Cini NewsTollywood

ಕಾಂತಾರ ಬೆಡಗಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ.

Spread the love

ಸ್ಯಾಂಡಲ್ ವುಡ್ ನ ಫಿಟ್ ಅಂಡ್ ಎನರ್ಜಿಟಿಕ್ ಸುಂದರಿ ಸಪ್ತಮಿ ಗೌಡ ಯಾರಿಗೆ ತಾನೇ ತಿಳಿದಿಲ್ಲ… ಕಾಂತಾರ ಚಿತ್ರದ ಲೀಲಾ ಎಲ್ಲರ ಮನೆ ಮಾತದ ನಟಿ. ತನ್ನ ನೈಜ್ಯ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆದ ಈ ಮುದ್ದಾದ ಈ ಪ್ರತಿಭೆ ಬಹು ಬೇಡಿಕೆಯ ನಟಿಯಾಗಿದ್ದಾರೆ.

ಸಪ್ತಮಿ ಗೌಡ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ರು ಸಹ , ಸಿನಿಪ್ರಿಯರು ಗುರುತಿಸುವಂತಹ ಪಾತ್ರ ಗಿಟ್ಟಿಸಿಕೊಂಡಿದ್ದು ಮಾತ್ರ ಕಾಂತಾರ ಚಿತ್ರದಲ್ಲಿ. ಇತ್ತೀಚಿಗೆ ಬಿಡುಗಡೆಗೊಂಡಂತ “ಯುವ” ಚಿತ್ರದಲ್ಲೂ ಕಾಲೇಜ್ ವಿದ್ಯಾರ್ಥಿನಿ ಪಾತ್ರ ಮಾಡಿರುವ ಸಪ್ತಮಿ ಗೌಡ ಮಾತನಾಡತ್ತ ನಾನು ಸದಾ ಹೊಂಬಾಳೆ ಫಿಲಂಸ್ ಸಂಸ್ಥೆಗೆ ಚಿರಋಣಿಯಾಗಿರುತ್ತೇನೆ.

“ಕಾಂತಾರ” ಹಾಗೂ “ಯುವ” ಚಿತ್ರದಲ್ಲಿ ಒಳ್ಳೆ ಅವಕಾಶ ನೀಡಿದ್ದಾರೆ. ನಾನು ಈ ಬ್ಯಾನರ್ ನ ಎರಡನೇ ಚಿತ್ರದಲ್ಲಿ ಕೂಡ ಅಭಿನಯಿಸಿರುವುದು ಸಂತೋಷವಿದೆ. ನಾನು ನಮ್ಮ ನಿರ್ದೇಶಕರಿಂದ ಹಾಗೂ ಚಿತ್ರರಂಗದಿಂದ ಬಹಳಷ್ಟು ಕಲಿಯುತ್ತಿದ್ದೇನೆ. ವಿಭಿನ್ನ ಪಾತ್ರಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. ಸ್ಕ್ರಿಪ್ಟ್ ವಿಚಾರವಾಗಿ ನಾನು ನನ್ನ ಮನೆಯವರು ಹಾಗೂ ನನ್ನ ಸಿನಿಮಾ ತಂಡದವರ ಜೊತೆ ಚರ್ಚೆ ಮಾಡಿ ಒಪ್ಪಿಕೊಳ್ಳುತ್ತೇನೆ.

ನನ್ನ ತಂದೆ ಒಬ್ಬ ಪೊಲೀಸ್ ಅಧಿಕಾರಿ, ಅವರಿಗೆ ನಾನು ಐಎಎಸ್ ಕೆಎಎಸ್ ಮಾಡಬೇಕೆಂಬ ಆಸೆ ಇತ್ತು. ನಾನು ಕೂಡ ಓದಿನಲ್ಲಿ ಮುಂದಿದ್ದೆ. ಬಿಇ ಸಿವಿಲ್ ಇಂಜಿನಿಯರ್ ಮಾಡಿದೆ. ಹಾಗೆಯೇ ನಾನು ಸ್ಪೋರ್ಟ್ಸ್ ಗರ್ಲ್ ಕೊಡ , ಸ್ವಿಮಿಂಗ್ ನಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದೇನೆ. ನನ್ನ ತಂದೆ ಇನ್ಸ್ಪೆಕ್ಟರ್ , ನಾನು ಆಕ್ಟರ್ , ನನ್ನ ತಂಗಿ ಡಾಕ್ಟರ್ ಎನ್ನುತ್ತಾ ಮುಗುಳ್ನಗೆಯಲ್ಲೇ ನಾನು ಸಿನಿಮಾ ರಂಗಕ್ಕೆ ಬರುವುದಕ್ಕೆ ಅವಕಾಶ ಸಿಕ್ತು , ಮನೆಯಲ್ಲೂ ಒಪ್ಪಿಕೊಂಡರು ಹಾಗಾಗಿ ನಾನು ಎಂಟ್ರಿ ಕೊಟ್ಟೆ ಎಂದರು.

