Cini NewsMovie ReviewSandalwood

ಭಾವನಾತ್ಮಕ ಸಂಬಂಧದಲ್ಲಿ ಪುನರ್ಜನ್ಮದ ಉಸಿರು “ನಾನು ಮತ್ತು ಗುಂಡ 2” (ಚಿತ್ರವಿಮರ್ಶೆ-ರೇಟಿಂಗ್ : 3.5/5)

ರೇಟಿಂಗ್ : 3.5/5
ಚಿತ್ರ : ನಾನು ಮತ್ತು ಗುಂಡ 2
ನಿರ್ದೇಶಕ, ನಿರ್ಮಾಪಕ : ರಘು ಹಾಸನ್
ಸಂಗೀತ : ಆರ್‌. ಪಿ. ಪಟ್ನಾಯಕ್
ಛಾಯಾಗ್ರಾಹಣ : ತನ್ವಿಕ್
ತಾರಾಗಣ : ರಾಕೇಶ್ ಆಡಿಗ, ರಚನಾ ಇಂದರ್, ಬಾಲ ನಟ ಜೀವನ್,ಅವಿನಾಶ್, ವಿಜಯ್ ಚಂಡೂರ್ , ಗೋವಿಂದೇಗೌಡ , ನಯನ ಹಾಗೂ ಸಿಂಬು, ಬಂಟಿ ಎಂಬ ನಾಯಿಯು ನಟಿಸಿದೆ.

ವಿಧಿಯ ಆಟ ಬಲ್ಲವರ್ಯಾರು… ಜೀವನವೇ ಒಂದು ಪಾಠ ಇದ್ದಂತೆ. ನಾವು ಬಯಸಿದ್ದಕ್ಕಿಂತ , ನಮಗೆ ಎದುರಾಗುವ ಅದೆಷ್ಟೋ ಘಟನೆಗಳು ನಮ್ಮ ಪಯಣದ ಹಾದಿಗೆ ಹೊಸ ದಿಕ್ಕನ್ನೆ ತೋರಿಸುತ್ತದೆ. ಆಧ್ಯಾತ್ಮಿಕವಾಗಿ ದೈವದ ನಂಬಿಕೆ , ಪುನರ್ಜನ್ಮದ ಸುಳಿವು , ಭಾವನಾತ್ಮಕ ಸಂಬಂಧ , ಸ್ನೇಹ , ಪ್ರೀತಿ , ಒಡನಾಟದ ನಡುವೆ ಮನುಷ್ಯ ಹಾಗೂ ನಾಯಿಯ ಸಂಬಂಧ ಬೆಸುಗೆಯ ಸುತ್ತ ಮನಮುಟ್ಟುವ ಕಥಾನಕದೊಂದಿಗೆ ನಾನು ಮತ್ತು ಗುಂಡ ಚಿತ್ರದ ಮುಂದುವರೆದ ಭಾಗವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ನಾನು ಮತ್ತು ಗುಂಡ 2”.

ಈ ಹಿಂದೆ ಶಂಕರ( ಶಿವರಾಜ್ ಕೆ . ಆರ್ . ಪೇಟೆ ) ನ ಅಗಲಿಕೆಯ ನೋವನ್ನು ಆರಗಿಸಿಕೊಳ್ಳಲಾಗದ ಗುಂಡ (ನಾಯಿ) ಶಂಕರನ ಸಮಾಧಿಯ ಬಳಿ ಕಾಲ ಕಳೆಯುತ್ತಿರುತ್ತದೆ. ದಿನ ಕಳೆದಂತೆ ಗರ್ಭಿಣಿಯಾಗಿದ್ದ ಶಂಕರನ ಪತ್ನಿ ( ಸಂಯುಕ್ತ ಹೊರನಾಡು) ಗಂಡು ಮಗುವಿಗೆ ಜನ್ಮವನ್ನು ನೀಡುತ್ತಾಳೆ.

