Cini NewsSandalwood

ಮಾಸ್ , ಆಕ್ಷನ್ , ಥ್ರೀಲಿಂಗ್ ಧಮಾಕ ಘೋಸ್ಟ್ (ಚಿತ್ರ ವಿಮರ್ಶೆ-ರೇಟಿಂಗ್ : 4/5)

ರೇಟಿಂಗ್ : 4/5

ಚಿತ್ರ : ಘೋಸ್ಟ್
ನಿರ್ದೇಶಕ : ಶ್ರೀನಿ
ನಿರ್ಮಾಪಕ : ಸಂದೇಶ್. ಎನ್
ಸಂಗೀತ : ಅರ್ಜುನ್ ಜನ್ಯ
ಛಾಯಾಗ್ರಹಣ : ಮಹೇಂದ್ರ ಸಿಂಹ
ತಾರಾಗಣ : ಶಿವರಾಜ್ ಕುಮಾರ್, ಜಯರಾಮ್ , ಅನುಪಮ್ ಖೇರ್, ಪ್ರಶಾಂತ್ ನಾರಾಯಣ್ , ಸತ್ಯ ಪ್ರಕಾಶ್ , ಅರ್ಚನಾ ಜೋಯಿಸ್ , ದತ್ತಣ್ಣ ಹಾಗೂ ಮುಂತಾದವರು…

 

ಆಕ್ಷನ್ , ಮಾಸ್, ಗೋಲ್ಡ್ ಸ್ಕ್ಯಾಮ್ , ಪೊಲೀಸ್ ಇಂಟಲಿಜೆನ್ಸ್ ಹಾಗೂ ಡಾನ್ ಅಂಡ್ ಗ್ಯಾಂಗ್ ಆರ್ಭಟಗಳು , ಬಿಡುವಿಲ್ಲದಂತೆ ಹೊಡೆದಾಟ ಬುಲೆಟ್ ಗಳ ಸದ್ದು , ಸೆಂಟರ್ ಜೈಲನ್ನೇ ಆವರಿಸಿಕೊಂಡಿರುವ ಈ ಕಥೆಯಲ್ಲಿ ಹಲವು ಮುಖಗಳ ಕರಾಳ ಸತ್ಯಗಳನ್ನು ಬಿಚ್ಚಿಡುವ ರೋಚಕ ಎಳೆಯೊಂದಿಗೆ ಪ್ರೇಕ್ಷಕರ ಮುಂದೆ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಘೋಸ್ಟ್”. ಚಿತ್ರದ ಕಥಾಹಂದರ ತೆರೆದುಕೊಳ್ಳುವುದೇ ಒಂದು ಹಳೆಯ ಸೆಂಟ್ರಲ್ ಜೈಲನ್ನು ಖಾಸಗಿಕರಣ ಮಾಡುವ ಉದ್ದೇಶದೊಂದಿಗೆ ಹೋಂ ಮಿನಿಸ್ಟರ್ ಹಾಗೂ ಸೆಂಟ್ರಲ್ ಜೈಲ್ ನ ಹಿರಿಯ ಅಧಿಕಾರಿಗಳು ಕೈದಿಗಳ ಸಮ್ಮುಖದಲ್ಲಿ ಚಾಲನೆ ನೀಡುವ ಪ್ರಯತ್ನ ಮಾಡುತ್ತಾರೆ.

ಈ ಸಂದರ್ಭದಲ್ಲಿ ಗುಂಡಿನ ಸುರಿಮಳೆ ಸದ್ದು ಮಾಡುತ್ತದೆ. ಏನಾಗುತ್ತಿದೆ ಎನ್ನುವಷ್ಟರಲ್ಲಿ ಮಾಸ್ ಎಂಟ್ರಿ ಕೊಡುವ ಗ್ಯಾಂಗ್ ಸ್ಟಾರ್ (ಶಿವರಾಜ್ ಕುಮಾರ್) ಅಂಡ್ ಟೀಮ್. ಜೈಲಿನಲ್ಲಿರುವ ಕೈದಿಗಳನ್ನು ಒತ್ತೆಯಾಳಾಗಿರಿಸಿಕೊಂಡು ತಮಗೆ ಬೇಕಾದ ಕೆಲಸಗಳನ್ನು ಮಾಡಿಕೊಳ್ಳುತ್ತಿರುತ್ತಾರೆ. ಇಡೀ ಗ್ಯಾಂಗ್ ಸ್ಟಾರ್ ಹಾಗೂ ತಂಡವನ್ನು ಮಟ್ಟ ಹಾಕಲು ಸ್ಪೆಷಲ್ ಪೋಲಿಸ್ ಅಧಿಕಾರಿ ಚಂಗಪ್ಪ ಒಂದು ತಂಡವನ್ನೇ ರಚನೆ ಮಾಡಿ ತನ್ನ ಬುದ್ಧಿ , ಶಕ್ತಿಗೆ ಕೆಲಸ ಕೊಡುತ್ತಾ ಹರಸಾಹಸವನ್ನೇ ಮಾಡುತ್ತಾನೆ.

