Cini NewsSandalwood

ದಾಂಪತ್ಯದ ನಡುವೆ ಹಾರರ್ ಟಚ್ “ಪ್ರಣಯಂ” (ಚಿತ್ರವಿಮರ್ಶೆ-ರೇಟಿಂಗ್ : 3.5 /5)

ರೇಟಿಂಗ್ : 3.5 /5
ಚಿತ್ರ : ಪ್ರಣಯಂ
ನಿರ್ದೇಶಕ : ದತ್ತಾತ್ರೇಯ
ನಿರ್ಮಾಪಕ : ಪರಮೇಶ
ಸಂಗೀತ : ಮನೋಮೂರ್ತಿ
ಛಾಯಾಗ್ರಹಕ : ವಿ. ನಾಗೇಶ್ ಆಚಾರ್ಯ
ತಾರಾಗಣ : ರಾಜವರ್ಧನ್, ನೈನಾ ಗಂಗೂಲಿ , ಗೋವಿಂದೇ ಗೌಡ, ಮಂಥನ, ಪ್ರಶಾಂತ್, ಸಮೀಕ್ಷಾ, ಪ್ರಿಯಾ ತರುಣ್ ಹಾಗೂ ಮುಂತಾದವರು…

ಲವ್ , ಫ್ಯಾಮಿಲಿ ಡ್ರಾಮಾ , ಎಮೋಷನ್ , ಸಸ್ಪೆನ್ಸ್ , ರೋಮ್ಯಾಂಟಿಕ್ , ಥ್ರಿಲ್ಲರ್ ಹಾಗೂ ಹಾರರ್ ಕಂಟೆಂಟ್ ಹೀಗೆ ಹಲವು ವಿಚಾರಗಳೊಂದಿಗೆ ಪ್ರೇಕ್ಷಕರ ಗಮನವನ್ನು ಸೆಳೆಯಲು ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಪ್ರಣಯಂ”. ಸುಂದರ ತಾಣದ ನಡುವೆ ಇರುವ ಕಾಫಿ ಎಸ್ಟೇಟ್ ನ ಕುಟುಂಬ. ಆ ಮನೆಯ ಚಂದದ ಚೆಲುವೆ ಅಮೃತ (ನೈನಾ ಗಂಗೂಲಿ) ಳನ್ನ ಮದುವೆಯಾಗಲು ಅಮೆರಿಕದಿಂದ ತಂದೆ , ತಾಯಿ ಸೋದರಮಾವನ ಜೊತೆ ಬರುವ ಸೋದರಳಿಯ ಗೌತಮ್ (ರಾಜ್ ವರ್ಧನ್).

ಮನೆಯವರ ಆಸೆಯಂತೆ ನಿಶ್ಚಿತಾರ್ಥವು ಕೂಡ ನಡೆಯುತ್ತದೆ. ಇದರ ನಡುವೆ ನಿಗೂಢವಾಗಿ ಎದುರಾಗುವ ಒಂದಷ್ಟು ಘಟನೆಗಳು ನಾಯಕ ನಾಯಕಿಗೆ ಆತಂಕ ಮೂಡಿಸಿದೆ. ಇದೇ ಕುಟುಂಬದ ಹುಡುಗನೊಬ್ಬ ನಾಯಕಿ ಮೇಲಿನ ಆಸೆಗೆ ನಾಯಕನ ವಿರುದ್ಧ ಗಲಾಟೆ ಮಾಡಿಕೊಳ್ಳುತ್ತಾನೆ. ಇದೆಲ್ಲದರ ಹೊರತಾಗಿ ಈ ಇಬ್ಬರು ಪ್ರೇಮಿಗಳ ತುಂಟಾಟ , ತರಲೆ ರೋಮ್ಯಾಂಟಿಕ್ ಸಂದರ್ಭ ಕೆಲವರ ಕಣ್ಣಿಗೆ ಬೀಳುತ್ತದೆ. ವಿದೇಶಕ್ಕೆ ನವ ಜೋಡಿ ಹೋಗುವ ಕಾರಣಕ್ಕೆ ಮದುವೆಯು ಕೂಡ ನಡೆಯುತ್ತದೆ.

