Cini NewsSandalwood

“ಪೆನ್ ಡ್ರೈವ್” ಚಿತ್ರದ ಚಿತ್ರೀಕರಣ‌‌ ಹಾಗೂ ಡಬ್ಬಿಂಗ್ ಮುಕ್ತಾಯ

Spread the love

ಕನ್ನಡ ಚಿತ್ರರಂಗದೊಂದಿಗೆ ಮೂವತ್ತು ವರ್ಷಗಳ ನಂಟಿರುವ ಸೆಬಾಸ್ಟಿನ್ ಡೇವಿಡ್ ಅವರ ನಿರ್ದೇಶನಲ್ಲಿ ಮೂಡಿಬರುತ್ತಿದೆ “ಪೆನ್ ಡ್ರೈವ್. ವಿಭಿನ್ನ ಕಥಾಹಂದರ‌ ಹೊಂದಿರುವ ಈ ಚಿತ್ರದ ಮುಖ್ಯಪಾತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀ ಹಾಗೂ ” ಬಿಗ್ ಬಾಸ್” ಖ್ಯಾತಿಯ ತನಿಷಾ ಕುಪ್ಪಂಡ ಹಾಗೂ ಕಿಶನ್ ಅಭಿನಯ .

ಆರ್ ಹೆಚ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಎನ್ ಹನುಮಂತರಾಜು ಹಾಗೂ ಲಯನ್ ಎಸ್ ವೆಂಕಟೇಶ್ ನಿರ್ಮಾಣದ, ಸೆಬಾಸ್ಟಿನ್ ಡೇವಿಡ್ ನಿರ್ದೇಶನದ ಹಾಗೂ ಕನಸಿನ ರಾಣಿ ಮಾಲಾಶ್ರೀ ಮತ್ತು “ಬಿಗ್ ಬಾಸ್” ಖ್ಯಾತಿಯ ತನಿಷಾ ಕುಪ್ಪಂಡ , ಕಿಶನ್ ಅಭಿನಯದ “ಪೆನ್ ಡ್ರೈವ್” ಚಿತ್ರದ ಚಿತ್ರೀಕರಣ‌‌ ಹಾಗೂ ಡಬ್ಬಿಂಗ್ ಮುಕ್ತಾಯವಾಗಿದೆ. ರೀರೆಕಾರ್ಡಿಂಗ್ ನಡೆಯುತ್ತಿದೆ.

ಕಳೆದ ಮೂವತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ,‌ ನಿರ್ದೇಶಕರಾಗಿ ಹಾಗೂ ಸ್ಟುಡಿಯೋ ಮಾಲೀಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಬಾಸ್ಟಿನ್ ಡೇವಿಡ್ ಅವರು ಈವರೆಗೂ ಹದಿನೈದಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ.

ಪ್ರಸ್ತುತ ವಿಭಿನ್ನ ಕಥಾಹಂದರ ಹೊಂದಿರುವ “ಪೆನ್ ಡ್ರೈವ್” ಚಿತ್ರವನ್ನು ನಿರ್ದೇಶಿಸುತ್ತಿದ್ದು, “ಚಾಮುಂಡಿ”, “ದುರ್ಗಿ” ಮುಂತಾದ ಆಕ್ಷನ್ ಚಿತ್ರಗಳಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಆಕ್ಷನ್ ಕ್ವೀನ್ ಎಂದು ಜನಪ್ರಿಯರಾಗಿರುವ ಮಾಲಾಶ್ರೀ ಅವರು ಹಾಗೂ “ಬಿಗ್ ಬಾಸ್” ನಂತರ ಬೆಂಕಿ ಅಂತಲೇ ಕರೆಯಲ್ಪಡುವ ತನಿಷಾ ಕುಪ್ಪಂಡ ಇಬ್ಬರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇಬ್ಬರು ನಟಿಯರ ಸಮಾಗಮದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಬಗ್ಗೆ ಅಭಿಮಾನಿ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಹಾಗೂ ಕುತೂಹಲ ಇದೆ. ಇವರ ಜೊತೆಗೆ ‌”ಬಿಗ್ ಬಾಸ್” ಖ್ಯಾತಿಯ ಕಿಶನ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಮಾಲಾಶ್ರೀ, ತನಿಷಾ ಕುಪ್ಪಂಡ, ಕಿಶನ್, ರಾಧಿಕಾ ರಾಮ್, ಸಂಜನಾ ನಾಯ್ಡು, ಅರ್ಚನ, ರೇಣುಕಾ, ಗೀತಾ, ಭಾಗ್ಯ, ಗೀತಪ್ರಿಯ, ಕರಿಸುಬ್ಬು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಡಾ||ವಿ.ನಾಗೇಂದ್ರ ಪ್ರಸಾದ್ ಗೀತರಚನೆ ಹಾಗೂ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ನಾಗೇಶ್ ಅವರು ಸಂಕಲನ ಕಾರ್ಯದೊಂದಿಗೆ ಸಂಭಾಷಣೆಯನ್ನು ಬರೆಯುತ್ತಿದ್ದಾರೆ‌.

Visited 1 times, 1 visit(s) today
error: Content is protected !!