ಮತ್ತೆ ತನ್ನ ಯಜಮಾನ ಶಂಕರ ಮಗುವಾಗಿ ಜನ್ಮ ಪಡೆದಿದ್ದಾನೆ ಅಂದುಕೊಳ್ಳುವ ಗುಂಡ(ನಾಯಿ) ಮನೆಯ ಒಳಗೆ ಪ್ರವೇಶ ಮಾಡಿ ಪುಟ್ಟ ಮಗುವಿನ ಸುತ್ತ ಓಡಾಡುತ್ತಾನೆ. ತಂದೆಯ ಹೆಸರನ್ನೇ ಹೊಂದಿರುವ ಶಂಕರ ಬೆಳೆದಂತೆ ಶಾಲೆಗೆ ಹೋದರು, ಅವನ ಹಿಂದೆಯೇ ಹೋಗುವಾಗ ಗುಂಡ, ಇದು ಮಗುವಿಗೆ ಇಷ್ಟವಾಗುವುದಿಲ್ಲ , ಅವನು ನಾಯಿಯನ್ನು ಬೈಯುತ್ತಾನೆ, ಇದನ್ನು ಗಮನಿಸುವ ಶಂಕರನ ಸ್ನೇಹಿತ ಬೋರೇಗೌಡ (ಗೋವಿಂದೇಗೌಡ) ಗುಂಡ ಹಾಗೂ ಶಂಕರನ ಸಂಬಂಧ ಹೇಗಿತ್ತು ಎಂಬುದನ್ನು ಮಗುವಿಗೆ ತಿಳಿಸುತ್ತಾನೆ.

ಇದು ಮಗುವಿನ ಮನಸ್ಸಿನ ಮೇಲೆ ಬಾರಿ ಪರಿಣಾಮ ಬೀರಿ ಗುಂಡನ ಬಿಟ್ಟಿರಲಾಗದಂತ ಪರಿಸ್ಥಿತಿ ಎದುರಾಗುತ್ತದೆ. ವಯಸ್ಸಾದಂತೆ ಗುಂಡ ಹಾರ್ಟ್ ಅಟ್ಯಾಕ್ ನಿಂದ ಸಾಯುತ್ತಾನೆ. ಗುಂಡ ತನ್ನ ಬದುಕು , ಜೀವ ಎನ್ನುವ ಪುಟ್ಟ ಶಂಕ್ರನಿಗೆ ಮೂರ್ಚೆ ರೋಗ ಕಾಣುತ್ತದೆ. ಬೋರೇಗೌಡ ಹಾಗೂ ಅವನ ಪತ್ನಿಯ ಮಡಿಲಲ್ಲಿ ಬೆಳೆಯುವ ಶಂಕರ ಗುಂಡನ ಸಮಾಧಿ ಬಳಿಯಲ್ಲೇ ವರ್ಷಗಟ್ಟಲೆ ನಂಬಿಕೆಯಲ್ಲಿ ಕಾಯುತ್ತಾ ಮತ್ತೆ ಗುಂಡ ಬರುತ್ತಾನೆಂದು ಇರುತ್ತಾನೆ.

ವಿಧಿಯ ಆಟದಂತೆ , ದೈವಾನುಗ್ರಹದೊಂದಿಗೆ ತಮಿಳುನಾಡಿನಲ್ಲಿ ಗುಂಡನ(ನಾಯಿ) ಜನನವಾಗುತ್ತದೆ. ಇದು ಶಂಕರನ ಮನಸ್ಸಿನ ಹೃದಯದ ಮಿಡಿತಕ್ಕೆ ತಿಳಿಯುತ್ತದೆ. ಅಸ್ಪಷ್ಟವಾಗಿ ಕಾಣುವ ಸ್ಥಳವನ್ನು ಹುಡುಕುತ್ತಾ ಸಾಗುವ ಶಂಕರ. ಇನ್ನು ಶ್ರೀಮಂತ ಉದ್ಯಮಿ ದಶರಥ ಗೌಡ(ಅವಿನಾಶ್) ಮಗಳು ಇಂದು( ರಚನಾ ಇಂದರ್) ಬದುಕು ಸಾಕು , ಸಾವು ಬೇಕು ಎನ್ನತ ಬೆಟ್ಟದ ತುದಿಯಲ್ಲಿ ನಿಂತು ಸಾಯಲು ದೇವರಲ್ಲಿ ಪ್ರಾರ್ಥಿಸುತ್ತಾಳೆ.

