Cini NewsTV Serial

ಬಿಳಿಗಿರಿ ಫಿಲಂಸ್ ಹಾಗೂ ಸಿದ್ಧಿ ಕಾರಕ ಫಿಲಂಸ್ ಸಂಸ್ಥೆಯಲ್ಲಿ ನಿರ್ಮಾಣದ “ಕರಡಿಗುಡ್ಡ” ಚಿತ್ರದ ಶೀರ್ಷಿಕೆ ಬಿಡುಗಡೆ.

Spread the love

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ಇರುವ ಪಂಚಮುಖಿ ವಿನಾಯಕ ದೇವಸ್ಥಾನದಲ್ಲಿ ಡಾ.ವಿ ನಾಗೇಂದ್ರ ಪ್ರಸಾದ್ ರವರು “ಕರಡಿಗುಡ್ಡ” ಸಿನಿಮಾದ ಶೀರ್ಷಿಕೆ ಮತ್ತು ಕಾನ್ಸೆಪ್ಟ್ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮುಖೇನ ನಿರ್ಮಾಪಕರಾದ ವೀಣಾ ವೆಂಕಟೇಶ್. ವಿ , ಅಂಬಿಕಾ ಚಂದ್ರಪ್ಪ ರವರಿಗೆ ಹಾಗೂ ನಿರ್ದೇಶಕರಾದ ಅಮಿತ್ ರಾವ್ ರವರಿಗೆ ಮತ್ತು ಚಿತ್ರತಂಡಕ್ಕೆ ಶುಭ ಕೋರಿದರು. ಈಗಾಗಲೇ “ಹವಾಲಾ” ಹಾಗೂ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ 72 ಪ್ರಶಸ್ತಿಗಳನ್ನು ಬಾಚಿಕೊಂಡಿರುವ “ಯಾದ್ಭಾವಂ ತದ್ಭವತಿ” ಚಿತ್ರ ನಿರ್ದೇಶನದ ಜೊತೆಗೆ ನಟನೆಯನ್ನು ಮಾಡಿರುವ ಅಮಿತ್ ರಾವ್ ರವರ ಮೂರನೇಯ ನಿರ್ದೇಶನದ ಚಿತ್ರ ಇದಾಗಿದ್ದು, ಚಿತ್ರಕ್ಕೆ ಕಥೆ ಜಯಂತ್ ಚಂದ್ರಪ್ಪ ರವರ ಕಥೆ ಇದ್ದು, ಮಕ್ಕಳ ಸಾಹಸಮಯ ಚಿತ್ರ ಇದಾಗಿರುತ್ತದೆ.

ಡಾ. ವಿ ನಾಗೇಂದ್ರ ಪ್ರಸಾದ್ ರವರು ಕೂಡ ಈ ಚಿತ್ರದಲ್ಲಿ ಸಾಹಿತ್ಯದ ಜೊತೆ ತಂಡದಲ್ಲಿ ಒಬ್ಬರಾಗಿ “ಕರಡಿಗುಡ್ಡ”ದ ಜೊತೆ ಸಾಗುತ್ತಿದ್ದಾರೆ, ಅದಲ್ಲದೆ ತಂತ್ರಜ್ಞರಾಗಿ – ಛಾಯಾಗ್ರಹಕರಾಗಿ ವಿ. ಪವನ್ ಕುಮಾರ್, ಸಂಗೀತ ನಿರ್ದೇಶಕ ಕಿಶೋರ್ ಎಕ್ಸ, ಪ್ರೊಡಕ್ಷನ್ ಡಿಸೈನರ್ ಆಗಿ ನಿರ್ದೇಶಕ ನಟ ಮಂಜುನಾಥ್ ದೈವಜ್ಞ ಹಾಗೂ ತಂತ್ರಜ್ಞರ ಜೊತೆಗೆ ಹೊಸ ಪ್ರತಿಭೆಯಾಗಿ ವಿಶೇಷ ವೆಂಕಟೇಶ್, ವೆಂಕಟೇಶ್ ಗೌಡ, ನಾಗೇಂದ್ರ ಅರಸ್, ಭವಾನಿಪ್ರಕಾಶ್, ಮತ್ತು ಪುಟಾಣಿ ಮಕ್ಕಳು ಕಲಾವಿದರಾಗಿ ಇನ್ನಿತರೆ ಕಲಾವಿದರೊಂದಿಗೆ ಮುಂದಿನ ದಿನಗಳಲ್ಲಿ ಚಿತ್ರೀಕರಣಕ್ಕೆ ತಯಾರಿಯಲ್ಲಿದೆ “ಕರಡಿಗುಡ್ಡ” ಚಿತ್ರತಂಡ.
ತಲಕಾಡಿನ ಸುತ್ತಮುತ್ತಲ್ಲಲ್ಲಿ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.

Visited 1 times, 1 visit(s) today
error: Content is protected !!