Cini NewsSandalwood

ಯಶಸ್ವಿ 25ನೇ ದಿನದ ಸಂಭ್ರಮದಲ್ಲಿ “ಪರಿಶುದ್ಧಂ” ಚಿತ್ರತಂಡ

ಇತ್ತೀಚಿನ ದಿನಗಳಲ್ಲಿ ಬಿಡುಗಡೆಗೊಂಡ ಬಹುತೇಕ ಚಿತ್ರಗಳು ಚಿತ್ರಮಂದಿರದಲ್ಲಿ ಒಂದು ಅಥವಾ ಎರಡು ವಾರ ಉಳಿಯುವುದೇ ಬಹಳ ಕಷ್ಟ , ಇಂತಹ ಸಮಯದಲ್ಲಿ ಯಶಸ್ವಿ 25 ದಿನವನ್ನು ಪೂರೈಸಿರುವ ಚಿತ್ರ “ಪರಿಶುದ್ಧಂ”.ವಿಭಿನ್ನ ಕಥಾಹಂದರ ಹೊಂದಿರುವ ’ಪರಿಶುದ್ಧಂ’ ಚಿತ್ರವು ಕಳೆದ ತಿಂಗಳು ಬಿಡುಗಡೆಗೊಂಡಿದು, ಎಲ್ಲಾ ಕಡೆಗಳಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿರುವುದರಿಂದ ತಂಡಕ್ಕೆ ಸಂತಸ ತಂದಿದೆ.

ಅದರಲ್ಲೂ ಸಿನಿಮಾಕ್ಕೆ ಕಥೆ , ಸಾಹಿತ್ಯ , ಸಂಗೀತ , ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಪಾಲುದಾರುರಾಗಿರುವ ಆರೋನ್ ಕಾರ್ತಿಕ್‌ ವೆಂಕಟೇಶ್ ಅವರ ಶ್ರಮ ನಿಜಕ್ಕೂ ಸಾರ್ಥಕ ಅನಿಸಿದೆ. ಪ್ರಾರಂಭದಿಂದ ಕೊನೆತನಕ ಎಲ್ಲಾ ಜವಬ್ದಾರಿಗಳನ್ನು ನಿಭಾಯಿಸಿದ್ದು ಯಶಸ್ಸಿಗೆ ಕಾರಣವಾಗಿದೆ.

ಮೊನ್ನೆಯಷ್ಟೇ ಯಶಸ್ವಿ 25 ದಿನಗಳನ್ನು ಪೂರೈಸಿದ್ದರಿಂದ ತಂಡವು ಚಿತ್ರಮಂದಿರದಲ್ಲಿ ಪ್ರೇಕ್ಷಕರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ. ನಟಿ ಸ್ಪರ್ಶ ರೇಖಾ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಉಳಿದಂತೆ ಬಂದಿರುವ ಎಲ್ಲಾ ಪಾತ್ರದಾರಿಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದು , ಅತಿಥಿಯಾಗಿ ಎಂ.ಡಿ.ಕೌಶಿಕ್ ಕೊನೆ ದೃಶ್ಯದಲ್ಲಿ ಬರಲಿದ್ದು, ಭಾಗ-2ರಲ್ಲಿ ಇವರಿಂದಲೇ ಸಿನಿಮಾವು ಶುರುವಾಗುತ್ತದೆ ಅಂತ ಬಿಂಬಿಸಲಾಗಿದೆ.

ರೋಹನ್‌ ಕಿಡಿಯಾರ್ ಬಂಡವಾಳ ಹೂಡುವ ಜತೆಗೆ ಸ್ವರ್ಶ ರೇಖಾ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ. ಕುಮಾರ್‌ ರಾಥೋಡ್ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ತಾರಾಗಣದಲ್ಲಿ ದಿಶಾ ಪೂವಯ್ಯ ಉಳಿದಂತೆ ಯತಿರಾಜ್,ಭಾರ್ಗವ್, ಅರ್ಚನಾ, ವಿಕ್ಟರಿ ವಾಸು, ಕುರಿರಂಗ, ಮೈಸೂರು ರಮಾನಂದ್, ರಾಜ್‌ಚರಣ್, ದುಬೈರಫೀಕ್ ಮುಂತಾದವರು ಅಭಿನಯಿಸಿದ್ದಾರೆ. ಸಂಕಲನ ನಿಖಿಲ್, ಸಂಭಾಷಣೆ ವಿನಯ್‌ಮೂರ್ತಿ, ಸಾಹಸ ರಾಮ್‌ದೇವ್, ನೃತ್ಯ ಕಿಶೋರ್ ಅವರದಾಗಿದೆ. ಒಟ್ಟಾರೆ ಎಲ್ಲರ ಮೆಚ್ಚುಗೆ ಪಡೆದು ಚಿತ್ರ ಯಶಸ್ವಿ ಪ್ರದರ್ಶನವನ್ನು ಮುಂದುವರೆಸಿದೆ.

 

error: Content is protected !!