ಇದೇ ಸಂದರ್ಭದಲ್ಲಿ ಸಿಗುವ ಪುನರ್ಜನ್ಮ ಪಡೆದ ಗುಂಡ (ಪುಟ್ಟ ನಾಯಿ ಮರಿ) ಇಂದು ಗೆ ಸಿಕ್ಕಿ ಸಾಯುವ ದಿನಗಳನ್ನು ಮುಂದೂಡುವಂತೆ ಮಾಡುತ್ತದೆ. ಇಂದು ತನ್ನ ತಾತನ ಭವ್ಯ ಮನೆಯಲ್ಲಿ ಗುಂಡ (ನಾಯಿ) ನನ್ನ ಮುದ್ದಾಗಿ ತನ್ನ ಜೀವಕ್ಕಿಂತ ಹೆಚ್ಚಾಗಿ ಸಾಕುತ್ತಾಳೆ. ತನ್ನಿಷ್ಟದಂತೆ ಸ್ಟಾರ್ಟ್ ಅಪ್ ಉದ್ಯೋಗ ಆರಂಭಿಸಿ ಹಣವನ್ನು ಹಾಳು ಮಾಡುವ ಇಂದು ವರ್ತನೆ ತಂದೆ ತಾಯಿಗೆ ಬೇಸರ, ಅವರನ್ನು ವಿರೋಧಿಸುತ್ತಾ ದೂರ ಇದ್ದುಕೊಂಡೆ ಚಿನ್ನು (ನಾಯಿಯೇ) ತನ್ನ ಬದುಕು ಎಂದು ಭಾವಿಸುತ್ತಾಳೆ ಇಂದು.

ಇನ್ನು ತನ್ನದಲ್ಲದ ತಪ್ಪಿಗೆ ಜೈಲು ಸೇರುವ ಶಂಕರ ಹೊರ ಬಂದ ನಂತರ ಗುಂಡನನ್ನು ಹುಡುಕುತ್ತಾನೆ. ತನ್ನ ಗುಂಡನ್ನು ಕೊಡಿ ಎಂದು ಇಂದು ಬಳಿ ಕೇಳುತ್ತಾನೆ. ಇದಕ್ಕೆ ಒಪ್ಪದ ಇಂದು ಪೊಲೀಸ್ ಕಂಪ್ಲೇಂಟ್ ನೀಡುತ್ತಾಳೆ. ಒಂದಷ್ಟು ಅವಂತರ ಗೊಂದಲಗಳು ಎದುರಾಗಿ , ಇಂದು ತಂದೆ ಶಂಕರನಿಗೆ ಬೆಂಬಲ ನೀಡುತ್ತಾರೆ. ಊರು ಬಿಟ್ಟು ಬಂದ ಶಂಕರ ಗುಂಡ ನನ್ನು ಕರ್ದೊಯ್ಯುವ ಆಸೆ ಮಾಡುತ್ತಾನೆ. ಆದರೆ ಒಂದಷ್ಟು ಘಟನೆಗಳು ಬೇರೆ ಹಂತಕ್ಕೆ ತಂದುಬಿಡುತ್ತದೆ. ಅದು ಏನು… ಯಾಕೆ… ಶಂಕರn ಜೊತೆ ಗುಂಡ ಹೋಗುತ್ತಾನೆ… ಅಥವಾ ಇಂದು ಜೊತೆ ಇರುತ್ತಾನಾ… ಕ್ಲೈಮ್ಯಾಕ್ಸ್ ಏನು ಹೇಳುತ್ತೆ ಅನ್ನೋದನ್ನ ಚಿತ್ರಮಂದಿರದಲ್ಲಿ ನೋಡಬೇಕು.

