Cini NewsSandalwoodTV Serial

ಯುವ ಪ್ರತಿಭೆಗಳ “ಮಾವುತ” ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ಗಣ್ಯರು.

Spread the love

ಈ ಹಿಂದೆ “ಬರಿ ಟೆನ್ ಪರ್ಸೆಂಟ್ ಬಡ್ಡಿ” ಎಂಬ ಚಿತ್ರವನ್ನು ನಿರ್ಮಿಸಿ, ನಟಿಸಿದ್ದ ಲಕ್ಷ್ಮೀಪತಿ ಬಾಲಾಜಿ ನಿರ್ಮಿಸಿ, ನಾಯಕನಾಗಿ ನಟಿಸರುವ ಎರಡನೇ ಚಿತ್ರ “ಮಾವುತ”. ಇತ್ತೀಚಿಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಶಂಕರ್ ಬಿ ಡಿ.ಸಿ.ಪಿ(ದೆಹಲಿ), ಬಿ.ಜೆ.ಪಿ ಮುಖಂಡರಾದ ಕವಿತಾ ಸಿಂಗ್, ನಿವೃತ್ತ ಪೊಲೀಸ್ ಅಧಿಕಾರಿ ನಂಜುಂಡಸ್ವಾಮಿ, ಸಮಾಜ ಸೇವಕರಾದ ಭಜರಂಗಿ ಉಮೇಶ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

“ಮಾವುತ”, ಕಾಡಿನ ಕಥೆ. ಕಾಡಿನಲ್ಲಿ ನಡೆಯುವ ಕೆಲವು ಅಕ್ರಮಗಳನ್ನು ಕಂಡು ಹಿಡಿದು ಕಾಡನ್ನು ಉಳಿಸಿಕೊಳ್ಳುವ “ಮಾವುತ” ಹಾಗೂ ಆನೆಯ ಕಥೆಯೂ ಕೂಡ. ಲಕ್ಷ್ಮೀಪತಿ ಬಾಲಾಜಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡುವುದರ ಜೊತೆಗೆ ನಾಯಕನಾಗಿಯೂ ನಟಿಸಿದ್ದಾರೆ. ಸಾಗರ್ ಎಂಬ ಆನೆ ಕೂಡ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ರವಿಶಂಕರ್ ನಾಗ್ ತಿಳಿಸಿದರು.

ಈ ಹಿಂದೆ “ಬರಿ ಟೆನ್ ಪರ್ಸೆಂಟ್ ಬಡ್ಡಿ” ಎಂಬ ಚಿತ್ರ ನಿರ್ಮಿಸಿ, ನಾಯಕನಾಗಿ ನಟಿಸಿದ್ದ ನನಗೆ “ಮಾವುತ” ಎರಡನೇ ಚಿತ್ರ. ಇದೊಂದು ಕಾಡಿನ ಕಥಾಹಂದರ ಹೊಂದಿರುವ ಚಿತ್ರ. ಕಾಡಿನಲ್ಲೇ ಬಹುತೇಕ ಚಿತ್ರೀಕರಣ ನಡೆದಿರುವ ಚಿತ್ರವೂ ಹೌದು. ಮಾವುತ ಹಾಗೂ ಆನೆಯ ಬಾಂಧವ್ಯದ ಸನ್ನಿವೇಶಗಳೇ ಈ ಚಿತ್ರದ ಹೈಲೆಟ್. ಸಾಗರ್ ಎಂಬ ಆನೆ ಈ ಚಿತ್ರದಲ್ಲಿ ಅಮೋಘವಾಗಿ ಅಭಿನಯಿಸಿದೆ. ಬಹಳ ದಿನಗಳ ನಂತರ ಕನ್ನಡದಲ್ಲಿ ಆನೆ ಪೂರ್ಣಪ್ರಮಾಣದಲ್ಲಿ ನಟಿಸಿರುವ ಚಿತ್ರವೊಂದು ಬರುತ್ತಿದೆ. ನಾವು ಈ ಸಿನಿಮಾ ಮಾಡಲು ನಮಗೆ ಅನೇಕ ಬಾರಿ ಅಂಬಾರಿ ಹೊತ್ತು,‌ ಈಗ ನಮ್ಮೊಡನೆ ಇರದ ಅರ್ಜುನನೇ ಸ್ಪೂರ್ತಿ. ನಮ್ಮ ಚಿತ್ರ ಅರ್ಜುನನಿಗೆ ಅರ್ಪಣೆ. ಈಗಾಗಲೇ ಅನಿಮಲ್ ಬೋರ್ಡ್ ಅನುಮತಿ ದೊರಕಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ . ನಿಮ್ಮೆಲ್ಲರಿಗೂ ಚಿತ್ರ ಇಷ್ಟವಾಗುವ ಭರವಸೆ ಇದೆ ಎಂದರು ನಾಯಕ ಹಾಗೂ ನಿರ್ಮಾಪಕ ಲಕ್ಷ್ಮೀಪತಿ ಬಾಲಾಜಿ.

ಚಿತ್ರದಲ್ಲಿ ಐದು ಸಾಹಸ ಸನ್ನಿವೇಶಗಳಿದೆ. ಒಂದಕ್ಕಿಂತ ಒಂದು ಚೆನ್ನಾಗಿದೆ. ಸಾಹಸ ಸಂಯೋಜನೆಯ ಜೊತೆಗೆ ಪ್ರಮುಖಪಾತ್ರದಲ್ಲಿ ಅಭಿನಯ ಕೂಡ ಮಾಡಿದ್ದೇನೆ ಎಂದು ಥ್ರಿಲ್ಲರ್ ಮಂಜು ತಿಳಿಸಿದರು. ನಾಯಕಿಯರಾದ ಮಹಾಲಕ್ಷ್ಮಿ, ದಿವ್ಯಶ್ರೀ, ನಟರಾದ ಲಯಕೋಕಿಲ, ಕೈಲಾಶ್ ಕುಟ್ಟಪ್ಪ, ಹಿನ್ನೆಲೆ ಸಂಗೀತ ನೀಡಿರುವ ರವಿವರ್ಮ ಹಾಗೂ ಸಿರಿ ಮ್ಯೂಸಿಕ್ ನ ಚಿಕ್ಕಣ್ಣ ಮುಂತಾದವರು “ಮಾವುತ” ಚಿತ್ರದ ಕುರಿತು ಮಾತನಾಡಿದರು.

Visited 1 times, 1 visit(s) today
error: Content is protected !!