ಸಂತೋಷ್ ಸಾರಥ್ಯದ “ಮಗ್ನೇ” ಆಲ್ಬಂ ಸಾಂಗ್ ಗೆ ಧ್ರುವ ಸರ್ಜಾ ಸಾಥ್.
ಸ್ಯಾಂಡಲ್ ವುಡ್ ನಲ್ಲಿ ಒಂದು ಭದ್ರ ನೆಲೆಯನ್ನು ಕಾಣಲು ಬಹಳಷ್ಟು ಯುವ ಪ್ರತಿಭೆಗಳು ಬರುತ್ತಿದ್ದಾರೆ. ಆ ನಿಟ್ಟಿನಲ್ಲಿ ಯುವ ನಟ , ನೃತ್ಯ ನಿರ್ದೇಶಕ ವಾಲೀಸ್ ಸಂತೋಷ್.ಎನ್. ತಮ್ಮ ಮೊದಲ ಪ್ರಯತ್ನವಾಗಿ “ಮಗ್ನೇ” ವಿಡಿಯೋ ಆಲ್ಬಮ್ ಮೂಲಕ ಹೆಜ್ಜೆ ಹಾಕಿದ್ದಾರೆ. ಈ ಚಿತ್ರದ ಆಲ್ಬಮ್ ಹಾಗೂ ಚಿತ್ರ ನಿರ್ಮಾಣದ ಕುರಿತು ಮಾಹಿತಿಯನ್ನು ನೀಡಲು ಪತ್ರಿಕಾಗೋಷ್ಠಿಯನ್ನು ಆಯೋಚನೆ ಮಾಡಿದ್ದು , ಇದಕ್ಕೂ ಮುನ್ನ ಪರದೆಯ ಮೇಲೆ ವಿಡಿಯೋ ಆಲ್ಬಮ್ ಪ್ರದರ್ಶಿಸಿದರು. ಇನ್ನು ಈ ತಂಡಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾತ್ ನೀಡಿದ್ದು , ಹಾಡನ್ನು ನೋಡಿ ತಂಡದ ಕೆಲಸಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಾಲೀಸ್ ಸಂತೋಷ್ .ಎನ್. ಮಾತನಾಡುತ್ತಾ ನನ್ನದು ಮಾಗಡಿಯ ರೈತಾಪಿ ಕುಟುಂಬ. ಸಿನಿಮಾ ರಂಗದ ಕನಸು ಹೊತ್ತು , ಡ್ಯಾನ್ಸ್ ಕೊರಿಯೋಗ್ರಫರ್ ಆಗಲು ಐದು ವರ್ಷಗಳ ಕಾಲ ಕನ್ನಡ ಕೊರಿಯೋಗ್ರಫರ್ಸ್ಗಳ ಜೊತೆ ಡ್ಯಾನ್ಸರ್ ಆಗಿ, ಅಸಿಸ್ಟೆಂಟ್ ಕೊರಿಯೋಗ್ರಫರ್ ಆಗಿ , ಕನ್ನಡದ ಡಿಕೆಡಿ , ತೆಲುಗಿನ ಡಿ ಶೋ ಜೊತೆಗೆ ತಮಿಳಿನ ರಿಯಾಲಿಟಿ ಶೋಗಳಲ್ಲಿ ಕೊರಿಯೋಗ್ರಫರ್ ಆಗಿಯೂ ಕೆಲಸ ಮಾಡಿರುವ ಅನುಭವವಿದೆ. ಸಿಗ್ನೇಚರ್ ಡ್ರಾನ್ಸ್ ಟ್ರೂಪ್ ಮೂಲಕ ಮಕ್ಕಳಿಗೆ ತರಬೇತಿಯನ್ನು ನೀಡುತ್ತಿದ್ದೇನೆ. 31 ಜಿಲ್ಲೆಯಲ್ಲಿ ನನ್ನ ಡ್ಯಾನ್ಸ್ ಕ್ಲಾಸ್ ತೆರೆಯುವ ಉದ್ದೇಶವಿದೆ. ಈಗಾಗಲೇ ಅತ್ತಿಬೆಲೆ , ಹುಬ್ಬಳ್ಳಿಯಲ್ಲಿ ಡ್ಯಾನ್ಸ್ ಕ್ಲಾಸ್ ತೆರೆದಿದ್ದೇನೆ. ನನ್ನ ಈ ಎಲ್ಲಾ ಪ್ರಯತ್ನಕ್ಕೂ ಗೆಳೆಯರು ಸಾತ್ ನೀಡುತ್ತಿದ್ದಾರೆ. ಈಗ ನಾನು ವಾಲೀಸ್ ಫಿಕ್ಸ್ ನಲ್ಲಿ “ಮಗ್ನೇ” ಆಲ್ಬಂ ಸಾಂಗ್ ಮೂಲಕ ಕನ್ನಡಿಗರ ಆಶೀರ್ವಾದ ಗಿಟ್ಟಿಸಿಕೊಳ್ಳಲು ಮುಂದಾಗಿದ್ದೇನೆ. ಈಗ ನಾನೇ ಒಂದು ತಂಡವನ್ನ ಕಟ್ಟಿಕೊಂಡು ನಮ್ಮ ಬ್ಯಾನರ್ ಮೂಲಕವೇ “ಮಗ್ನೇ” ಹೆಸರಿನ ಆಲ್ಬಮ್ ನಲ್ಲಿ , ಚಟ್ವಂತ ಕೊಟ್ರೆ ಮುಟ್ ನೋಡಬೇಕು ಎಂಬ ಅಡಿ ಬರಹವಿರುವ ಮಾಸ್ ಆಲ್ಬಂ ಹೊರ ತರ್ತಿದ್ದೇನೆ. ನನ್ನ ಲೈಫ್ ನಲ್ಲಿ ಆದಂತ ಅವಮಾನವನ್ನ ಸ್ಪೂರ್ತಿಯಾಗಿ ಇಟ್ಟುಕೊಂಡು ಈ ಆಲ್ಬಮ್ ಸಾಂಗ್ ಮಾಡಿದ್ದೇನೆ. ಸರಿಸುಮಾರು 3 ಲಕ್ಷದಲ್ಲಿ , ಮೂರು ದಿನಗಳ ಕಾಲ ಚಿತ್ರೀಕರಣ ಮಾಡಿರುವಂತಹ ಆಲ್ಬಮ್ ಸಾಂಗ್ ಇದಾಗಿದೆ. ನಮ್ಮದೇ ಯೂಟ್ಯೂಬ್ ಚಾನಲ್ ನಲ್ಲಿ ಹೊರಬಂದಿದೆ.
ಹಾಗೆ ಈ “ಮಗ್ನೇ” ಆಲ್ಬಮ್ ನನ್ನ ಪ್ರಥಮ ಪ್ರಯತ್ನ ವಾಗಿದ್ದು , ಇದರ ಮೂಲಕ ನಾನು ಚಿತ್ರರಂಗದಲ್ಲಿ ನಾಯಕ ನಟನಾಗಿ ಹೊರಬರಲು ಸಿದ್ಧತೆ ಮಾಡುತ್ತಿದ್ದೇನೆ. ಇದಕ್ಕಾಗಿ ಈಗಾಗಲೇ ಮೂರು ಚಿತ್ರದ ಕಥೆಯ ಸ್ಕ್ರಿಪ್ಟ್ ವರ್ಕ್ ಮುಗಿದಿದೆ. ಈಗ ಆಲ್ಬಮ್ ಸಾಂಗ್ ಮೂಲಕ ಜನರಿಗೆ ನಮ್ಮ ಪರಿಚಯವಾಗುತ್ತದೆ. ತದನಂತರ ಸಿನಿಮಾ ಮಾಡಲು ಸಿದ್ಧರಾಗುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹ ಇರಲಿ ಎಂದರು. ಇನ್ನು ಯುವ ಪ್ರತಿಭೆ ಮಾರುತಿ ರಾವ್ ಸಂಕಲನ ಮತ್ತು ಛಾಯಾಗ್ರಹಣ ಮಾಡಿದ್ದಾರೆ. ಧ್ರುವ ಕೇಶವ್ ಸಂಗೀತ , ಸಂತೋಷ್ ಗೆಳೆಯ ತೇಜಸ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಪಕ್ಕಾ ಮಾಸ್ ಸ್ಟೈಲ್ನಲ್ಲಿ ಒಬ್ಬ ಕಮರ್ಶಿಯಲ್ ಹೀರೋ ಗೆ ನೀಡುವ ಬಿಲ್ಡಪ್ ಸಾಂಗ್ ರೀತಿ ಹಾಡು ಮೂಡಿಬಂದಿದ್ದು , ರಾಪ್ ಶೈಲಿಯ ಟಚ್ ಇದೆ. ಈ ಚಿತ್ರದ ಹಾಡು ಗುಜರಾತ್ , ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲು ನಿರ್ಧರಿಸಿದ್ದು , ಕಾರಣಾಂತರ ಗಳಿಂದ ಸಾಧ್ಯವಾಗದೆ ಬೆಂಗಳೂರಿನಲ್ಲಿ ಚಿತ್ರಕರಿಸಲಾಯಿತಂತೆ. ಈ “ಮಗ್ನೇ” ಹಾಡನ್ನ Wallis Flics Youtube ಚಾನೆಲ್ ನಲ್ಲಿ ಕೇಳಬಹುದು, ಹೊಸಬರ ಮೂಲಕ ಹೊರಬಂದಿರುವ ಆಲ್ಬಮ್ ಹಾಡು ಈಗ ಸದ್ದು ಮಾಡುತ್ತಿದ್ದು , ಸದ್ಯದಲ್ಲೇ ಹೊಸ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ತಂಡ ನೀಡಲಿದೆಯಂತೆ.