ಮೈಸೂರಿನ ಚಾಮುಂಡೇಶ್ವರಿ ತಾಯಿಯ ಸನ್ನಿಧಿಯಲ್ಲಿ “ಜುಮ್ಕಿ” ಚಿತ್ರದ ಸ್ಕ್ರಿಪ್ಟ್ ಪೂಜೆ ನೆರವೇರಿದೆ.
ಈಗಾಗಲೇ ಧೈವ ಚಿತ್ರದಲ್ಲಿ ನಟಿಸಿ, ಆಕ್ಷನ್ ಕಟ್ ಹೇಳಿರುವ M.J. ಜಯರಾಜ್ ಈಗ ಜುಮ್ಕಿ ಯ ಸದ್ದಿಗೆ ಫಿಧಾ ಆಗಿದ್ದಾರೆ. ಜುಮ್ಕಿ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜೊತೆಗೆ ನಾಯಕನಟನಾಗಿ ಅಭಿನಯಿಸುತ್ತಿದ್ದಾರೆ.
ಕಲ್ಪವೃಕ್ಷ ಕ್ರಿಯೇಷನ್ ಬ್ಯಾನರ್ ನಲ್ಲಿ ಸಂಗಮ್ಮ ರಾಮಣ್ಣ ಮೇಘಲಮನಿ ಯವರ ನಿರ್ಮಾಣದಲ್ಲಿ “ಜುಮ್ಕಿ” ಒಂದು ಸುಂದರ ಪ್ರೇಮಕಥೆ ಯಾಗಿದ್ದು, ಈ ಚಿತ್ರಕ್ಕೆVCN ಮಂಜುರಾಜ್ ಸೂರ್ಯ ಕಥೆ, ಚಿತ್ರಕಥೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೂ ಸಿದ್ಧಾರ್ಥ್ ರವರು ಛಾಯಾಗ್ರಹಣ ಹಾಗೂ ವಿಜೇತ್ ಮಂಜಯ್ಯ ನವರು ಸಂಗೀತ ಮಾಡುತ್ತಿದ್ದಾರೆ.

ಇಂದು ಚಾಮುಂಡಿ ಬೆಟ್ಟದಲ್ಲಿ ಪೂಜೆಯಲ್ಲಿ ನಿರ್ದೇಶಕ, ಹಾಗೂ ನಾಯಕನಟ M.J. ಜಯರಾಜ್, ಪತ್ರಕರ್ತ ಹಾಗೂ ಕಲಾವಿದ VCN ಮಂಜುರಾಜ್, ಛಾಯಾಗ್ರಾಹಕ ಸಿದ್ಧಾರ್ಥ್ H.R., ಮತ್ತು ಸಹ ನಿರ್ದೇಶಕ ಚಂದ್ರಕಾಂತ್ ಗುಜ್ಜಾಲ್ ಭಾಗವಹಿಸಿ. ಸ್ಕ್ರಿಪ್ಟ್ ಪೂಜೆಯನ್ನು ನೆರವೇರಿಸಿ ತಾಯಿಯ ಆಶೀರ್ವಾದವನ್ನು ಪಡೆದರು. ಸದ್ಯ ಚಿತ್ರತಂಡ ಮತ್ತಷ್ಟು ಕಲಾವಿದರ ಆಯ್ಕೆಯ ಪ್ರಕ್ರಿಯೆಯಲ್ಲಿ ತೊಡಗಿ ಕೊಂಡಿದೆ. ಎಲ್ಲಾ ಅಂದುಕೊಂಡಂತೆ ಆದರೆ, ಚಿತ್ರತಂಡ ಶೀಘ್ರದಲ್ಲಿ ಚಿತ್ರೀಕರಣ ಪ್ರಾರಂಭಿಸುವ ನಿರೀಕ್ಷೆಯಲ್ಲಿದೆ.