Cini NewsSandalwood

ಇದೇ 29ರಂದು ಬಹು ನಿರೀಕ್ಷಿತ “ಕಾಟೇರ” ಚಿತ್ರ ತೆರೆಗೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ “ಕಾಟೇರ” ರಾಜ್ಯದಾದ್ಯಂತ ಅದ್ದೂರಿಯಾಗಿ ಇದೇ 29ರಂದು ಬಿಡುಗಡೆ ಯಾಗಲಿದೆ. ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ಹುಬ್ಬಳ್ಳಿಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಹೊರಬಂದು ಪ್ರೇಕ್ಷಕರ ನಿರೀಕ್ಷೆಯನ್ನು ಹೆಚ್ಚಿಸಿದೆ.

ಈ ಚಿತ್ರದ ಕುರಿತು ಇತ್ತೀಚಿಗೆ ಚಿತ್ರತಂಡ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದು , ಇಡೀ ತಾರಾ ಬಳಗವೇ ಉಪಸ್ಥಿತರಿದ್ದರು. ಈ ಕುರಿತು ಚಿತ್ರದ ನಿರ್ದೇಶಕ ಮಾತನಾಡುತ್ತಾ ಇದೊಂದು ಸೂಕ್ಷ್ಮ ವಿಚಾರವನ್ನು ತೆರೆಯ ಮೇಲೆ ತರುವ ಪ್ರಯತ್ನವನ್ನು ಮಾಡುತ್ತೇವೆ. ಈ ಚಿತ್ರದ ಕಥೆಯನ್ನು ಮಾಡಿಕೊಂಡು ಇದನ್ನ ದರ್ಶನ್ ಸಾರ್ ಗೆ ಹೇಳಿದಾಗ ಒನ್ ಲೈನ್ ಕೇಳಿ ಖಂಡಿತ ಮಾಡೋಣ ಎಂದು ಇದನ್ನ ನಿರ್ಮಾಪಕ ರಾಕ್ ಲೈನ್ ಗೆ ಹೇಳು ಎಂದರು, ಅದೇ ರೀತಿ ಅವರು ಈ ಸ್ಟ್ರೈಟ್ ಸಬ್ಜೆಕ್ಟ್ ಅನ್ನ ಒಪ್ಪಿ ಅದ್ದೂರಿಯಾಗಿ ಚಿತ್ರವನ್ನು ಮಾಡಿದ್ದಾರೆ.

ಈವರೆಗೂ ಹೇಳಿರದ ಸರ್‍ಪ್ರೈಸ್ ಟ್ರೈಲರ್‍ನಲ್ಲಿ ಹೇಳಲಿದ್ದೇವೆ, ಅಲ್ಲದೆ 29ರವರೆಗೂ ಇನ್ನೊಂದಷ್ಟು ಕಂಟೆಂಟ್ ಬಿಟ್ಟುಕೊಡುತ್ತಾ ಹೋಗುತ್ತೇವೆ. ಸಿನಿಮಾನೋಡಿ ಆಚೆ ಬಂದಾಗ ಒಂದು ಪ್ರೌಡ್‍ಫೀಲಿಂಗ್ ಖಂಡಿತ ಬರುತ್ತೆ. ರಾಮ್‍ಲಕ್ಷ್ಮಣ್, ವಿನೋದ್ ಅದ್ಬುತ ಸಾಹಸಗಳನ್ನು ಕಂಪೋಜ್ ಮಾಡಿದ್ದಾರೆ.

ಚಿತ್ರದ ಇನ್ನೊಂದು ಸ್ಟ್ರೆಂಥ್ ಅಂದರೆ ಎಮೋಷನ್ಸ್ , ಈ ಚಿತ್ರ ಹೇಗೆ ಬರುತ್ತೆ ಎಂಬ ಆಲೋಚನೆ ನನ್ನಲ್ಲಿತ್ತು ಆದರೆ ಚಿತ್ರದ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹಾಗೂ ದರ್ಶನ್ ತನಗೆ ಧೈರ್ಯತುಂಬಿ ತೆಗೆದುಕೊಂಡು ಹೋದರು. ಹಾಗಾಗಿ ಚಿತ್ರದಲ್ಲಿ ತಾನು ನಿರಾಳವಾದೆ ಎಂದು ನೆನಪು ಮಾಡಿಕೊಂಡು. ಇದರಲ್ಲಿ ಮಾಸ್, ಕ್ಲಾಸ್, ಎಮೋಷನ್ ಎಲ್ಲವೂ ಇದೆ, ಬಹು ಮುಖ್ಯವಾಗಿ ಚಿತ್ರದಲ್ಲಿ ಕಂಟೆಂಟ್ ಜೊತೆ ರೈತರ ಬದುಕಿಗೂ ಗೌರವ ಕೊಡುವ ಸೂಕ್ಷ್ಮ ವಿಚಾರ ಒಳಗೊಂಡಿದೆ ಎಂದರು.

