“ಲೈಫ್ ಟು ಡೇ” ಚಿತ್ರದ ವಿಶೇಷ ಹಾಡಿಗೆ ಜೋಗಿ ಪ್ರೇಮ್ಸ್ ದನಿ
“ಲೈಫ್ ಟು ಡೇ” ಚಿತ್ರ ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಮೂಡಿ ಬರ್ತಿರೋ ಮತ್ತೊಂದು ಟ್ರೆಂಡಿ ಸಬ್ಜೆಕ್ಟ್.. ಪಕ್ಕಾ ಲವ್ ಸಿನಿಮಾ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತಯಾರಾಗ್ತಿರೋ ಈ ಚಿತ್ರದ ತಮಿಳು ವರ್ಷಶ್ ಹಾಡಿಗೆ ಖ್ಯಾತ ಸಂಗೀತ ನಿರ್ದೇಶ ಜೀವಿ ಪ್ರಕಾಶ್ ಧನಿಯಾಗಿದ್ದ ಸುದ್ದಿ ನಿಮಗೆಲ್ಲಾ ತಿಳಿದೆ ಇದೆ. ಇದೀಗ ಅದೇ ಹಾಡಿನ ಕನ್ನಡ ಅವತರಣಿಕೆ
ಸಿಕ್ಕರೇ.. ಸಿಕ್ಕರೇ… ಒಳ್ಳೆ ಹುಡುಗ್ರು ಸಿಕ್ಕರೇ… ಹಾಡಿಗೆ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಡೈರೆಕ್ಚರ್ ಜೋಗಿ ಪ್ರೇಮ್ ದನಿಗೂಡಿಸಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜನೆ, ರಾಮ್ ನಾರಾಯಣ್ ಸಾಹಿತ್ಯವಿರೋ ಈ ಹಾಡನ್ನ ಪ್ರೇಮ್ಸ್ ಅನುಭವಿಸಿ ಹಾಡಿದ್ದಾರೆ. ಈ ಹಾಡು ಕೇಳಿದಾಗ್ಲೇ ಇದು ಸೂಪರ್ ಹಿಟ್ ಆಗುತ್ತೆ ಎಂದ ಪ್ರೇಮ್, ಪ್ರೀತಿಯಿಂದ ಬಂದು ಹೊಸಬರ ಈ ಹೊಸ ಪ್ರಯತ್ನಕ್ಕೆ ಬೆನ್ನುತಟ್ಟಿದ್ದಾರೆ.
ಇತ್ತೀಚೆಗೆ ಪ್ರೇಮ್ ಒಂದು ಹಾಡು ಹಾಡೋದಕ್ಕೆ 5ಲಕ್ಷ ತಗೋತಾರೆ ಅನ್ನೋ ವಿಷ್ಯ ಸುದ್ದಿಯಾಗಿತ್ತು..ಅದ್ರ ಬೆನ್ನಿಗೆ ಲೈಫ್ ಟುಡೇ ಚಿತ್ರಕ್ಕೆ ಹಾಡಿರೋ ಪ್ರೇಮ್, ಇದೇ ರೀತಿಯ ಪ್ರಶ್ನೆಯೊಂದಕ್ಕೆ ನಾನು 10ಲಕ್ಷ ಕೇಳ್ತೀನಿ.. ಮುಂಬೈಯವರಿಗೆ ಆದ್ರೆ ಕೊಡ್ತೀರಾ.. ಕನ್ನಡಿಗರಿಗೆ ಯಾಕೆ ಕೊಡಬಾರ್ದು ಅಂತ ಪ್ರಶ್ನೆ ಮುಂದಿಟ್ಟರು. ಜೊತೆಗೆ ನಾನು ಹಾಡೋ ಹಾಡಿನ ಸಂಭಾವನೆ ಟ್ರಸ್ಟ್ ಸೇರುತ್ತೆ. ಅಮ್ಮನ ಟ್ರಸ್ಟ್ ಮೂಲಕ ಅನೇಕ ಸಮಾಜಿಕ ಸೇವೆಗೆ ಬಳಕೆಯಾಗುತ್ತೆ ಎಂದರು.
