‘ಅಪರಾಧಿ ನಾನಲ್ಲ’ ಚಿತ್ರದ ಟ್ರೇಲರ್ ಲಾಂಚ್…. ಜುಲೈ 3ಕ್ಕೆ ರಿಲೀಸ್
ಮೂವರು ಕೈದಿಗಳು ಜೈಲಿನಲ್ಲಿ ಇರ್ತಾರೆ. ಅವರು ಹೇಗೆ ಹೊರಗೆ ಬರ್ತಾರೆ ಅನ್ನೋದೆ ಕಥೆ. ಸದ್ಯ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಒಂದು ಕೊಲೆ ಸುತ್ತ ಒಂದಷ್ಟು ರೋಚಕ ವಿಚಾರಗಳು ಸಾಗುತ್ತವೆ. SLV ಕಲರ್ಸ್ ಅನುಗ್ರಹ ಫಿಲ್ಸ್ಮ್ ಬ್ಯಾನರ್ ನಲ್ಲಿ ಅಜಿತ್ ಚೌಟಾ ದೇವಸ್ಯ ನಿರ್ಮಾಣದಲ್ಲಿ ಯಶಂತ್ ಕಲ್ಲಡ್ಕ ನಿರ್ದೇಶನ ಮಾಡಿದ್ದಾರೆ. ವಿಕ್ರಂ ದೇವಾಡಿಗ ಮತ್ತು ಸಂದೀಪ್ ಶೆಟ್ಟಿ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿದ್ದಾರೆ.
ನಿರ್ದೇಶಕ ಯಶಂತ್ ಕಲ್ಲಡ್ಕ, ಚೆನ್ನಾಗಿ ಸಿನಿಮಾ ಮಾಡಿದ್ದೀವಿ. ಅಪರಾಧಿ ನಾನಲ್ಲ ಅನ್ನೋ ಟೈಟಲ್ ಯಾಕೆ ಅಂದ್ರೆ ಜೈಲಿನಲ್ಲಿ ಎಷ್ಟೋ ಜನ ಇರ್ತಾರೆ. ಆದರೆ ಅದೆಷ್ಟೋ ಜನ ಅಪರಾಧಿಗಳೇ ಆಗಿರೋದಿಲ್ಲ. ಒಂದು ಸತ್ಯ ಘಟನೆ ಇಟ್ಟುಕೊಂಡು, ಒಂದಷ್ಟು ಮಸಾಲ ಸೇರಿಸಿ ಹೆಣೆದಿದ್ದೇವೆ.
20 ವರ್ಷದಿಂದ ಇದೇ ಫೀಲ್ಡ್ ನಲ್ಲಿ ಇದ್ದೇನೆ. ಈಗ ಇದು ನನ್ನ ಡೈರೆಕ್ಷನ್ ನಲ್ಲಿ ಮೊದಲ ಸಿನಿಮಾ ಆಗಿದೆ ಎಂದಿದ್ದಾರೆ. ನಟ ಅರ್ಜುನ್ ದೇವ್ ಮಾತನ್ನಾಡಿ, ನಾನು ಅಪರಾಧಿ ಅಲ್ಲ. ಸಿನಿಮಾ ಬಗ್ಗೆ ಹೆಚ್ಚು ಹೇಳಿದ್ರೆ ಯಶಂತ್ ಅಪರಾಧಿ ಆಗ್ತಾರೆ. ಈ ಸಿನಿಮಾ ಮೂಲಕ ಯಶಂತ್ ಕಲ್ಲಡ್ಕ ಅವರಿಗೆ ಯಶಸ್ಸು ಸಿಗಲಿ. ಎಲ್ಲರ ಆಶೀರ್ವಾದ ಸಿನಿಮಾ ಮೇಲಿರಲಿ ಎಂದಿದ್ದಾರೆ.
ನಾಯಕಿ ಅಮೃತಾ ಮೂರ್ತಿ ಮಾತನ್ನಾಡಿ, ಅಪರಾಧಿ ನಾನಲ್ಲ ಸಿನಿಮಾವನ್ನ ಹೊಸಬರು ಮಾಡಿರೋದು. ಖುಷಿ ವಿಚಾರ ಅಂದ್ರೆ ಅರ್ಜುನ್ ಕಾಪಿಕಾಡ್ ಅವರದ್ದು. ಅವರ ಜೊತೆಗೆ ವರ್ಕ್ ಮಾಡಿದಾಗ ಅವರ ಬಗ್ಗೆ ಏನು ಗೊತ್ತಿರಲಿಲ್ಲ. ಆದರೆ ಅವರನ್ನ ಮಂಗಳೂರಿಗೆಲ್ಲಾ ಹುಲಿ ಅಂತಾನೇ ಕರೀತಾರೆ. ಈ ಸಿನಿಮಾದಲ್ಲಿ ನಾನು ಡಾಕ್ಟರ್. ಸಿನಿಮಾ ನೋಡಿದರೆ ಇನ್ನಷ್ಟು ವಿಚಾರ ತಿಳಿಯುತ್ತೆ ಎಂದಿದ್ದಾರೆ. ಅಮೃತಾ, ಅರ್ಜುನ್, ಪ್ರಮೋದ್ ಶೆಟ್ಟಿ, ನವಿಲ್ ಪಡಿಲು, ಅಶೋಕ್ ಹೆಗ್ಡೆ, ನೀತೂ ಶೆಟ್ಟಿ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ.
