ಮರ್ಡರ್ ಮಿಸ್ಟ್ರಿಯಲ್ಲಿ ಮೈಂಡ್ ಗೇಮ್… ಮ್ಯಾಕ್ಸ್ ಚಿತ್ರವಿಮರ್ಶೆ (ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಮ್ಯಾಕ್ಸ್
ನಿರ್ದೇಶಕ : ವಿಜಯ್ ಕಾರ್ತಿಕೇಯ
ನಿರ್ಮಾಪಕ : ಕಲಾಯಿಪ್ಪುಳಿ ಎಸ್. ತನು , ಸುದೀಪ
ಸಂಗೀತ : ಅಜನೀಶ್ ಲೋಕನಾಥ್
ಛಾಯಾಗ್ರಹಣ : ಶೇಖರ್ ಚಂದ್ರ
ತಾರಾಗಣ : ಸುದೀಪ್ , ವರಲಕ್ಷ್ಮಿ ಶರತ್ ಕುಮಾರ್ , ಉಗ್ರಂ ಮಂಜು, ಸುನಿಲ್ , ಪ್ರಮೋದ್ ಶೆಟ್ಟಿ, ಸುಕೃತಾ ವಾಗ್ಲೆ , ಸಂಯುಕ್ತ ಹೊರನಾಡು ಹಾಗೂ ಮುಂತಾದವರು…
ಕ್ರೈಂ , ಥ್ರಿಲ್ಲರ್ , ಸಸ್ಪೆನ್ಸ್ , ಮರ್ಡರ್ ಕಥಾನಕದಲ್ಲಿ ರೌಡಿ ಗ್ಯಾಂಗ್ ಹಾಗೂ ಪೊಲೀಸರ ಮೈಂಡ್ ಗೇಮ್ ಸುಳಿಯಲ್ಲಿ ರೋಚಕ ತಿರುವುಗಳನ್ನ ಬೆಸೆದುಕೊಂಡು ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಮ್ಯಾಕ್ಸ್”. ತನ್ನ ಕೆಲಸದಲ್ಲಿ ನೇರ , ಖಡಕ್ ವರ್ತನೆ ಮೂಲಕ ಗುರ್ತಿಸಿಕೊಂಡ ಪೊಲೀಸ್ ಅಧಿಕಾರಿ ಅರ್ಜುನ್ (ಸುದೀಪ್). ದುಷ್ಟರನ್ನ ಸದೆಬಡೆದು ಮತ್ತೊಂದು ಸ್ಟೇಷನ್ ಗೆ ಟ್ರಾನ್ಸ್ಫರ್ ಆಗುತ್ತಾನೆ.
ತನ್ನ ತಾಯಿಯ ಜೊತೆ ಮತ್ತೊಂದು ಊರಿಗೆ ಬರುವ ಅರ್ಜುನ್ ಮರುದಿನ ಸ್ಟೇಷನ್ ಹೋಗಿ ಡ್ಯೂಟಿ ರಿಪೋರ್ಟ್ ಮಾಡುವ ಮುನ್ನವೇ ಸ್ಟೇಷನ್ ನಲ್ಲಿ ದುರಂತ ನಡೆದಿರುತ್ತದೆ. ಇದರಿಂದ ಇಡೀ ಪೊಲೀಸ್ ಸಿಬ್ಬಂದಿ ಕಂಗಾಲಾಗುತ್ತಾರೆ. ಮತ್ತೊಂದೆಡೆ ರಾಜಕೀಯ ದೊಂಬರಾಟದ ನಡುವೆ ಮುಖಂಡರ ಮಕ್ಕಳ ಹಾವಳಿ , ರೌಡಿಗಳ ಆರ್ಭಟ ಅತಿಯಾಗಿರುತ್ತದೆ.
ಗಲಾಟೆ ಒಂದರಲ್ಲಿ ನಾಯಕರ ಮಕ್ಕಳು ನಾಪತ್ತೆಯಾಗಿದ್ದು, ಇದು ಪೊಲೀಸ್ನವರ ಕೈವಾಡ ಎಂಬ ಅನುಮಾನ ರೌಡಿ ಗ್ಯಾಂಗ್ ನದು, ಇನ್ನು ಇನ್ಸ್ಪೆಕ್ಟರ್ ಅರ್ಜುನ್ ಗೆ ಸ್ಟೇಶನ್ ನಲ್ಲಿ ನಡೆದ ಮರ್ಡರ್ ಗೆ ಕಾರಣ ಯಾರು.. ಹಾಗೂ ಸಿಬ್ಬಂದಿಗಳನ್ನು ರಕ್ಷಣೆ ಮಾಡುವುದು ಹೇಗೆ… ಎಂಬ ತಲೆನೋವು ಜೊತೆಗೆ ನಾಪತ್ತೆಯಾದ ರಾಜಕೀಯ ನಾಯಕರ ಮಕ್ಕಳ ಒತ್ತಡದ ನಡುವೆ ಉತ್ತರ ಕಂಡುಹಿಡಿಯಲು ಒಂದು ಪ್ಲಾನ್ ಮಾಡುತ್ತಾನೆ. ಇದರ ವಿರುದ್ಧವಾಗಿ ಕ್ರೈಂ ಇನ್ಸ್ಪೆಕ್ಟರ್ ರೂಪ (ವರಲಕ್ಷ್ಮಿ ಶರತ್ ಕುಮಾರ್) ತನ್ನದೇ ಮತ್ತೊಂದು ಪ್ಲಾನ್ ಮಾಡುತ್ತಾಳೆ. ಇದರ ನಡುವೆ ಗಣಿ ಗ್ಯಾಂಗ್ ಕೂಡ ಮತ್ತೊಂದು ಆಟ ಶುರು ಮಾಡುತ್ತೆ. ಈ ಗೇಮ್ ಪ್ಲಾನ್ ನಲ್ಲಿ ಗೆದ್ದವರು ಯಾರು… ಸೋತವರು ಯಾರು… ಎಂಬುದನ್ನು ನೀವು ತೆರೆಯ ಮೇಲೆ ನೋಡಬೇಕು.
