“KD” ಚಿತ್ರದ ಅಣ್ತಮ್ಮ ಜೋಡೆತ್ತು ಕಣೋ ಹಾಡು ಬಿಡುಗಡೆ, ಮುಂದಿನ ವರ್ಷ ಏಪ್ರಿಲ್ 30ಕ್ಕೆ ಚಿತ್ರ ತೆರೆಗೆ
ಸ್ಯಾಂಡಲ್ ವುಡ್ ನ ಮತ್ತೊಂದು ಬಹು ನಿರೀಕ್ಷೆಯ ಚಿತ್ರ “ಕೆಡಿ”. ಆರಂಭದಿಂದಲೂ ಹಂತ ಹಂತವಾಗಿ ಸದ್ದು ಮಾಡುತ್ತಿರುವ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ. ಹಾಗೆಯೇ ತಂಡದಿಂದ ಮತ್ತೊಂದು ಹಾಡು ಹೊರ ಬಂದಿದೆ. “ಕೆಡಿ” ದಿ ವಿಲನ್… ಜೋಗಿ ಪ್ರೇಮ್ ನಿರ್ದೇಶನದಲ್ಲಿ kvn ಬ್ಯಾನರ್ ನಡಿ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ರಿಷ್ಮಾ ನಾಣಯ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 2026ರ ಮೋಸ್ಟ್ ಎಕ್ಸ್ ಪೆಕ್ಟೆಡ್ ಮಲ್ಟಿಸ್ಟಾರರ್ ಸಿನಿಮಾ. ಹೌದು.. ನ್ಯೂ ಇಯರ್ ಹಾಗೂ ಕ್ರಿಸ್ಮಸ್ ಟೈಮ್ನಲ್ಲಿ ಜೋಗಿ ಪ್ರೇಮ್ ಕಂಚಿನ ಕಂಠದಲ್ಲಿ ಬಂದಿರೋ ಅಣ್ತಮ್ಮ ಜೋಡೆತ್ತು ಕಣೋ ಹಾಡು, ಅಣ್ಣಾ ತಮ್ಮಂದಿರ ಬಾಂದವ್ಯವನ್ನ ಹೇಳಿದ್ದಂತಿದೆ. ತಂದಾನಿ ತಾನೇ ಬಿಜಿಎಂ ನಿಂದ ಪ್ರಾರಂಭವಾದ ಹಾಡು ಧ್ರುವ ಹಾಗೂ ರವಿಚಂದ್ರನ್, ರಮೇಶ್, ಸಂಜಯ್ ದತ್ತ್, ಮಳೆಯಲ್ಲಿ ಡಾನ್ಸ್, ಸಿನಿಮಾದ ಕೆಲವು ಬಿಟ್ ಗಳಿಂದ ಕೂಡಿದೆ.. ಹಾಡಿನಲ್ಲಿ ಧ್ರುವ ಕಂಪ್ಲೀಟ್ ಆಗಿ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಧ್ರುವ ಜೊತೆಗೆ ರವಿಚಂದ್ರನ್, ರಮೇಶ್ ಹೆಜ್ಜೆ ಹಾಕಿದ್ದಾರೆ. ಎರಡೂವರೆ ಮೂರು ವರ್ಷಗಳಿಂದ ನಿರ್ಮಾಣ ಆಗುತ್ತಿರುವ ಕೆಡಿ ಬಿಗ್ ಬಜೆಟ್ ಸಿನಿಮಾ. ಬಾಲಿವುಡ್ನ ದಿಗ್ಗಜರಾದ ಸಂಜಯ್ ದತ್, ಶಿಲ್ಪಾ ಶೆಟ್ಟಿ, ವಿ.ರವಿಚಂದ್ರನ್, ರಮೇಶ್ ಸೇರಿದಂತೆ ದೊಡ್ಡ ಬಳಗವೇ ಈ ಸಿನಿಮಾದಲ್ಲಿದೆ. ಹೀಗಿರುವಾಗ ಕೆಡಿ ಸಹಜವಾಗಿಯೇ ಭಾರಿ ನಿರೀಕ್ಷೆಯನ್ನು ಹುಟ್ಟಾಕಿದೆ.
ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಕೆಡಿ ಸಿನಿಮಾ ಬಿಡುಗಡೆಗೆ ಯಾಕಿನ್ನು ಮುಹೂರ್ತ ಕೂಡಿ ಬಂದಿಲ್ಲ? ಜೋಗಿ ಪ್ರೇಮ್ ಸಿನಿಮಾ ಶೂಟಿಂಗ್ ಮುಗಿಸಿಲ್ಲವೇ? ಲೇಟ್ ಆಗ್ತಿರೋದಕ್ಕೆ ಏನ್ ಕಾರಣ..? 2026ಕ್ಕೂ ಸಿನಿಮಾ ಬಿಡುಗಡೆ ಭಾಗ್ಯವಿಲ್ವಾ..? ಹಾಗಾದ್ರೆ ರಿಲೀಸ್ ಆಗದೇ ಹೋದರೆ, ಮತ್ಯಾವಾಗ? ಹೀಗೆ ನಾನಾ ಪ್ರಶ್ನೆ ಧ್ರುವ ಸರ್ಜಾ ಅಭಿಮಾನಿಗಳಲ್ಲಿ ಮೂಡಿತ್ತು.. ಬಟ್ ಈ ಎಲ್ಲಾ ಪ್ರಶ್ನೆಗೆ ಬ್ರೇಕ್ ಬಿದ್ದಿದ್ದು, ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಅಫ್ ಕೋರ್ಸ್.. ಜೋಗಿ ಪ್ರೇಮ್ ಕಂಠಸಿರಿಯಲ್ಲಿ ಅಣ್ತಮ್ಮ ಜೋಡೆತ್ತು ಹಾಡು ಬರ್ತಯಿದ್ದಂಗೆ ಇತ್ತ ಫ್ಯಾನ್ಸ್ ಡಿಮ್ಯಾಂಡ್ ಮಾಡ್ತಿರೋದು ಕೆಡಿ ಸಿನಿಮಾ ಬಿಡುಗಡೆಯ ಡೇಟ್ ಅನ್ನ, ಅದರಂತೆ ಸಿನಿಮಾ ತಂಡ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದೆ.. ಅಣ್ತಮ್ಮ ಜೋಡೆತ್ತು ಕಣೋ ಹಾಡಿಗೆ ಜೋಗಿ ಪ್ರೇಮ್ ಅವ್ರ ವಾಯ್ಸ್ ಹೇಳಿ ಮಾಡಿಸಿದ ಹಾಗಿದೆ ಈ ಹಿಂದೆ ಬಂದಿರೋ ಬ್ರಹ್ಮ ವಿಷ್ಣು ಶಿವ ಎಕ್ಸ್ ಕ್ಯೂಸ್ ಮೀ ಚಿತ್ರದ ಹಾಡು ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದರು. ಆರ್ ಆರ್ ಪಟ್ನಾಯಕ್ ಸಂಗೀತ ನೀಡಿದ್ದರು. ಈ ಹಾಡು ಆಲ್ ಟೈಮ್ ಫೇವರೆಟ್ ಆಗಿತ್ತು.
ಬೇಡವೆನು ವರವನ್ನು ಪ್ರೇಮ್ ನಿರ್ದೇಶಿಸಿದ್ದ ಜೋಗಿ ಸಿನಿಮಾ ಆಲ್ ಟೈಂ ಹಿಟ್ ಆಗಿರುವ ಚಿತ್ರ. ಮ್ಯೂಸಿಕಲ್ ಕೂಡ ಈ ಸಿನಿಮಾ ದೊಡ್ಡ ಹೆಸರು ಮಾಡಿತ್ತು. ಗುರು ಕಿರಣ್ ಸಂಗೀತ ನೀಡಿದ್ದ ಈ ಚಿತ್ರದ ಎಲ್ಲ ಹಾಡುಗಳನ್ನು ಸ್ವತಃ ಪ್ರೇಮ್ ಬರೆದಿದ್ದರು. ಪ್ರೀತಿ ಯಾಕೆ ಈ ಭೂಮಿ ಮೇಲಿದೆ…. ಪ್ರೇಮ್ ನಿರ್ದೇಶಿಸಿ, ಮೊದಲ ಬಾರಿಗೆ ನಟಿಸಿದ ಪ್ರೀತಿ ಯಾಕೆ ಭೂಮಿ ಮೇಲಿದೆ ಸಿನಿಮಾದಲ್ಲಿ ಶೀರ್ಷಿಕೆ ಹಾಡನ್ನ ಪ್ರೇಮ್ ಹಾಡಿದ್ದಾರೆ. ಹಾಗೂ ರಾಜ ಹೇಳುವಾಗೆಲ್ಲ, ಓಡೋಲೆ, ಢವಢವ ಅಂತ, ಸೇಸಮ್ಮ ಸೇಸಮ್ಮ, ಬಂದ ಬಂದ ಡಿಕೆ ಸಾಹೇಬ, ಲವ್ ಆಗೋಯ್ತೆ ನಿನ್ಮೇಲೆ ಇನ್ನು ಮುಂತಾದ ಹಾಡುಗಳು ಮ್ಯೂಸಿಕ್ ಲವರ್ಸ್ ಫೇವರೇಟ್ ಹಾಡಾಗಿವೆ ಅದರಂತೆ ಕೆಡಿ ಸಿನಿಮಾದ ಅಣ್ತಮ್ಮ ಜೋಡೆತ್ತು ಕಣೋ ಹಾಡು ಕೂಡ ಆನಂದ್ ಆಡಿಯೋದಲ್ಲಿ ರಿಲೀಸ್ ಆದ ಕೊಂಚ ಸಮಯದಲ್ಲೇ ಸಂಗೀತ ಪ್ರೇಮಿಗಳ ಮನಸ್ಸನ್ನ ಗೆದ್ದಿದೆ.
