Cini NewsSandalwood

“ನಿಮ್ದೆ ಕಥೆ” ಚಿತ್ರೀಕರಣ ಮುಕ್ತಾಯ…ನವೆಂಬರ್ ನಲ್ಲಿ ಚಿತ್ರ ಬಿಡುಗಡೆ.

Spread the love

ಕನ್ನಡ ಚಿತ್ರರಂಗದಲ್ಲಿ ಹೊಸಬರ ಸಿನಿಮಾದ ಪಟ್ಟಿಯಲ್ಲಿ ಈಗ ನಿಮ್ದೆ ಕಥೆ ಎನ್ನುವ ಚಿತ್ರವು ಸೇರಿದೆ, Love Moktail ಖ್ಯಾತಿಯ ಅಭಿಲಾಷ ಧಳಪತಿ ಮತ್ತು ರಾಷಿಕಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿ ಜೊತೆಗೆ ಸಿಹಿ ಕಹಿ ಚಂದ್ರು, ಕಾಮಿಡಿ ಕಿಲಾಡಿಯ ಕೋಳಿ ಕಳ್ಳ ಮನೋಹರ್ ಗೌಡ, ಕೆ ವಿ ಮಂಜಯ್ಯ, ಜ್ಯೋತಿ ಮರೂರ್ ಹಾಗೂ ಮುಂತಾದವರು ಈ ಚಿತ್ರದಲ್ಲಿ ನಟಿಸಿದಾರೆ.

ಶ್ರೀನಿವಾಸ ರೆಡ್ಡಿ ಮತ್ತು ಅರವಿಂದ್ ಯು ಎಸ್ ಜಂಟಿಯಾಗಿ ನಿಮ್ದೆ ಕಥೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ, ಸಿ ಎಸ್ ರಾಘವೇಂದ್ರ ಅವರು ನಿಮ್ದೆ ಕಥೆ ಚಿತ್ರದ ನಿರ್ದೇಶಕರು, ಪ್ರವೀಣ್ ನಿಕೇತನ್ ಅವರ ಸಂಗೀತ ಸಂಯೋಜನೆ, ಪ್ರಶಾಂತ್ ಸಾಗರ್ ಅವರ ಛಾಯಾಗ್ರಹಣವಿದ್ದು, ಸುನಿಲ್ ಎಸ್ ಅವರ ಸಂಕಲನವಿದೆ ಹಾಗೂ ಇನ್ನೂ ಹಲವು ತಂತ್ರಜ್ಞರು ನಿಮ್ದೆ ಕಥೆ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.

ಇದೊಂದು ಹಾಸ್ಯ ತುಂಬಿದ, ಎಮೋಷನ್ ಹಾಗೂ ಸ್ವಲ್ಪ ಸಸ್ಪೆನ್ಸ್ ಕೂಡ ಒಳಗೊಂಡು ಪ್ರೇಕ್ಷಕರಿಗೆ ರಂಜಿಸಲು ಬೇಕಾದ ಬಹಳಷ್ಟು ಅಂಶಗಳು ನಿಮ್ದೆ ಕಥೆ ಚಿತ್ರದಲ್ಲಿ ನಾವು ನೋಡಬಹುದು ಎಂದು ನಿರ್ದೇಶಕರು ಹೇಳಿದ್ದಾರೆ. ಬೆಂಗಳೂರು ಮತ್ತು ಮೈಸೂರು ಸುತ್ತ ಮುತ್ತ 40 ದಿನಗಳ ಕಾಲ ಚಿತ್ರೀಕರಣ ಮಾಡಿದ್ದು ಈಗ ನಿಮ್ದೆ ಕಥೆ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯಗೊಂಡು, ಪೋಸ್ಟ್ ಪ್ರೊಡಕ್ಷನ್ ಕೆಲಸವು ಮುಕ್ತಾಯ ಹಂತದಲ್ಲಿ ಇದ್ದು, ಇದೇ ವರ್ಷ ಅಂದ್ರೆ 2024 ನವೆಂಬರ್ ತಿಂಗಳಿನಲ್ಲಿ ಚಿತ್ರ ಬಿಡುಗಡೆಯಾಗಲು ಎಲ್ಲಾ ಸಿದ್ಧತೆ ನಡೆಯುತ್ತಿದೆ.

ನಿಮ್ದೆ ಕಥೆ ಚಿತ್ರದ ದ್ವನಿ ಸುರುಳಿ ಬ್ಲೂ ಸ್ಕೈ ಸ್ಟುಡಿಯೋಸ್ ಆಡಿಯೋದಲ್ಲಿ ಬಿಡುಗಡೆಗೊಳಿಸಲು ತಯಾರಿ ನೆಡೆಸಿದ್ದು ಹಾಡುಗಳು ನಿಮ್ಮನ್ನು ರಂಜಿಸಲಿವೆ. ಸದ್ಯದಲ್ಲೇ ಚಿತ್ರದ ಮೊಷನ್ ಪೋಸ್ಟರ್ ಬಿಡುಗಡೆಗೊಳಿಸಿ ಚಿತ್ರದ ಪ್ರಚಾರದ ಕೆಲಸಗಳಿಗೆ ಚಾಲನೆ ನೀಡಲು ಚಿತ್ರತಂಡ ನಿರ್ಧರಿಸಿದೆ.

Visited 1 times, 1 visit(s) today
error: Content is protected !!