ಸಂಭ್ರಮದ ವಾತಾವರಣದ ನಡುವೆಯೇ ಹನಿಮೂನ್ ಗೆ ಹೊರಡಲು ಮುಂದಾಗುವ ಜೋಡಿ. ರೋಮ್ಯಾಂಟಿಕ್ ಲೈಫ್ ಅನುಭವಿಸುವ ಆತುರದಲ್ಲಿ ಕಾರು ಹತ್ತಿ ಹೊರಡುವ ಅಮೃತ , ಆದರೆ ಮನೆಯ ರೂಮಿನಲ್ಲಿ ಲಾಕ್ ಆಗಿರುವ ಗೌತಮ್. ಇದು ಮನೆಯವರ ಆತಂಕಕ್ಕೆ ಕಾರಣವಾಗುತ್ತದೆ. ಗೌತಮ್ ಹಾಗೂ ಕುಟುಂಬ ಅಮೃತಳನ್ನ ಹುಡುಕಲು ಮುಂದಾಗಿ ಜೊತೆಗೆ ಪೊಲೀಸ್ ಸ್ಟೇಷನ್ ಗೆ ಕಂಪ್ಲೇಂಟು ನೀಡುತ್ತಾರೆ. ನೆಟ್ವರ್ಕ್ ಇಲ್ಲದ ಸ್ಥಳಕ್ಕೆ ಹೋಗುವ ನವ ಜೋಡಿ ಸುಂದರ ವಾತಾವರಣ, ರೋಮ್ಯಾಂಟಿಕ್ ಮೂಡಿನ ಸಂದರ್ಭಗಳನ್ನು ಅನುಭವಿಸುತ್ತಾರೆ.

ಆದರೆ ಅಮೃತಳ ಆಸೆಯೇ ಮಾತ್ರ ಈಡೇರಿಸದೆ ಅವಳನ್ನು ಪ್ರೀತಿಸುತ್ತಿರುತ್ತಾನೆ. ನಿಜವಾದ ಗೌತಮ್ ಯಾರು ಎಂಬ ಪ್ರಶ್ನೆ ಎದುರಾಗುತ್ತದೆ. ಇದರ ಫ್ಲ್ಯಾಶ್ ಬ್ಯಾಕ್ ನಲ್ಲಿ ಕಾಲೇಜು ದಿನಗಳಲ್ಲಿ ಅಮೃತಗಳಿಗೆ ಒಬ್ಬ ಫ್ರೆಂಡ್ ಇರುತ್ತಾನೆ. ಅಚಾನಕ್ಕಾಗಿ ಒಂದು ದುರ್ಘಟನೆ ನಡೆದಿರುತ್ತದೆ. ಇದೆಲ್ಲವೂ ಇವಳ ಬದುಕಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ.
ನಾಯಕಿ ಜೊತೆ ಇದ್ದವನು ಯಾರು…
ನಾಯಕನಿಗೆ ಸತ್ಯ ತಿಳಿಯುತ್ತಾ.
ಯಾವುದು ದುರ್ಘಟನೆ…
ಜೋಡಿಗಳು ಒಂದಾಗುತ್ತಾರಾ.. ಇಲ್ವಾ… ಎಂಬುದನ್ನ ತಿಳಿಯಬೇಕಾದರೆ ಕ್ಲೈಮ್ಯಾಕ್ಸ್ ವರ್ಗು ಕಾಯ್ಬೇಕು , ನೀವೆಲ್ಲರೂ ಚಿತ್ರ ನೋಡಬೇಕು.

ಈ ಚಿತ್ರದ ನಿರ್ಮಾಪಕ ಪರಮೇಶ ತಾವೇ ಕಥೆ ನೀಡಿ ಕುತೂಹಲ , ಸಸ್ಪೆನ್ಸ್ ಮೂಲಕ ರೋಮ್ಯಾಂಟಿಕ್ ಇಂಟೆನ್ಸ್ ಲವ್ ಸ್ಟೋರಿ ಸ್ಟೋರಿಯನ್ನು ನೀಡುವ ನಿಟ್ಟಿನಲ್ಲಿ ಬಹಳಷ್ಟು ಶ್ರಮ ಪಟ್ಟಂತಿದೆ. ಇಂತಹ ಕಂಟೆಂಟ್ ಅನ್ನು ನಿರ್ದೇಶಕರು ಸೂಕ್ಷ್ಮವಾಗಿ ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ.

