ಯೋಗರಾಜ್ ಭಟ್ ನಿರ್ದೇಶನದಲ್ಲಿ ಹರ್ಷಿಕಾ ಪೂಣಚ್ಚ ಕಂಬ್ಯಾಕ್
ಅಮ್ರಿತಾ ವಿಜಯ್ ಟಾಟಾರಿಂದ ಅಚ್ಚರಿ ಉಡುಗೊರೆ…ಮಗಳ ಹುಟ್ದಬ್ಬದ ದಿನ ಅಮ್ಮನಿಗೆ ಸರ್ಪ್ರೈಸ್
ಯೋಗರಾಜ್ ಭಟ್ ನಿರ್ದೇಶನದಲ್ಲಿ ಹರ್ಷಿಕಾ ಪೂಣಚ್ಚ ಸಿನಿಮಾ ಅನೌನ್ಸ್. ಅಮ್ರಿತಾ ಸಿನಿ ಕ್ರಾಫ್ಟ್ ಬ್ಯಾನರ್ ನಡಿಯಲ್ಲಿ ವಿಜಯ್ ಟಾಟಾ ಹಾಗೂ ಅಮ್ರಿತಾ ಟಾಟಾ ನಿರ್ಮಾಣದಲ್ಲಿ ಸೆಟ್ಟೇರಲಿದೆ ಮಹಿಳಾ ಪ್ರಧಾನ ಚಿತ್ರ.
ಹರ್ಷಿಕಾ ಪೂಣಚ್ಚ ಭುವನ್ ಪೊನ್ನಣ್ಣ ಮಗಳು ತ್ರಿದೇವಿ ಪೊನ್ನಕ್ಕ ಹುಟ್ಟುಹಬ್ಬದ ಸಂಭ್ರಮದಲ್ಲಿ ಹರ್ಷಿಕಾರಿಗರ ಅಚ್ಚರಿ ಉಡುಗೊರೆ ನೀಡಿದ ಯೋಗರಾಜ್ ಭಟ್ ಮತ್ತು ವಿಜಯ್ ಟಾಟಾ.
ಈಗಾಗ್ಲೇ ಹರ್ಷಿಕಾ ಪತಿ ಭುವನ್ ರಿಗೆ ಹಲೋ 123 ಸಿನಿಮಾ ಅನೌನ್ಸ್ ಮಾಡಿರೋ ಯೋಗರಾಜ್ ಭಟ್ ಹಾಗೂ ವಿಜಯ್ ಟಾಟಾ ಇದೀಗ ಹರ್ಷಿಕಾ ಜೊತೆಗೊಂದು ಸಿನಿಮಾ ಘೋಷಿಸಿರೋದು ಕುತೂಹಲ ಹುಟ್ಟಿಸಿದೆ. ಅಂದ್ಹಾಗೆ ಚಿತ್ರದ ಇನ್ನಿತರ ವಿವರಗಳನ್ನ ಚಿತ್ರತಂಡ ಸದ್ಯದಲ್ಲೇ ಕೊಡಲಿದೆ.