Cini NewsSandalwood

”ಸೆಕೆಂಡ್ ಕೇಸ್ ಆಫ್ ಸೀತಾರಾಮ್” ಸಿನಿಮಾಗೆ ಪವನ್ ಒಡೆಯರ್ ಸಾಥ್…ಚಿತ್ರ ಪ್ರೆಸೆಂಟ್ ಗೆ ಮುಂದಾದ ಸ್ಟಾರ್ ಡೈರೆಕ್ಟರ್

Spread the love

ಸ್ಯಾಂಡಲ್‌ವುಡ್‌ನ ಯಶಸ್ವಿ ನಿರ್ದೇಶಕರ ಪಟ್ಟಿಯಲ್ಲಿ ಸ್ಥಾನ ಪಡೆದವರ ಪೈಕಿ ಪವನ್‌ ಒಡೆಯರ್‌ ಒಬ್ಬರು. ಅವರು ಗೂಗ್ಲಿ, ರಣವಿಕ್ರಮ, ಗೋವಿಂದಾಯ ನಮಃ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಜೊತೆಗೆ ಪವನ್ ನಿರ್ಮಾಣದಲ್ಲಿಯೂ ಹೆಸರು ಮಾಡಿದ್ದಾರೆ. ಹೊಸ ಪ್ರತಿಭೆಗಳಿಗೆ ಸಿನಿಮಾ ನಿರ್ಮಾಣ‌ ಮಾಡುತ್ತಿರುವ ಅವರೀಗ ಹೊಸ ಹೆಜ್ಜೆ ಇಟ್ಟಿದ್ದಾರೆ. ಪವನ್ ಒಡೆಯರ್ ಸಿನಿಮಾ ಪ್ರೆಸೆಂಟ್ ಗೆ ಇಳಿದಿದ್ದಾರೆ.

ನಿರ್ದೇಶನ‌ ಜೊತೆಗೆ ನಿರ್ಮಾಣದಲ್ಲಿಯೂ ಬ್ಯುಸಿಯಾಗಿರುವ ಪವನ್ ಒಡೆಯರ್ ಈಗ ಸಿನಿಮಾಗಳ ಪ್ರೆಸೆಂಟ್ ಕೈ ಹಾಕಿದ್ದಾರೆ. ಅದರ ಮೊದಲ ಭಾಗವೆಂಬಂತೆ ಸೆಕೆಂಡ್ ಕೇಸ್ ಆಫ್ ಸೀತಾರಾಮ್ ಸಿನಿಮಾವನ್ನು ಪ್ರೆಸೆಂಟ್ ಮಾಡಲು ಮುಂದಾಗಿದ್ದಾರೆ. 2021ರಲ್ಲಿ ತೆರೆಕಂಡ ವಿಜಯ ರಾಘವೇಂದ್ರ ನಟನೆಯ ‘ಸೀತಾರಾಮ್‌ ಬಿನೋಯ್‌’ ಸಿನಿಮಾ ಸೀಕ್ವೆಲ್‌ ಆಗಿರುವ ‘ಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್‌’ ನೋಡಿ ಪವನ್ ಒಡೆಯರ್ ಥ್ರಿಲ್ ಆಗಿದ್ದಾರೆ. ‌ಸೀಟಿನ ತುದಿಗೆ ಪ್ರೇಕ್ಷಕರನ್ನು‌ ಕುರಿಸುವ ಈ‌‌ ಚಿತ್ರವನ್ನು ತಾವೇ‌ ಪ್ರೆಸೆಂಟ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ವಿಜಯ್ ರಾಘವೇಂದ್ರ ಈ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದಾರೆ. ದೇವಿಪ್ರಸಾದ್‌ ಶೆಟ್ಟಿ ಈ ಸಿನಿಮಾದ ಕಥೆ ಬರೆದಿದ್ದು, ನಿರ್ದೇಶನ‌ ಮಾಡಿದ್ದಾರೆ.‌ಜೊತೆಗೆ ಸಾತ್ವಿಕ್‌ ಹೆಬ್ಬಾರ್‌ ಜೊತೆ ನಿರ್ಮಾಣದಲ್ಲೂ ಕೈಜೋಡಿಸಿದ್ದಾರೆ. ಸೆಕೆಂಡ್ ಕೇಸ್ ಆಫ್ ಸೀತಾರಾಮ್ ಸಿನಿಮಾಗೆ ಹೇಮಂತ್ ಆಚಾರ್ ಛಾಯಾಗ್ರಹಣ, ನವನೀತ್ ಶ್ಯಾಮ್ ಸಂಗೀತ ನಿರ್ದೇಶನ, ಶಶಾಂಕ್ ನಾರಾಯಣ್ ಸಂಕಲನ, ಭವಾನಿ ಶಂಕರ್‌ ಕಲಾ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

Visited 1 times, 1 visit(s) today
error: Content is protected !!