Cini NewsSandalwood

“ಶಿವಾಜಿ ಬಹದ್ದೂರ್” ಚಿತ್ರಕ್ಕೆ ವಿಕ್ಟರಿ ವೆಂಕಟೇಶ್ ಹಾಗೂ ಅಮೀರ್ ಖಾನ್ ಸಹೋದರ ಫೈಸಲ್ ಖಾನ್ ಎಂಟ್ರಿ.

ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಆಪ್ತಮಿತ್ರ ರಾಜ್ ಬಹದ್ದೂರ್ ನಟನೆಯ “ಶಿವಾಜಿ ಬಹದ್ದೂರ್” ಚಿತ್ರದ ಸಾಂಗ್ ರೆಕಾರ್ಡಿಂಗ್ ಕೆಲಸ ಆರಂಭಗೊಂಡಿದೆ. ಬಹುಮುಖ ಪ್ರತಿಭೆ ಆರೋನ್ ಕಾರ್ತಿಕ್ ನಿರ್ದೇಶನದಲ್ಲಿ ಆರಂಭಗೊಳ್ಳುತ್ತಿರುವ ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಸೇರ್ಪಡೆಯಾಗುತ್ತಿದೆ. ತೆಲುಗಿನ ಖ್ಯಾತ ನಟ ವಿಕ್ಟರಿ ವೆಂಕಟೇಶ್ ಹಾಗೂ ಬಾಲಿವುಡ್ ನಟ ಅಮೀರ್ ಖಾನ್ ಸಹೋದರ ಫೈಸಲ್ ಖಾನ್ ಅಭಿನಯಿಸಲಿದ್ದಾರಂತೆ.

ಇನ್ನು ಬಹಳಷ್ಟು ಖ್ಯಾತ ನಟ ನಟಿಯರು ಈ ಚಿತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆಯಂತೆ. ಶಿವಪೂರ್ಣ (ಲೋಕೇಶ್) ಹಾಗೂ ಮುತ್ತುರಾಜ್ ನಿರ್ಮಾ‌ಣ ಮಾಡುತ್ತಿರುವ “ಶಿವಾಜಿ ಬಹದ್ದೂರ್” ಚಿತ್ರದಲ್ಲಿ ಶಿವಾಜಿ ಎಂಬುದು ಪ್ರಧಾನ ಮಂತ್ರಿ ಪಾತ್ರದ ಹೆಸರಾಗಿದ್ದು, ಸೂಪರ್ ಸ್ಟಾರ್ ರಜನಿಕಾಂತ್ ಧ್ವನಿಯನ್ನು ಕೇಳುವ ಸಾಧ್ಯತೆ ಇದೆಯಂತೆ.

ಅದೇ ರೀತಿ ಬಹದ್ದೂರ್ ಮುಖ್ಯಮಂತ್ರಿ ಪಾತ್ರವಾಗಿದ್ದು, ರಾಜ್ ಬಹದ್ದೂರ್ ನಟಿಸುತ್ತಿದ್ದಾರೆ. ಪ್ರಪಂಚಕ್ಕೆ ಮಾರಕವಾಗಿರುವ ಉಗ್ರವಾದ (ಭಯೋತ್ಪಾದನೆ) ತಡೆಗಟ್ಟವ ಕಥೆಯ ಜೊತೆಗೆ ಹಲವು ವಿಚಾರಗಳನ್ನು ಒಳಗೊಂಡಿದೆಯಂತೆ. ಈ ಚಿತ್ರದಲ್ಲಿ ಯುವ ಪ್ರತಿಭೆಗಳಾದ ರಾಜೀವ್ ರಾಥೋಡ್, ಪಲ್ಲವಿ ಪ್ರಕಾಶ್, ಸುಶ್ಮಿತ, ಶೋಭ, ಗಣೇಶ್ ರಾವ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ.

ಈಗ ಚಿತ್ರದ ಸಾಂಗ್ ಕಂಪೋಸ್ ಕೆಲಸ ಆರಂಭವಾಗಿದ್ದು, ಆರೋನ್ ಕಾರ್ತಿಕ್ ಸಂಗೀತದ ಜವಾಬ್ದಾರಿಯನ್ನು ನಿಬಾಯಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಈ ಚಿತ್ರದ ಮಾಹಿತಿಯನ್ನು ನೀಡಲಿದ್ದಾರೆ

error: Content is protected !!