Uncategorized

ಗುರುನಂದನ್ ನಟನೆಯ ನೂತನ ಚಿತ್ರದ ಮುಹೂರ್ತಕ್ಕೆ ಅಶ್ವಿನಿ‌ ಪುನೀತ್ ರಾಜ್ ಕುಮಾರ್ ಚಾಲನೆ.

Spread the love

ರ್ಯಾಂಕ್ ಸ್ಟಾರ್ ಗುರುನಂದನ್ ಈಗ ಸ್ಟ್ಯಾಂಡಪ್ ಕಾಮಿಡಿಯನ್ ಮಂಡಿಮನೆ ಟಾಕೀಸ್ ಬ್ಯಾನರ್ ಮೂಲಕ ನಿರ್ಮಾಪಕನರ ಆದ ಗುರುನಂದನ್. ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಸೆಟ್ಟೇರಿದ Production 01 ಚಿತ್ರಕ್ಕೆ
ಅಶ್ವಿನಿ‌ ಪುನೀತ್ ರಾಜ್ ಕುಮಾರ್ ಕ್ಲ್ಯಾಪ್ ಮಾಡೋ ಮೂಲಕ ಸಿನಿಮಾಗೆ ಚಾಲನೆ ನೀಡಿದ್ರು .

ಸಿ.ಎಂ .ವಿಶೇಷ ಅಧಿಕಾರಿ ಶ್ರೀವೆಂಕಟೇಶ್ ಹಾಗೂ ಗೋಲ್ಡ್ ಪಿಂಚ್ ಹೋಟೇಲ್ ಉದ್ಯಮಿ ಪ್ರಕಾಶ್ ಶೆಟ್ಟಿಯವರಿಂದ ಶುಭ ಹಾರೈಕೆ. ಸುಮಂತ್ ಗೌಡ ಚೊಚ್ಚಲ‌ ನಿರ್ದೇಶನ ಚಿತ್ರಕ್ಕಿದ್ದು, ಭೀಮ ಕ್ಯಾಮೆರಾ ಮ್ಯಾನ್ ಶಿವಸೇನಾ ಫಸ್ಟ್ ರಾಂಕ್ ರಾಜು ಖ್ಯಾತಿಯ ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜಿಸ್ತಿದ್ದಾರೆ. ಶರತ್ ಚಕ್ರವರ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಗುರುನಂದನ್ ಜೊತೆಗೆ ನಾಯಕಿಯಾಗಿ ಹರಿಕಥೆ ಅಲ್ಲ ಗಿರಿಕಥೆ ಖ್ಯಾತಿಯ ತಪಸ್ವಿನಿ ಪೊಣ್ಣಚ್ಚ ನಾಯಕಿಯಾಗಿ ಅಭಿನಯಿಸ್ತಿದ್ದಾರೆ. ತಬಲ ನಾಣಿ, ಧರ್ಮಣ್ಣ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಪ್ರೊಡಕ್ಷನ್ ನಂ.1 ಚಿತ್ರದ ಟೈಟಲ್ ನ ಸದ್ಯದಲ್ಲೇ ಅನೌನ್ಸ್ ಮಾಡಲಿದ್ದು, ಮುಹೂರ್ತ ದಿಂದಲೇ ಚಿತ್ರೀಕರಣ ಶುರುಮಾಡಿದೆ ಚಿತ್ರತಂಡ.

Visited 1 times, 1 visit(s) today
error: Content is protected !!