2023ರಲ್ಲಿ “The Vaccine War” ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಸಪ್ತಮಿ ಗೌಡ ಒಂದು ಸಣ್ಣ ಪಾತ್ರವಾದರೂ ಸೈ ಎನ್ನುವಂತೆ ಅಭಿನಯಿಸಿ ಒಳ್ಳೆ ಪ್ರಶಂಸೆಯನ್ನು ಪಡೆದುಕೊಂಡರು. ಈಗ ಟಾಲಿವುಡ್ ಗೆ ಎಂಟ್ರಿ ಕೊಡುತ್ತಿರುವ ಸಪ್ತಮಿ ಗೌಡ ಯುವ ನಟ ನಿತಿನ್ ಅಭಿನಯದ “ತಮುಡು” ಅಭಿನಯಿಸಲಿದ್ದು , ಈ ಚಿತ್ರಕ್ಕಾಗಿ ಹಾರ್ಸ್ ರೈಡಿಂಗ್ ಕೂಡ ಕಲಿಯುತ್ತಿದ್ದೇನೆ , ಸದ್ಯದಲ್ಲೇ ತಂಡದ ಚಿತ್ರೀಕರಣದಲ್ಲಿ ಭಾಗಿಯಾಗವೇ ಎಂದರು. ಇನ್ನು ರಿಷಬ್ ಶೆಟ್ಟಿ ಸಾರಥ್ಯದ “ಕಾಂತಾರ” ಸಿಕ್ವೆಲ್ ಚಿತ್ರೀಕರಣವಾಗುತ್ತಿದ್ದು , ಲೀಲಾ ಪಾತ್ರ ಇಲ್ಲದ ಕಾರಣ ನಾನು ಅಭಿನಯಿಸುತ್ತಿಲ್ಲ ಎಂದು ಹೇಳಿದರು.

ಬಹಳಷ್ಟು ಅವಕಾಶಗಳು ಬರ್ತಿದೆ , ನಾನು ನೋಡಿ ಸೆಲೆಕ್ಟ್ ಮಾಡಿ ಅಭಿನಯಿಸುತ್ತೇನೆ. ಸ್ಪೋರ್ಟ್ಸ್ , ಪೊಲೀಸ್ ಸೇರಿದಂತೆ ವಿಭಿನ್ನ ಪಾತ್ರಗಳು ಸಿಕ್ಕರೆ ನಾನು ಖಂಡಿತ ಅಭಿನಯಿಸಿದಕ್ಕೆ ಸಿದ್ಧ ಎನ್ನುವ ಈ ಬೆಡಗಿ ಚಿತ್ರಗಳು ಗೆದ್ದರೆ ಚಿತ್ರರಂಗ ಗೆದ್ದಂತೆ , ಅದು ನನಗೆ ಬಹಳ ಖುಷಿಯನ್ನು ನೀಡುತ್ತದೆ. ನಮ್ಮಂತ ಕಲಾವಿದರನ್ನು ಬೆಳೆಸಿ ಪ್ರೋತ್ಸಾಹಿಸಿ ಎನ್ನುತ್ತಾ ಬಹಳ ಲವ್ವಲವಿಕೆಯಿಂದ ಮಾತನಾಡಿದ ಈ ನಟಿಯ ಸೌಮ್ಯತೆ, ನಗು , ಆತ್ಮವಿಶ್ವಾಸ ಉತ್ತಮ ಭವಿಷ್ಯಕ್ಕೆ ದಾರಿ ತೋರುವಂತಿದೆ.

Visited 1 times, 1 visit(s) today
error: Content is protected !!