ಅಂದಹಾಗೆ..ಅಣ್ತಮ್ಮ ಜೋಡೆತ್ತು ಕಣೋ ಆನಂದ್ ಆಡಿಯೋದಲ್ಲಿ ಬಿಡುಗಡೆಯಾಗಿದ್ದು, ಕನ್ನಡದಲ್ಲಿ ಈ ಹಾಡಿಗೆ ಮಂಜುನಾಥ್ ಬಿಎಸ್ ಅದ್ಭುತವಾದ ಲಿರೀಕ್ಸ್ ಬರ್ದಿದ್ರೆ, ಜೋಗಿ ಪ್ರೇಮ್ ಕಂಠಸಿರಿಯಲ್ಲಿ ಹಾಡು ಮೂಡಿಬಂದಿದೆ.. ಅದರಂತೆ ಕೆಡಿ ಪ್ಯಾನ್ ಇಂಡಿಯಾ ಸಿನಿಮಾವಾಗಿರೋದ್ರಿಂದ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಭಾಷೆಗಳಲ್ಲೂ ಈ ಹಾಡು ಬಿಡುಗಡೆಯಾಗಿದೆ.. ಹಿಂದಿಯಲ್ಲಿ lyricistraqueebalam ಲಿರಿಕ್ಸ್ ಬರೆದಿದ್ರೆ, javedali4u ಹಾಡಿದ್ದಾರೆ. ತೆಲುಗಲ್ಲಿ ಸಿದ್ ಸ್ರೀರಾಮ್ ಕಂಟಕ್ಕೆ boselyricist ಸಾಹಿತ್ಯಾ ಬರೆದಿದ್ದಾರೆ. ತಮಿಳ್ ನಲ್ಲಿಯೂ, ಸಿದ್ ಧ್ವನಿಗೆ madhankarky ಸಾಹಿತ್ಯಾ ಬರೆದಿದ್ದಾರೆ. ಮಲಯಾಳಂನಲ್ಲಿ ವಿಜಯ್ ಕಂಟಕ್ಕೆ ಗೋಪಾಲಕೃಷ್ಣನ್ ಸಾಹಿತ್ಯ ಬರೆದಿದ್ದಾರೆ. ಇನ್ನೂ ಸಿನಿಮಾಕ್ಕೆ ಅರ್ಜುನ್ ಜನ್ಯಾ ಸಂಗೀತ ನಿರ್ದೇಶನವಿದ್ದು, ಈಗಾಗಲೇ ಬಂದಿರೋ ಶಿವ ಶಿವ ಸಾಂಗ್, ಸೆಟ್ಟಗಲ್ಲಾ ಹೋಗೆ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿದೆ.. ಅದ್ರಂತೆ ಇಂದು ಬಂದಿರೋ ಅಣ್ತಮ್ಮ ಜೋಡಿತ್ತು ಹಾಡು ಕೂಡ ಧ್ರುವ ಅಭಿಮಾನಿಗಳ ಮನಸ್ಸನ್ನ ಗೆದ್ದಿದಲ್ಲದೆ ಸಂಗೀತ ಪ್ರಿಯರ ಪ್ರಶಂಸೆಗೆ ಗುರಿಯಾಗಿದೆ.
ಒಟ್ನಲ್ಲಿ.. ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಇಷ್ಟೋತ್ತಿಗಾಗಲೇ ಸಿನಿಮಾ ರಿಲೀಸ್ ಆಗ್ಬೇಕಿತ್ತು.. ಬಟ್ ಜೋಗಿ ಪ್ರೇಮ್ ಪಕ್ಕಾ ಪ್ಲಾನ್ ಮಾಡ್ಕೊಂಡು ಮುಂದಿನ ವರ್ಷವೇ ಸ್ವೀಟ್ ನ್ಯೂಸ್ ಕೊಡ್ಬೇಕು ಅಂತ ಡಿಸೈಡ್ ಮಾಡಿದ್ದಾರೆ.. ಮುಂದಿನ ವರ್ಷ ಏಪ್ರಿಲ್ 30ಕ್ಕೆ ಸಿನಿಮಾ ತೆರೆ ಮೇಲೆ ಬರೋಕೆ ಸಜ್ಜಾಗಿದೆ.