ಇನ್ನೂ ಮ್ಯಾಕ್ಸಿಮಮ್ ಮಾಸ್ ಎಂಟ್ರಿ ಮೂಲಕ ನಟ ಸುದೀಪ್ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಖಡಕ್ ಡೈಲಾಗ್ , ಭರ್ಜರಿ ಆಕ್ಷನ್ , ಮಾಸ್ ಲುಕ್ ಮೂಲಕ ಅಬ್ಬರಿಸಿದ್ದು , ಒಬ್ಬ ಪೋಲಿಸ್ ಇನ್ಸ್ಪೆಕ್ಟರ್ ದುಷ್ಟರ ವಿರುದ್ಧದ ನಡುವೆ ತನ್ನವರನ್ನ ರಕ್ಷಣೆಗೆ ಮಾಡುವ ಸ್ಟಾರ್ಟರ್ಜಿ ಗಮನ ಸೆಳೆಯುತ್ತದೆ. ಕ್ರೈಂ ಇನ್ಸ್ಪೆಕ್ಟರ್ ಪಾತ್ರದಲ್ಲಿ ವರಲಕ್ಷ್ಮಿ ಶರತ್ ಕುಮಾರ್ ಕೂಡ ಪಾತ್ರಕ್ಕೆ ಜೀವ ತುಂಬಿದ್ದು , ಪೊಲೀಸ್ ಪೇದೆಗಳಾಗಿ ಉಗ್ರಂ ಮಂಜು , ಸಂಯುಕ್ತ ಹೊರನಾಡು , ಸುಕೃತ ವಾಗ್ಲೆ ಸೇರಿದಂತೆ ಉಳಿದ ಪೊಲೀಸ್ ಪಾತ್ರಗಳು ಸಮರ್ಥವಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ.
ವಿಲನ್ ಪಾತ್ರಗಳಲ್ಲಿ ಪ್ರಭಾಷ ನಟರಾದ ಸುನಿಲ್ , ಇಲ್ಲವರಸು , ರಿಡಿನ್ ಗಮನ ಸೆಳೆದಿದ್ದು, ನಾಯಕನ ತಾಯಿಯ ಪಾತ್ರಧಾರಿ ಸುಧಾ ಬೆಳವಾಡಿ , ನಟ ಪ್ರಮೋದ್ ಶೆಟ್ಟಿ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಜೀವ ತುಂಬಿದ್ದಾರೆ. ಒಂದೇ ರಾತ್ರಿಯಲ್ಲಿ ನಡೆಯುವಂತಹ ಮರ್ಡರ್ ಮಿಸ್ಸ್ಟ್ರಿ ಕಥಾನಕವನ್ನು ಬಹಳ ಕುತೂಹಲಕಾರಿಯಾಗಿ ಚಿತ್ರಕಥೆಯ ಮೂಲಕ ತೆರೆಯ ಮೇಲೆ ತರುವುದರಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.
ಆದರೆ ಪೊಲೀಸ್ ಸ್ಟೇಷನ್ ಸೆಟ್ , ಒಂದಷ್ಟು ಪಾತ್ರಧಾರಿಗಳನ್ನು ಗಮನಿಸಿದರೆ ನಮ್ಮ ನೇಟಿವಿಟಿಗೆ ಒಪ್ಪುತ್ತಿಲ್ಲ ಎನಿಸುವಂತಿದೆ. ಇದರ ನಡುವೆ ಕ್ಯಾಮೆರಾ ಕೈಚಳಕ ಸೊಗಸಾಗಿದೆ. ಅದೇ ರೀತಿ ಹಿನ್ನೆಲೆ ಸಂಗೀತ ಕೂಡ ಸೆಳೆಯುವಂತಿದೆ. ಒಟ್ಟಾರೆ ಜೋಶ್ ನೊಂದಿಗೆ ಮಾಸ್ ಎಲಿಮೆಂಟ್ಸ್ ತುಂಬಿರುವ ಈ ಮ್ಯಾಕ್ಸ್ ಚಿತ್ರ ಕುತೂಹಲಕಾರಿಯಾಗಿ ಕಥೆ ಸಾಗಿದ್ದು ಎಲ್ಲರೂ ನೋಡುವಂತಿದೆ.