ಇನ್ನು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಾತನಾಡುತ್ತಾ ಒಂದಷ್ಟು ಸಂತೋಷದ ಸುದ್ದಿ ಹಂಚಿಕೊಳ್ಳಲು ನಾವೆಲ್ಲ ನಿಮ್ಮ ಮುಂದೆ ಬಂದಿದ್ದೇವೆ, ನಾಲ್ಕು ವರ್ಷಗಳ ನಂತರ ನಿರ್ಮಾಪಕನಾಗಿ ಬಂದಿದ್ದು ಹೊಸ ಅನುಭವ ನೀಡಿತು. ತನಗೆ ಕಾಟೇರ ಚಿತ್ರದ ಕಥೆ ತುಂಬಾನೇ ಇಷ್ಟವಾಗಿದೆ, ನಿರ್ದೇಶಕ ತರುಣ್ ಸುಧೀರ್ ಕಥೆ ಹೇಳುವಾಗಲೇ ತಾನು ಆಕರ್ಷಿತನಾದೆ ಮತ್ತು ಅದೇ ಕ್ಷಣದಲ್ಲಿ ಮುಂದುವರೆಯಲು ಹೇಳಿಬಿಟ್ಟೆ , ನಾನು ಹಲವು ಚಿತ್ರಗಳನ್ನು ನಿರ್ಮಿಸಿದೇನೆ, ಬಹು ಮುಖ್ಯವಾಗಿ ತಾನು ಕಥೆ ನಂಬಿ ಚಿತ್ರ ಮಾಡುವವನು, ಈ ನಿಟ್ಟಿನಲ್ಲಿ ಕಾಟೇರ ವಿಭಿನ್ನವಾಗಿದೆ ಮತ್ತು ಒಂದು ಸರಳ ಮೆಸೇಜ್ ಇದೆ. ನೀವೆಲ್ಲರೂ ಈ ಚಿತ್ರವನ್ನ ನೋಡಿ ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು.

ಬೆಳ್ಳಿ ಪರದೆ ಮೇಲೆ ನಾಯಕಿಯಾಗಿ ಪ್ರವೇಶ ಮಾಡುತ್ತಿರುವ ಹಿರಿಯ ನಟಿ ಮಾಲಾಶ್ರಿ ಮಗಳಾದ ಆರಾಧನಾ ರಾಮ್ ಮಾತನಾಡಿ ಮೊದಲ ಬಾರಿಗೆ ನನ್ನನ್ನು ಬಿಗ್‍ಸ್ಕ್ರೀನ್ ಮೇಲೆ ನೋಡಿ ಖುಷಿಯಾಯಿತು, ರಾಕ್‍ಲೈನ್ ವೆಂಕಟೇಶ್ ಅವರ ಬ್ಯಾನರ್‍ನಿಂದ ಲಾಂಚ್ ಆಗ್ತಿರುವುದಕ್ಕೆ ಹೆಮ್ಮಯಿದೆ, ಕಾಟೇರ ತನ್ನ ಬದುಕಿನಲ್ಲಿ ಯಾವತ್ತೂ ಮರೆಯಲಾಗದ ಅನುಭವವನ್ನು ನೀಡಿದೆ. ಬಹು ಮುಖ್ಯವಾಗಿ ದರ್ಶನ್ ಎದುರಿಗೆ ನಾಯಕಿ ಆಗಿರುವುದು ತನ್ನ ಅದೃಷ್ಠ , ನನಗೆ ಬಹಳಷ್ಟು ಹೇಳಿಕೊಟ್ಟಿದ್ದಾರೆ. ನಿರ್ದೇಶಕ ತರುಣ್ ಕೂಡ ಒಂದೊಳ್ಳೆ ಪಾತ್ರವನ್ನು ಕೊಟ್ಟು ನನಗೆ ತುಂಬಾ ಹೇಳಿಕೊಟ್ಟಿದ್ದಾರೆ. ಇಡೀ ಚಿತ್ರದ ತಂಡದವರ ಜೊತೆ ಕೆಲಸ ಮಾಡಿದ ಅನುಭವ ಮರೆಯಲಾಗದ ನೆನಪು , ಖಂಡಿತ ನಿಮ್ಮೆಲ್ಲರ ಪ್ರೋತ್ಸಾಹ ಸಹಕಾರವಿರಲಿ ನನ್ನನ್ನು ಬೆಳೆಸಿ ಎಂದು ಕೇಳಿಕೊಂಡರು.

