ಯುವ ಪ್ರತಿಭೆಗಳ “ಆರ್‌ಪಿ” ಚಿತ್ರದ ಮೋಷನ್ ಪೋಸ್ಟರ್, ಟೀಸರ್ ಬಿಡುಗಡೆ.
ಹೊಸ ಪ್ರತಿಭೆಗಳ ತಂಡವೊಂಂದು *ಆರ್‌ಪಿ* ನಿಮಾವನ್ನು ಸಿದ್ದಪಡಿಸುತ್ತಿದ್ದಾರೆ. ಅಡಿಬರಹದಲ್ಲಿ ಬ್ಲಾಕ್ ಅಂಡ್ ವೈಟ್ ಅಂತ ಹೇಳಿಕೊಂಡಿದೆ. ಪ್ರಚಾರದ ಎರಡನೇ ಹಂತವಾಗಿ ಮೋಷನ್ ಪೋಸ್ಟರ್ ಮತ್ತು 4 ನಿಮಿಷದ ಪಾತ್ರಗಳ ಪರಿಚಯದ ಟೀಸರ್ ಬಿಡುಗಡೆ ಕಾರ್ಯಕ್ರಮ ಎಂಎಂಬಿ ಲೆಗಸಿದಲ್ಲಿ ಅದ್ದೂರಿಯಾಗಿ ನಡೆಯಿತು. ಹಿರಿಯ ನಟ ಕರಿಸುಬ್ಬು ಹಾಗೂ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್.ಕೆ.ವಿಶ್ವನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.
ಡಿಎಲ್ ಗ್ರೂಪ್ಸ್ ಫಿಲಿಂಸ್, ಕಬ್ಬಾಳಮ್ಮ ಕ್ರಿಯೇಶನ್ ಅಡಿಯಲ್ಲಿ *ಯುವರಾಜ್.ಎಸ್(ಬ್ಯಾಲದಕೆರೆ) ಸಿನಿಮಾಕ್ಕೆ ಕಥೆ,ಚಿತ್ರಕಥೆ,ಸಾಹಿತ್ಯ,ಸಂಭಾಷಣೆ ಮತ್ತು ನಿರ್ದೇಶನ* ಬಂಡವಾಳ ಹೂಡುವ ಖತರ್‌ನಾಕ್ ಖಳನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಇವರಿಗೆ ನಿರ್ದೇಶನದಲ್ಲಿ ಸಹಕಾರಿಯಾಗಿ ನೃತ್ಯ ಸಂಯೋಜಕ ರಾಜ್‌ದೇವ್ ಇರುತ್ತಾರೆ. ಶೀಲಾನಾಯ್ಡು, ರಾಘವೇಂದ್ರಪ್ರಸಾದ್.ಜಿ, ಕಲ್ಪನಾ.ಆರ್, ಶ್ರೀನಿವಾಸ್.ಎನ್.ಪಿ, ವಿನಯ್‌ಕುಮಾರ್, ಶಶಿಕಾಂತ್‌ಪೂಜಾರಿ, ಶ್ರೀನಿವಾಸುಲು.ಕೆ., ಬಾವಿಗಡ್ಡ ಎರ್ರಿಸ್ವಾಮಿ, ವೀಣಾಮೋಹಿತ್‌ಕುಮಾರ್, ಜಿ.ಲಿಂಗೇಶ್, ಬಿ.ನಾಗೇಶ್, ಅನಿಲ್‌ಗೌಡ್ರು ಇವರುಗಳು ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಗೆಳಯ ರಾಘವೇಂದ್ರ ಪ್ರಸಾದ್ ಅವರ ಜೀವನದಲ್ಲಿ ನಡೆದ, ನಡೆಯುತ್ತಿರುವ ಒಂದಷ್ಟು ಘಟನೆಗಳನ್ನು ಹೆಕ್ಕಿಕೊಂಡು ಚಿತ್ರಕಥೆ ಸಿದ್ದಪಡಿಸಲಾಗಿದೆ. ಅದಕ್ಕಾಗಿ ಆರ್‌ಪಿ ಎಂಬುದಾಗಿ ಟೈಟಲ್ ಇಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರಕೃತಿ ನಾಶವಾಗುತ್ತಿದ್ದರೂ ಅದನ್ನು ನಾವು ಮರೆಯುತ್ತಿದ್ದೇವೆ. ಇದು ಶುರುವಾಗುವುದು ಹಗಲಲ್ಲಿ. ರಾತ್ರಿ ಇದಕ್ಕೆ ವಿರುದ್ದವಾಗಿ ಕೆಟ್ಟದು ನಡೆಯುತ್ತದೆ. ಇಷ್ಟ ಮಾತ್ರ ಹೇಳಬಹುದು. ನಾಯಕ ರಾಘವೇಂದ್ರಪ್ರಸಾದ್.ಜಿ, ನಾಯಕಿ ಶ್ರೀನಿಧಿ, ಲಯಕೋಕಿಲ, ಬಾಲಕಲಾವಿದ ರುಗಳಾದ ನಿಖಿಲ್.ಆರ್. ಮತ್ತು ದಕ್ಷಿತ್‌ಗೌಡ ಮೊದಲ ಹಂತದಲ್ಲಿ ಆಯ್ಕೆಯಾಗಿದ್ದಾರೆ. ಮತ್ತಷ್ಟು ಕಲಾವಿದರ ಆಯ್ಕೆ ಪ್ರಕಿಯೆ ಶುರುವಾಗಿದೆ. ಆದಿಚುಂಚನಗಿರಿ ಸಮೀಪದ ಹಳ್ಳಿಗಳಲ್ಲಿ ಸಂಪೂರ್ಣ ಚಿತ್ರೀಕರಣ ನಡೆಸಲಾಗುವುದು. ಎಲ್ಲವನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಯುವರಾಜ್.ಎಸ್ ಮಾಹಿತಿ ಹರಿಬಿಟ್ಟರು.
ಛಾಯಾಗ್ರಹಣ ನಾಗಶೆಟ್ಟಿ ಮಾಳಗಿ, ಸಂಕಲನ ಮುತ್ತುರಾಜ್, ವಿಎಫ್‌ಎಕ್ಸ್ ನೈಕ್‌ಲಾರೆನ್ಸ್ ಅವರದಾಗಿದೆ. ಅಂದ ಹಾಗೆ ಸಿನಿಮಾವು ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ ಹಾಗೂ ಮಲೆಯಾಳಂ ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಇದಕ್ಕೂ ಮುನ್ನ ಸ್ಟುಡಿಯೋ 2,3,4 ತಂಡದಿಂದ ನೃತ್ಯ ಪ್ರದರ್ಶನ ಗಮನ ಸೆಳೆಯುತು.