ಇನ್ನೂ ನಿರ್ದೇಶಕರು ಮನಮುಟ್ಟುವಂತೆ ಕಥಾವಸ್ತುವನ್ನ ಕಟ್ಟಿಕೊಂಡು ಹೋಗಿರುವ ರೀತಿ ಗಮನ ಸೆಳೆಯುತ್ತದೆ. ದೈವದ ಶಕ್ತಿ , ಪುನರ್ಜನ್ಮದ ಸುಳಿವು , ಸಂಬಂಧಗಳ ಬೆಸುಗೆ , ಸ್ನೇಹ , ಪ್ರೀತಿ , ತ್ಯಾಗ ಸೊಗಸಾಗಿ ತೆರೆಯ ಮೇಲೆ ಮೂಡಿದೆ. ಚಿತ್ರಕಥೆ ಇನ್ನಷ್ಟು ಹಿಡಿತ ಮಾಡಬಹುದಿತ್ತು , ಅದರಲ್ಲೂ ಸಾಧುಕೋಕಿಲ ಟೀಮ್ ಹಾಸ್ಯ ಸನ್ನಿವೇಶಗಳು ಅನಗತ್ಯ ಅನಿಸುತ್ತದೆ. ಮೂಕ ಪ್ರಾಣಿ ಜೊತೆಗಿನ ಭಾವನಾತ್ಮಕ ಸಂಬಂಧವನ್ನು ಬಹಳ ಸೊಗಸಾಗಿ ತೆರೆಯ ಮೇಲೆ ಮೇಲೆ ತಂದಿದ್ದಾರೆ. ಇನ್ನು ಸಂಗೀತದ ಜೊತೆ ಹಿನ್ನೆಲೆ ಸಂಗೀತವು ಉತ್ತಮವಾಗಿ ಮೂಡಿಬಂದಿದೆ. ಛಾಯಾಗ್ರಹಕ ಕೈಚಳಕ ಅದ್ಭುತವಾಗಿದ್ದು , ಸಂಕಲನ ಸೇರಿದಂತೆ ತಾಂತ್ರಿಕವಾಗಿ ತಂಡ ಬಹಳಷ್ಟು ಶ್ರಮ ಪಟ್ಟಿರುವುದು ಕಾಣುತ್ತದೆ.

ಇನ್ನು ಪುಟ್ಟ ಕಲಾವಿದ ಜೀವನ್ ಉತ್ತಮವಾಗಿ ಅಭಿನಯಿಸಿದ್ದು , ಪ್ರಶಸ್ತಿ ಬರುವ ನಿರೀಕ್ಷೆ ಇದೆ. ನಟ ರಾಕೇಶ್ ಅಡಿಗ ತನ್ನ ಪಾತ್ರದಲ್ಲಿ ಜೀವಿಸಿದ್ದು , ಮುಖ ಪ್ರಾಣಿಗಳಾದ ಸಿಂಬು, ಬಂಟಿ ಜೊತೆ ಮನ ಸೆಳೆಯುವಂತೆ ಅಭಿನಯಿಸಿದ್ದಾರೆ. ಈ ರೀತಿ ನಟಿ ರಚನಾ ಇಂದರ್ ಕೂಡ ಅದ್ಭುತವಾಗಿ ಪಾತ್ರದ ಪೋಷಣೆಯನ್ನು ಮಾಡಿದ್ದು , ಎಲ್ಲರ ಗಮನ ಸೆಳೆಯುವಂತ ಹೈಲೆಟಾಗಿ ಮಿಂಚಿದ್ದಾರೆ. ಹಿರಿಯ ನಟ ಅವಿನಾಶ್ ಕೂಡ ನಾಯಕಿಯ ತಂದೆಯ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ.

ಇನ್ನು ನಟ ಗೋವಿಂದೇಗೌಡ ಹಾಗೂ ನಟಿ ನಯನ ಕೂಡ ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಾಸ್ಯ ನಟ ವಿಜಯ್ ಚಂಡೂರ್ ಎಂಟ್ರಿ ಮಜವಾಗಿದ್ದು , ಸಾಧು ಕೋಕಿಲ ಹಾಗೂ ತಂಡದ ಸನ್ನಿವೇಶ ಅಷ್ಟಕ್ಕೇ ಎನ್ನುವಂತಿದೆ. ಇನ್ನು ವಿಶೇಷವಾಗಿ ಸಿಂಬು , ಬಂಟಿಗೆ ನಟಿಸಲು ಹೇಳಿಕೊಟ್ಟಿರುವ ತಂಡದ ಶ್ರಮ ಮೆಚ್ಚಲೇಬೇಕು. ಒಟ್ಟಾರೆ ಪ್ರಾಣಿ ಪ್ರಿಯರು ಸೇರಿದಂತೆ ಎಲ್ಲರೂ ನೋಡುವಂತಹ ಮನಮುಟ್ಟುವ ಚಿತ್ರ ಇದಾಗಿದೆ.

error: Content is protected !!