Cini NewsSandalwood

“ಸತ್ಯ s/o ಹರಿಶ್ಚಂದ್ರ” ಕ್ಯಾರೆಕ್ಟರ್ ವೀಡಿಯೋ ಬಿಡುಗಡೆ.

Spread the love

ನಾಯಕ ನಟ ನಿರೂಪ್ ಭಂಡಾರಿಗೆ ಹುಟ್ಟು ಹಬ್ಬದ ಸಂಭ್ರಮ. ಆ ಪ್ರಯುಕ್ತ ಚಿತ್ರ ತಂಡ ಅವರ ಮುಂಬರುವ ಚಿತ್ರ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ದ ಪಾತ್ರ ಪರಿಚಯದ ವೀಡಿಯೋ ತುಣುಕನ್ನು ಬಿಡುಗಡೆ ಮಾಡಿದ್ದಾರೆ. ಸುಂದರವಾಗಿ ಮೂಡಿಬಂದಿರುವ ಈ ವೀಡಿಯೋ ನೋಡಿದಾಗ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಉತ್ತಮ ಹಾಸ್ಯಮಯ ಕೌಟುಂಬಿಕ ಚಿತ್ರವಾಗುವ ಭರವಸೆಯನ್ನು ಮೂಡಿಸುತ್ತದೆ. ಇದರಲ್ಲಿವೀಕ್ಷಕರನ್ನು ಹಿಡಿದಿಡುವ ಹಲವಾರು ಅಂಶಗಳಿವೆ. ಹರಿತವಾದ ಸಂಭಾಷಣೆ, ಸುಂದರ ದೃಶ್ಯ ಹಂದರ, ಮನಮುಟ್ಟುವ ಅಭಿನಯದ ತುಣುಕುಗಳು, ನಮಗೆ ಸತ್ವ ಪೂರ್ಣ ನಿರೂಪಣೆಯ ಸೂಚನೆ ನೀಡುತ್ತದೆ.

ವೀಡಿಯೋ ಹೇಳುವಂತೆ ಇದೊಂದು ಸುಳ್ಳನ ಕಥೆ. ಸಾಯಿ ಕುಮಾರ್ ಪ್ರತಿರೋಧಕ್ಕೆ, “ನಾನು ಹರಿಶ್ಚಂದ್ರನ ಮಗನಿರಬಹುದು ಆದರೆ ಸತ್ಯ ಹರಿಶ್ಚಂದ್ರನ ತುಂಡಲ್ಲ” ಎಂದು ನಿರೂಪ್ ಭಂಡಾರಿ ಅಬ್ಬರಿಸುತ್ತಾರೆ. ಇದು ಸತ್ಯ ಮತ್ತು ಸುಳ್ಳಿನ ಮಧ್ಯದ ತೀವ್ರ ಸಂಘರ್ಷವನ್ನು ಸೂಚಿಸುತ್ತದೆ.

‘ರಂಗಿತರಂಗ’ ಚಿತ್ರದ ನಂತರ ಮತ್ತೆ ಒಂದಾಗಿರುವ ಡೈಲಾಗ್ ಕಿಂಗ್ ಸಾಯಿ ಕುಮಾರ್ ಮತ್ತು ನಿರೂಪ್ ಭಂಡಾರಿ ತಂದೆ – ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಿಬ್ಬರ ಜುಗಲ್ಬಂದಿಯಲ್ಲಿ ಮತ್ತೊಮ್ಮೆ ನಾವು ಮನಮುಟ್ಟುವ, ಅನಿರೀಕ್ಷಿತ ಹಾಗೂ ರೋಚಕ ದೃಶ್ಯಗಳನ್ನು ನಿರೀಕ್ಷಿಸಬಹುದು.

ಹಾಸ್ಯದ ಹೊನಲಿನ ಮಧ್ಯೆ ಭಾವನೆಗಳ ಸ್ಪೋಟಗೊಳ್ಳುವುದರಿಂದ ಇದು ಕ್ಲಾಸ್ ಮತ್ತೆ ಮಾಸ್ ಗೆ ಇಷ್ಟವಾಗುವ ಚಿತ್ರವಾಗಬಲ್ಲದು.ಒಟ್ಟಿನಲ್ಲಿ ಈ ವೀಡಿಯೋ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ಒಂದು ಉತ್ತಮ ಫ್ಯಾಮಿಲಿ ಎಂಟರ್ಟೈನರ್ ಆಗುವ ನಿರೀಕ್ಷೆ ಯನ್ನು ಮೂಡಿಸಿದೆ.

ಈ ಚಿತ್ರವನ್ನು ಪೂನಾ ಮೂಲದ ಅಂಕಿತ್ ಸೋನೇಗಾರ್ ಅವರು ‘ಅಂಕಿತ್ ಸಿನಿಮಾಸ್’ ಬ್ಯಾನರ್ ನಡಿ ಪ್ರಶಾಂತ್ ಮುಲಗೆ ಸಹ ನಿರ್ಮಾಣದೊಂದಿಗೆ ನಿರ್ಮಿಸಿದ್ದಾರೆ. ತಾರಾಗಣದಲ್ಲಿ ಬೃಂದಾ ಆಚಾರ್ಯ, ಅಂಕಿತ ಅಮರ್, ಸ್ವಾತಿ ಗುರುದತ್, ಎಂ.ಕೆ.ಮಠ, ಚೇತನ್ ದುರ್ಗ ಮುಂತಾದರಿದ್ದಾರೆ.

ಈ ಚಿತ್ರಕ್ಕೆ ಸಚಿನ್ ವಾಲಿ ನಿರ್ದೇಶನ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಸಚಿನ್ ಬಸ್ರೂರು ಸಂಗೀತ, ಲಕ್ಷ್ಮಣ್ ರಾವ್ ಸಂಕಲನವಿದೆ. ಇದರ ಲೈನ್ ಪ್ರೊಡ್ಯೂಸರ್ ಹರೀಶ್ ಗೌಡ,ಮೈಸೂರು.

Visited 3 times, 1 visit(s) today
error: Content is protected !!