ಸಂಬಂಧಗಳ ಬೆಸುಗೆ , ಪ್ರೀತಿಯ ಸೆಳೆತ , ಆಕರ್ಷಣೆ , ಹಾರರ್ ಕಂಟೆಂಟ್ ಮೂಲಕ ಗಮನ ಸೆಳೆಯುವಂತೆ ಮಾಡಿದ್ದು , ಕೆಲವು ಸನ್ನಿವೇಶಗಳು ಇದ್ದಲ್ಲೇ ಗಿರಿಕಿ ಹೊಡೆದಂತಿದೆ. ಇನ್ನಷ್ಟು ವೇಗ ಮಾಡಬಹುದಿತ್ತು. ಕ್ಲೈಮಾಕ್ಸ್ ಕಸಿವಿಸಿ ಅನಿಸಿದರು ಸಸ್ಪೆನ್ಸ್ , ಹಾರರ್ ಗಮನ ಸೆಳೆಯುತ್ತದೆ. ಇನ್ನು ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಅಬ್ಬರಿಸಿದ್ದು , ಛಾಯಾಗ್ರಹಕರ ಕೆಲಸ ಉತ್ತಮವಾಗಿದೆ. ಇನ್ನು ನಾಯಕನಾಗಿ ರಾಜವರ್ಧನ್ ಅತಿರೇಕವಿಲ್ಲದೆ ಸಮರ್ಥವಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದು , ಎಂದಿನಂತೆ ಆಕ್ಷನ್ ದೃಶ್ಯದಲ್ಲಿ ಮಿಂಚಿದ್ದು, ರೋಮ್ಯಾಂಟಿಕ್ ಹಾಟ್ ಸನ್ನಿವೇಶಕ್ಕೂ ಸೈ ಎಂದಿದ್ದಾರೆ.

ಇನ್ನು ನಾಯಕಿ ಪಾತ್ರ ನಿರ್ವಹಿಸಿರುವ ನೈನಾ ಗಂಗೂಲಿ ಬಹಳ ಬೋಲ್ಡ್ ಆಗಿ ಕಣ್ಕುವಂತೆ ಅಭಿನಯಿಸಿದ್ದಾರೆ.ರೋಮ್ಯಾಂಟಿಕ್ ದೃಶ್ಯಗಳು ಪಡ್ಡೆ ಹುಡುಗರ ನಿದ್ದೆ ನಿದ್ದೆಗೆಡಿಸುವಂತಿದೆ. ಬಹಳ ಹೈಪರ್ ಆಕ್ಟಿವ್ ಆಗಿ ತನ್ನ ಪಾತ್ರಕ್ಕೆ ಜೀವ ತುಂಬಿ ಅಭಿನಯ ನೀಡಿದ್ದು , ಮುಂದೆ ಉತ್ತಮ ಭವಿಷ್ಯ ಸಿಗುವ ಸಾಧ್ಯತೆ ಈ ಬೆಡಗಿಗೆ ಇದೆ. ಇನ್ನು ಚಿತ್ರದ ಮತ್ತೊಂದು ಪ್ರಮುಖ ಪಾತ್ರ ಪ್ರೀ ಕ್ಲೈಮಾಕ್ಸ್ ಗೆ ಬಂದು ಇಡೀ ಚಿತ್ರವನ್ನು ಆವರಿಸಿಕೊಳ್ಳುವ ರೀತಿ ಅದ್ಭುತವಾಗಿದೆ. ಹಾಗೆ ಉಳಿದ ಪಾತ್ರದಾರಿಗಳು ಕೂಡ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ರೋಮ್ಯಾಂಟಿಕ್ , ಥ್ರಿಲ್ಲರ್ , ಹಾರರ್ ಚಿತ್ರ ಪ್ರೇಮಿಗಳಿಗೆ ಬೇಗ ಇಷ್ಟವಾಗುವ ಈ ಚಿತ್ರವನ್ನು ಒಮ್ಮೆ ನೋಡುವಂತಿದೆ.

error: Content is protected !!