Cini NewsSandalwood

ಯುವ ಪ್ರತಿಭೆಗಳ “ಜೈ ಗದಾ ಕೇಸರಿ” ಟೀಸರ್ ಮತ್ತು ಹಾಡು ಬಿಡುಗಡೆ.

ಬೆಳ್ಳಿ ಪರದೆಯಗೆ ಮತ್ತೊಂದು ಯುವ ತಂಡದ ಜೈ ಗದಾ ಕೇಸರಿ ಚಿತ್ರದ ಟೀಸರ್ ಮತ್ತು ಹಾಡುಗಳ ಬಿಡುಗಡೆ ಸಮಾರಂಭ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ಕರ್ನಾಟಕ ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಉಜ್ಜಲ್ ರಘು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಿ.ಬಿ.ಮೂವೀ ಕ್ರಿಯೇಶನ್ಸ್ ಅಡಿಯಲ್ಲಿ ಕೊಪ್ಪಳ ಮೂಲದ ಉದ್ಯಮಿ ಬಸವರಾಜ್ ಭಜಂತ್ರಿ ಕಲಾವಿದರನ್ನು ಉಳಿಸುವ ಸಲುವಾಗಿ ಹಾಗೂ ಕನ್ನಡ ನಾಡಿಗೆ ಹೆಮ್ಮೆ ತರಬೇಕೆಂಬ ಅಭಿಲಾಷೆಯಿಂದ ಬಂಡವಾಳ ಹೂಡಿದ್ದಾರೆ. ಯತೀಶ್‌ಕುಮಾರ್.ವಿ ಮತ್ತು ಮಂಜು ಹೊಸಪೇಟೆ ಜಂಟಿಯಾಗಿ ಸಿನಿಮಾಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ನಾಗಮೂರ್ತಿ ಮತ್ತು ಕುಮಾರ್ ಕೋ ಡೈರಕ್ಟರ್ ಆಗಿರುತ್ತಾರೆ. ತಿಪ್ಪೆಸ್ವಾಮಿ(ಗೌಳಿ) ಕಾರ್ಯಕಾರಿ ನಿರ್ಮಾಪಕರಾಗಿರುತ್ತಾರೆ.

ನಾಯಕರುಗಳಾಗಿ ರಾಜ್‌ಚರಣ್ ಬ್ರಹ್ಮಾವರ್ ಮತ್ತು ಈಶ್ವರನಾಯಕ. ಈ ಪೈಕಿ ಈಶ್ವರನಾಯಕ ಸಹ ನಿಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಜೀವಿತಾ ವಸಿಷ್ಠ ನಾಯಕಿ. ಕೋಮಲ್ ದೇವಕರ್ ಉಪನಾಯಕಿ. ಇವರೊಂದಿಗೆ ಹಿರಿಯ ಕಲಾವಿದರುಗಳಾದ ಅವಿನಾಶ್, ಹೊನ್ನವಳ್ಳಿ ಕೃಷ್ಣ, ಧರ್ಮ, ಅರವಿಂದರಾವ್, ಜಯರಾಮ್, ಪ್ರಶಾಂತ್ ಸಿದ್ದಿ, ಲಕ್ಷಣದಾಸ್, ವರುಣ್, ರಮೇಶ್(ಬಿಲ್ಲಾ) ಮುಂತಾದವರು ನಟಿಸಿದ್ದಾರೆ.

