂಡದ ಪ್ರಯತ್ನ ಬಹಳ ವಿಭಿನ್ನವಾಗಿದೆ.

error: Content is protected !!