ಅದಕ್ಕೆ ಪ್ರತ್ಯುತ್ತರ ಸಿಗುತ್ತಲೇ ಹೋಗುತ್ತದೆ. ಇದರ ನಡುವೆ ಒಂದು ಕುಟುಂಬದ ನೋವು , ಚಿನ್ನದ ಸ್ಕ್ಯಾಮ್ , ಅಧಿಕಾರಿಗಳ ರಣತಂತ್ರ , ಗ್ಯಾಂಗ್ಸ ಗ್ಯಾಂಗ್ ಸ್ಟಾರ್ ನಾ ಸ್ಕೆಚ್ ಹೀಗೆ ಹಲವು ವಿಚಾರಗಳು ಫ್ಲಾಶ್ ಬ್ಯಾಕ್ ಘಟನೆಗಳಿಗೆ ಸಾಕ್ಷಿಯಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ.
ಅದು ಏನು… ಹೇಗೆ… ಯಾರಿಂದ… ಎಂಬುವುದನ್ನು ತಿಳಿಯಬೇಕಾದರೆ ಒಮ್ಮೆ ನೀವು “ಘೋಸ್ಟ್” ಚಿತ್ರವನ್ನ ನೋಡಬೇಕು.

ಇಡೀ ಚಿತ್ರದ ಕೇಂದ್ರ ಬಿಂದು ಶಿವರಾಜ್ ಕುಮಾರ್ , ಒಂದು ಜೈಲಿನ ಕೈದಿಗಳನ್ನ ಒತ್ತೆಯಾಳಾಗಿಸೋದೇ ವಿಶೇಷ ಕಾನ್ಸೆಪ್ಟ್. ಖದರ್ ಲುಕ್ , ಮಾಸ್ ಎಂಟ್ರಿ , ಖಡಕ್ ಡೈಲಾಗ್ ಪ್ರೇಕ್ಷಕರನ್ನ ಶಿಲ್ಲೆ ಹೊಡೆಯುವಂತೆ ಮಾಡಿದೆ. ‘Big Daddy Of All Masses’… ಎನ್ನುವ ಹಾಗೆ ಪರದೆಯ ಮೇಲೆ ಮಿಂಚಿರುವ ಶಿವಣ್ಣನ ಕಣ್ಣಿನ ಲುಕ್ ಎಲ್ಲರ ಗಮನವನ್ನು ಸೆಳೆಯುವಂತಿದೆ.

ಆದರೆ ಶಿವಣ್ಣನ ಯಂಗ್ ಲುಕ್ ಹೇಳಿಕೊಳ್ಳುವಷ್ಟು ಪರ್ಫೆಕ್ಟ್ ಅನ್ನಿಸುವುದಿಲ್ಲ. ಇನ್ನು ಈ ಚಿತ್ರದಲ್ಲಿ ಮಲಯಾಳಂ ನಟ ಜಯರಾಮ್ ಅವರು ಒಬ್ಬ ಪೊಲೀಸ್ ಅಧಿಕಾರಿಯಾಗಿ ಪಾತ್ರವನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ತಮ್ಮ ಹಾವ ಭಾವದ ಮೂಲಕ ಗಮನ ಸೆಳೆಯುತ್ತಾರೆ. ಅವರ ಡೈಲಾಗ್ ಡೆಲಿವರಿ ಸ್ಪಷ್ಟತೆ ಕಾಣುವುದಿಲ್ಲ.

ವಿಶೇಷ ಸಂದರ್ಭದಲ್ಲಿ ಬರುವ ಬಾಲಿವುಡ್ ನ ಖ್ಯಾತ ಕಲಾವಿದ ಅನುಪಮ್ ಖೇರ್ ಪಾತ್ರ ಇಡೀ ಚಿತ್ರದ ಮೇನ್ ಟ್ವಿಸ್ಟ್ ರೂಪ ಪಡೆಯುತ್ತದೆ. ಅವರ ನಟನ ಸಾಮರ್ಥ್ಯ ಅದ್ಭುತವಾಗಿದೆ. ಇನ್ನು ಟಿವಿ ರಿಪೋರ್ಟರ್ ಪಾತ್ರದಲ್ಲಿ ಅಭಿನಯಿಸಿರುವ ಅರ್ಚನಾ ಜೋಯಿಸ್ ಅಚ್ಚುಕಟ್ಟಾಗಿ ತಮಗೆ ಸಿಕ್ಕ ಅವಕಾಶವನ್ನ ನಿರ್ವಹಿಸಿದ್ದಾರೆ. ಉಳಿದಂತೆ ಬರುವ ಎಲ್ಲಾ ಪಾತ್ರಧಾರಿಗಳು ಕೂಡ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ.