ಶ್ರೀಧರ್ ವಿ ಸಂಭ್ರಮ್ ಪ್ರೇಮ್ ಸಾರ್ ಹಾಡೋದಕ್ಕೆ ಸಿಕ್ಕೋರೋದೇ ನಮ್ ಪುಣ್ಯ ನಾನು ಅವರ ಬಹುದೊಡ್ಡ ಅಭಿಮಾನಿ.. ಅವ್ರ ದನಿಯಲ್ಲಿರೋ ಮುಗ್ಧತೆ ಮತ್ತು ನೋವಿನ ಗಾಢತೆ. ಈಹಾಡಿಗೆ ಬೇಕಿತ್ತು ಅದು ಸಿಕ್ಕಿದೆ. ಖಂಡಿತ ಲೈಫ್ ಟುಡೇ ಆಲ್ಪಂ ದೊಡ್ಡ ಹಿಟ್ ಆಗುತ್ತೆ ಅನ್ನೋ ಭರವಸೆ ಇದೆ ಎಂದರು.
ಇನ್ನೂ ನಿರ್ದೇಶಕ ಕಾಂತ ಕನ್ನಲ್ಲಿ, ನಿರ್ಮಾಪಕ ಪ್ರದೀಪ್, ನಾಯಕ ಕಿರಣ್ ಆದಿತ್ಯ ಮಾತಾಡಿ, ಪ್ರೇಮ್ ರವರ ಪ್ರೋತ್ಸಾಹಕ್ಕೆ ಧನ್ಯವಾದ ಹೇಳಿದ್ರು.. ಹಾಗೇ ಈ ಸಿನಿಮಾ ಈ ಜನರೇಷನ್ ಮೆಚ್ಚುವಂತಹ ಕಂಟೆಂಟ್ ಮತ್ತು ಎಂಟ್ರಟೈನ್ಮೆಂಟ್ ನ ಒಳಗೊಂಡಿದೆ ಎಂದರು.ಲೈಫ್ ಟು ಡೇ ಚಿತ್ರದಲ್ಲಿ ಕಿರಣ್ ಆದಿತ್ಯರಿಗೆ ನಾಯಕಿಯಾಗಿ ಲೇಖಚಂದ್ರ ಕಾಣಿಸಿಕೊಂಡಿದ್ದಾರೆ. ರಥರ್ವ,ತಬಲನಾಣಿ, ಅಪೂರ್ವ , ಕಾಕ್ರೋಚ್ ಸುಧಿ ಮತ್ತು ಜಗ್ಗಪ್ಪ ತಾರಾಗಣದಲ್ಲಿದ್ದಾರೆ. ಗುರುಪ್ರಸಾದ್ ಛಾಯಾಗ್ರಹಣ ಚಿತ್ರಕ್ಕಿದೆ.
ಲೈಫ್ ಟು ಸಿನಿಮಾಗೆ ಪ್ರೇಮ್ ಹಾಡಿದ ಹಾಡಿನ ವಿಷ್ಯದೊಂದಿಗೆ ಪ್ರಚಾರಕ್ಕೆ ಚಾಲನೆ ಕೊಟ್ಟಿರೋ ಚಿತ್ರತಂಡ ಇಲ್ಲಿಂದ, ಸಿನಿಮಾ ಬಗೆಗಿನ ವಿಶೇಷ ಮಾಹಿತಿಗಳನ್ನ ಒಂದೊಂದಾಗಿ ಹಂಚಿಕೊಳ್ಳೋದ್ರ ಜೊತೆಗೆ ಬಿಡುಗಡೆಗೆ ಸಿದ್ದತೆ ಮಾಡಿಕೊಳ್ಳಲಿದೆಯಂತೆ.