ಕಾರ್ತಿಕ್‌ವೆಂಕಟೇಶ್ ಮೂರು, ಪ್ರಸನ್ನ ಬೋಜಶೆಟ್ಟರ್ ಶೀರ್ಷಿಕೆ ಗೀತೆ ಹಾಗೂ ಜಾರ್ಜ್‌ಥಾಮಸ್ ಸ್ಯಾಮ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಶ್ಯಾಮ್ ಸಿಂಧನೂರು-ಎಸ್.ನಾಗರಾಜ್, ಸಂಕಲನ ಪೂಜಾ.ಎಸ್, ಸಾಹಸ ಸುಪ್ರೀಂಸುಬ್ಬು ಸೂರಿ-ರಾಮ್‌ದೇವ್ ಜಾನಿ-ವೈಲೆಂಟ್‌ವೇಲು-ಅಲ್ಟಿಮೇಟ್ ಶಿವು, ನೃತ್ಯ ಕಂಬಿರಾಜ್ ಅವರದಾಗಿದೆ. ಲಿಖಿತ್ ಫಿಲಂಸ್‌ನ ರಮೇಶ್ ಬಿಡುಗಡೆ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ಪುರಾಣದಲ್ಲಿ ರಾಮ ಮತ್ತು ಹನುಮಾನ್ ಬಗ್ಗೆ ಸಾಕಷ್ಟು ವಿಷಯಗಳು ಇರಲಿದೆ. ಅದೇ ರೀತಿ ಸಿನಿಮಾದಲ್ಲಿ ಆಂಜನೇಯನ ಗದೆಗೆ ಪ್ರಾಮುಖ್ಯತೆ ನೀಡಲಾಗಿ, ಇದರ ಸುತ್ತ ಸನ್ನಿವೇಶಗಳು ಸಾಗುತ್ತದೆ. ಊರಿನಲ್ಲಿ ದೇವಸ್ಥಾನದಲ್ಲಿರುವ ಗದೆಯ ಮೇಲೆ ಆಕ್ರಮಣ ಮಾಡಲು ದುರುಳರು ಬಂದಾಗ, ಅದನ್ನು ರಕ್ಷಣೆ ಮಾಡಲು ಇಬ್ಬರು ಹುಡುಗರು ಮುಂದಾಗುತ್ತಾರೆ. ಆ ನಂತರ ಯಾವ ರೀತಿಯ ಬೆಳವಣಿಗೆಗಳು ಆಗುತ್ತದೆ. ಅದೆಲ್ಲಾವನ್ನು ಎದುರಿಸಿ ಹೇಗೆ ಸಪಲರಾಗುತ್ತಾರೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ.

ಸಾರಾಗೋವಿಂದು ಮಾತನಾಡಿ ಸಿದ್ದತೆ ಮಾಡಿಕೊಂಡು ಬಾರದಿದ್ದರೆ ಚಿತ್ರ ತಡವಾಗುತ್ತದೆ. ಅನುಭವ ಪಡೆದುಕೊಂಡು ಬಂದರೆ ಇಂತಹ ಕಷ್ಟಗಳು ಬರುವುದಿಲ್ಲವೆಂಬುದು ಈಗಿನ ಪೀಳಿಗೆಯವರು ತಿಳಿದುಕೊಂಡರೆ ಉತ್ತಮ. ಈಶ್ವರನಾಯಕ ಅವರು ಮಾತನಾಡುವಾಗ ಭಾವುಕರಾದರು. ಅವರಿಗೆ ಎಲ್ಲಿ ಎಡವಿದ್ದೇನೆ. ಅದನ್ನು ಸರಿಪಡಿಸಿಕೊಂಡನೆಂಬ ಪಶ್ಚಾತ್ತಾಪ ಆಗಿದೆ. ಇದಕ್ಕೆ ನಿರ್ಮಾಪಕರು ಸಹಕಾರ ನೀಡಿದ್ದಾರೆ. ಇಬ್ಬರು ನಿರ್ದೇಶಕರು ಕೆಲಸ ಮಾಡಿದ್ದಾರೆ. ಹಿಂದೆ ದೊರೆ-ಭಗವಾನ್ ಎಂತಹ ಒಳ್ಳೆ ಚಿತ್ರಗಳನ್ನು ಕೊಟ್ಟಿದ್ದಾರೆ. ಅವುಗಳು ಇಂದಿಗೂ ಜೀವಂತವಾಗಿದೆ. ಅವರಂತೆ ನಿಮಗೂ ಶ್ರೇಯ ಸಿಗಲಿ. ಹಿಂದೂ ಸಂಸ್ಕ್ರತಿ ಎತ್ತಿ ಹಿಡಿಯುವಂತ ಟೈಟಲ್ ಚಿತ್ರಕ್ಕೆ ಭೂಷಣವಾಗಿದೆ. ತೆರೆಗೆ ಬರುವ ಮುಂಚೆ ಪ್ರಚಾರ ಮಾಡಿದಾಗ ಮಾತ್ರ ಚಿತ್ರವು ಜನರಿಗೆ ತಲುಪುತ್ತದೆಂದು ತಂಡಕ್ಕೆ ಕಿವಿಮಾತು ಹೇಳಿ ಗದಾ ಕೇಸರಿಗೆ ಶುಭ ಹಾರೈಸಿದರು.

error: Content is protected !!