Cini NewsSandalwood

“ಜೂನಿ” ಕ್ಯಾರೆಕ್ಟರ್ ಟೀಸರ್ ಅನಾವರಣ…ಚೇಫ್ ಆದ ಪೃಥ್ವಿ ಅಂಬಾರ್

ಸ್ಯಾಂಡವುಲ್‌ನಲ್ಲಿ ದಿಯಾ ಅನ್ನುವ ಸಿನಿಮಾ ಬಂದಿತ್ತು. ಈ ಚಿತ್ರದ ನಾಯಕ ಪೃಥ್ವಿ ಅಂಬಾರ್ ಅದ್ಭುತವಾಗಿಯೇ ಅಭಿನಯಿಸಿದ್ದರು. ಇದೀಗ ಅಂತಹದ್ದೆ ಪ್ರೇಮಕಥೆಯ ಹೊತ್ತುಬಂದಿರುವ ಜೂನಿ ಕ್ಯಾರೆಕ್ಟರ್ ಟೀಸರ್ ಅನಾವರಣಗೊಂಡಿದೆ. ಜೂನಿ ಕ್ಯಾರೆಕ್ಟರ್ ಟೀಸರ್ ದಿಯಾ ಸಿನಿಮಾ ಫ್ಲೇವರ್ ಕೊಡುತ್ತಿದೆ. ಚೇಫ್ ಅವತಾರದಲ್ಲಿ ಪೃಥ್ವಿ ಕಾಣಿಸಿಕೊಂಡಿದ್ದಾರೆ. ಸಖತ್ ಇಂಪ್ರೆಸಿವ್ ಆಗಿದೆ ಕ್ಯಾರೆಕ್ಟರ್ ಟೀಸರ್.

‘ಜನ್ನಿ’ ಎಂಬ ಕಿರುಚಿತ್ರ ನಿರ್ದೇಶಿಸಿದ್ದ ವೈಭವ್ ಮಹಾದೇವ್ ಜೂನಿ ಸಿನಿಮಾ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಪ್ರಾಗ್ ಫಿಲ್ಮ್ ಸ್ಕೂಲ್ ನಲ್ಲಿ ನಿರ್ದೇಶಕರ ಕೋರ್ಸ್ ಮುಗಿಸಿರುವ ಅವರೀಗ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ವಿಭಿನ್ನ ಟೈಟಲ್ ಜೂನಿ ಸಿನಿಮಾದಲ್ಲಿ ನಾಯಕಿ ರಿಷಿಕಾ ನಾಯಕ್ ನಟಿಸಿದ್ದಾರೆ.

‘ಜೂನಿ’ ರೋಮ್ಯಾಂಟಿಕ್ ಕಥಾಹಂದರದ ಸಿನಿಮಾ. ದಿಯಾ ಬಳಿಕ ಪೃಥ್ವಿ ಮತ್ತೊಮ್ಮೆ ಪ್ರೇಮಕಥೆಗೆ ಬಣ್ಣ ಹಚ್ಚಿದ್ದಾರೆ. ಯಾರ ಮೇಲೆ ಪ್ರೀತಿ ಹುಟ್ಟುತ್ತೋ ಅವರ ಮೇಲೆ ಪ್ರೀತಿ ಆಗುತ್ತಾ? ಎಂಬ ಕಥೆಯ ಎಳೆ ಇಟ್ಕೊಂಡು ಚಿತ್ರ ಹೆಣೆಯಲಾಗಿದೆ. ತ್ರಿಶೂಲ ಕ್ರಿಯೇಷನ್ ನಡಿ ಮೋಹನ್ ಕುಮಾರ್ ಎಸ್ ಹಣ ಹಾಕಿದ್ದು, ಶ್ರೇಯಸ್ ವೈ ಎಸ್ ಸಹ ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತಿದ್ದಾರೆ.

ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮುಗಿಸಿರುವ ‘ಜೂನಿ’ ಫೆಬ್ರವರಿ 9ಕ್ಕೆ ತೆರೆಗೆ ಬರ್ತಿದೆ. ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಶಾಂಕ್ ನಾರಾಯಣ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಅಜಿನ್ ಬಿ, ಜಿತಿನ್ ದಾಸ್ ಛಾಯಾಗ್ರಹಣ ಮಾಡಿದ್ದಾರೆ. ನವೀನ್ ಅವರ ಕಲಾ ನಿರ್ದೇಶನ ಈ ಸಿನಿಮಾಗಿದೆ

error: Content is protected !!