ನಾಯಕ ದರ್ಶನ್ ಮಾತನಾಡಿ ತಾನು ಇಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಈ ನಿಟ್ಟಿನಲ್ಲಿ ಕಾಟೇರ ತುಂಬಾ ವಿಭಿನ್ನ ಮತ್ತು ಮೆಸೆಜ್ ಕೊಡಲಿರುವ ಚಿತ್ರವಾಗಿದೆ. ಇದರಲ್ಲಿ ಮನೋರಂಜನೆಯ ಜೊತೆ ಹಲವು ಅಂಶಗಳು ಕೂಡ ಎಲ್ಲರ ಗಮನವನ್ನು ಸೆಳೆಯುತ್ತದೆ. ಈ ಚಿತ್ರದಲ್ಲಿ ಬಹಳಷ್ಟು ಹಿರಿಯ ಕಲಾವಿದರು ಅಭಿನಯಿಸಿದ್ದಾರೆ ಅದೇ ರೀತಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ತರುಣ್ , ಛಾಯಾಗ್ರಾಹಕ ಸುಧಾಕರ್ ರವರ ಶ್ರಮ ಅದ್ಭುತವಾಗಿ ಮೂಡಿ ಬಂದಿದೆ.

ಒಟ್ಟಾರೆ ಈ ಚಿತ್ರ ಮಾಡಿದ್ದು ನನಗೆ ತೃಪ್ತಿ ತಂದಿದೆ ಮತ್ತು ನೆನಪಾಗಿ ಉಳಿಯಲಿದೆ. ನಿರ್ಮಾಪಕರು ಚಿತ್ರಕ್ಕೆ ಬೇಕಾದ ಎಲ್ಲಾ ಸವಲತ್ತುಗಳನ್ನು ಕೊಟ್ಟಿದ್ದಾರೆ, ಮುಖ್ಯವಾಗಿ ರೈತರನ್ನು ಬೇಸ್ ಮಾಡಿಕೊಂಡು ಮಾಡಿದ ಚಿತ್ರ. ಕಾಟೇರ- ಗ್ರಾಮೀಣ ಬದುಕಿನ ಕಥೆ ಹೇಳುತ್ತದೆ. ಅದು ಇಂದಿನ ಕಾಲಘಟ್ಟಕ್ಕೆ ಪ್ರಸ್ತುತ. ಬಹು ಮುಖ್ಯವಾಗಿ ವರ್ಷದ ಕೊನೆಯಲ್ಲಿ ಜನ ಮೆಚ್ಚುವ ಚಿತ್ರವಂತೂ ಇದಾಗಲಿದೆ ಎಂದರು. ಇನ್ನು ಈ ಒಂದು ಕಾರ್ಯಕ್ರಮದಲ್ಲಿ ದೊಡ್ಡ ತಾರಾ ಬಳಗವಾಗಿ ಹಿರಿಯ ಹಾಗೂ ಕಿರಿಯ ಕಲಾವಿದರಾದ ಪದ್ಮಾವಾಸಂತಿ, ಶ್ರತಿ, ಅವಿನಾಶ್, ಕುಮಾರ್ ಗೋವಿಂದ್, ಬಿರಾದಾರ್, ಚೇತನ್ ತಮ್ಮ ತಮ್ಮ ಅನುಭವವನ್ನು ಹಂಚಿಕೊಂಡರು.

error: Content is protected !!