Cini NewsTollywood

ನಾನಿ ನಟನೆಯ ‘ಹಾಯ್ ನಾನ್ನ’ ಸಿನಿಮಾದ ಟೀಸರ್ ರಿಲೀಸ್

ನ್ಯಾಚುರಲ್ ಸ್ಟಾರ್ ನಾನಿ ನಟಿಸುತ್ತಿರುವ 30ನೇ ಸಿನಿಮಾ ಹಾಯ್ ನಾನ್ನ.. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಈ ಚಿತ್ರದ ಹಾಡು ಭಾರೀ ಸದ್ದು ಮಾಡಿತ್ತು. ಇದೀಗ ಟೀಸರ್ ಅನಾವರಣಗೊಂಡಿದೆ. ತಂದೆ ಮತ್ತು ಮಗಳ ಬಾಂಧವ್ಯದ ಜೊತೆಗೆ ಪ್ರೀತಿ ಕಥಾಹಂದರವೇ ಟೀಸರ್ ನ ಹೈಲೆಟ್.. ತಾಯಿ ಇಲ್ಲದ ಮಗಳಿಗೆ ಅಪ್ಪನೇ ಸರ್ವಸ್ವ. ಅಪ್ಪನಿಗೆ ಮಗಳ ಜೀವ. ಈ ಚೆಂದದ ಕುಟುಂಬಕ್ಕೆ ಎಂಟ್ರಿಯಾಗುವ ನಾಯಕಿ. ಆ ನಂತರ ಏನಾಗುತ್ತದೆ ಅನ್ನೋದೇ ಟೀಸರ್ ಹೈಲೆಟ್ಸ್.

ನಾನಿ ಮತ್ತು ಮೃಣಾಲ್ ಠಾಕೂರ್ ಜೋಡಿಯಾಗಿ ನಟಿಸಿದ್ದಾರೆ‌. ಹಾಯ್ ನಾನ್ನ ಸಿನಿಮಾಗೆ ಯುವ ನಿರ್ದೇಶಕ ಶೌರ್ಯುವ್ ಆಕ್ಷನ್ ಕಟ್ ಹೇಳಿದ್ದು, ನಿರ್ದೇಶಕನಾಗಿ ಇದು ಇವರ ಮೊದಲ ಚಿತ್ರವಾಗಿದೆ. ಅಪ್ಪನಾಗಿ ನಾನಿ ಹಾಗೂ ಮಗಳಾಗಿ ಬೇಬಿ ಕಿಯಾರಾ ಖಾನ್ ನಟಿಸಿದ್ದಾರೆ.

ಮೋಹನ್ ಚೆರುಕುರಿ, ಮೂರ್ತಿ ಕಲಗಾರ, ಡಾ. ವಿಜೇಂದ್ರ ರೆಡ್ಡಿ ಅವರು ‘ವೈರ ಎಂಟರ್ಟೇನ್ಮೆಂಟ್’ ಬ್ಯಾನರ್ ಮೂಲಕ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಸಾನೂ ಜಾನ್ ವರ್ಗೀಸ್ ISC ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇರಲಿದೆ. ‘ಹೃದಯಂ’ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಅವರು ಸಂಗೀತ ನಿರ್ದೇಶನ ಮಾಡುತ್ತಿರುವುದು ವಿಶೇಷ. ಸಂಕಲನದ ಜವಾಬ್ದಾರಿಯನ್ನು ಪ್ರವೀಣ್ ಆಂಥೋನಿ ಅವರು ನಿಭಾಯಿಸುತ್ತಿದ್ದಾರೆ. ಡಿಸೆಂಬರ್ 7ಕ್ಕೆ ಪಂಚ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ

error: Content is protected !!