Cini NewsSandalwood

ಇದೇ 19ರಂದು ಉದಯ ಟಿವಿಯಲ್ಲಿ ರಜನಿಕಾಂತ್ ಕೂಲಿ ಸಿನಿಮಾ ಎಂಟ್ರಿ

ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಷನ್‌ ನ ಸೂಪರ್ ಹಿಟ್ ಸಿನಿಮಾ ‘ಕೂಲಿ’ ಕಿರುತೆರೆಗೆ ಎಂಟ್ರಿ ಕೊಡುತ್ತಿದೆ. ಇದೇ ತಿಂಗಳ 19ರಂದು 6 ಗಂಟೆಗೆ ಉದಯ ಟಿವಿಯಲ್ಲಿ ಕೂಲಿ ಚಿತ್ರ ಪ್ರಸಾರವಾಗಲಿದೆ.

ರಜನಿಯ ಕೂಲಿ ಸಿನಿಮಾದಲ್ಲಿ ಅಮೀರ್ ಖಾನ್, ಉಪೇಂದ್ರ, ಅಕ್ಕಿನೇನಿ‌ ನಾಗಾರ್ಜುನ್ ಸೇರಿದಂತೆ ಹಲವು ದಿಗ್ಗಜರು ಬಣ್ಣ ಹಚ್ಚಿದ್ದರು. ತಲೈವಾ ದೇವ ಪಾತ್ರದಲ್ಲಿ, ನಾಗಾರ್ಜುನ ಅಕ್ಕಿನೇನಿ ಸೈಮನ್ ಪಾತ್ರದಲ್ಲಿ, ಅಮೀರ್ ಖಾನ್ ದಹಾ ಹಾಗೂ ಉಪೇಂದ್ರ ಕಾಳೀಶನಾಗಿ ನಟಿಸಿದ್ದಾರೆ.

ಲೋಕೇಶ್ ಕನಕರಾಜ್ ನಿರ್ದೇಶನ ಮಾಡಿರುವ ‘ಕೂಲಿ’ ಸಿನಿಮಾದಲ್ಲಿ ರಚಿತಾ ರಾಮ್, ಶ್ರುತಿ ಹಾಸನ್, ಸೌಬಿನ್ ಶಾಹಿರ್, ಸತ್ಯರಾಜ್ ಪ್ರಮುಖ ಪಾತ್ರ ಮಾಡಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ.

error: Content is protected !!