ಇನ್ನು ಇಡೀ ಚಿತ್ರದ ಹೈಲೈಟ್ ಅಂದರೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಬ್ಯಾಗ್ರೌಂಡ್ ಸ್ಕೋರ್ ಹಾಗೂ ಹೀರೋ ಎಂಟ್ರಿ ಕ್ಷಣಗಳಲ್ಲಿ ಬರುವ ಬಿಟ್ಟಗಳು ಅದ್ಭುತವಾಗಿ ಮೂಡಿ ಬಂದಿದೆ. ಮತ್ತೊಂದು ಹೈಲೆಟ್ ಅಂದ್ರೆ ಚಿತ್ರದ ಕ್ಯಾಮೆರಾ ಕೈಚಳಕ ಮಹೇಂದ್ರ ಸಿಂಹ ಬಹುತೇಕ ಕತ್ತಲಲ್ಲೇ ಚಿತ್ತೀಕರಿಸಿದ್ದು , ಒಂದು ಇಂಗ್ಲಿಷ್ ಮೂವಿ ನೋಡಿದ ಅನುಭವವನ್ನು ಕೊಡುತ್ತದೆ.

ಇನ್ನು ಇಡೀ ತಂಡವನ್ನು ಕಟ್ಟಿಕೊಂಡು ಒಂದು ವಿಭಿನ್ನ ಬಗೆಯ ಮಾಸ್ , ಆಕ್ಷನ್ ಚಿತ್ರವನ್ನು ಹೀಗೂ ತೋರಿಸಬಹುದು ಎಂದು ಬಹಳಷ್ಟು ಶ್ರಮಪಟ್ಟು ತೆರೆಯ ಮೇಲೆ ತಂದಿದ್ದಾರೆ ನಿರ್ದೇಶಕ ಶ್ರೀನಿ. ಇನ್ನು ಸ್ಕ್ರೀನ್ ಪ್ಲೇ ಬಹಳ ವೇಗವಾಗಿ ಪ್ರತಿ ಹದಿನೈದು ನಿಮಿಷಕ್ಕೂ ಕುತೂಹಲವನ್ನ ಮೂಡಿಸುತ್ತಾ ಸಾಗುತ್ತದೆ. ಜೈಲಿನಲ್ಲಿ ಬಹುತೇಕ ಚಿತ್ರೀಕರಣವು ನೋಡೋದಕ್ಕೆ ಇದ್ದಲ್ಲೇ ಗಿರಕಿ ಹೊಡೆದಂತಿದೆ.

ಒಂದಷ್ಟು ತಾಂತ್ರಿಕ ವಿಚಾರವನ್ನು ಬಹಳ ಸೂಕ್ಷ್ಮವಾಗಿ ತೆರೆದಿಟ್ಟಿದ್ದಾರೆ. ಹಾಲಿವುಡ್ ಸಿನಿಮಾ ಸ್ಟೈಲ್ ಮೇಕಿಂಗ್ ನಲ್ಲಿ ಹೊರ ಬಂದಿರುವ ಈ ಘೋಸ್ಟ್ ಚಿತ್ರದ ಮುಂದುವರೆದ ಭಾಗಕ್ಕೂ ಲಿಂಕನ್ನು ಕೊಟ್ಟಿದೆ.

ಇಂತಹ ಒಂದು ಚಿತ್ರವನ್ನು ಒಬ್ಬ ಸ್ಟಾರ್ ನಟನನ್ನು ಇಟ್ಟುಕೊಂಡು ವಿಭಿನ್ನವಾಗಿ ಪ್ರೇಕ್ಷಕರ ಮುಂದೆ ತರಬೇಕೆನ್ನುವ ಆಸೆ ಹೊಂದಿರುವ ನಿರ್ಮಾಪಕ ಸಂದೇಶ ರವರ ಧೈರ್ಯವನ್ನ ಮೆಚ್ಚಲೇಬೇಕು. ಒಟ್ಟಾರೆ ಮಾಸ್ , ಕ್ಲಾಸ್ ಗೆ ಎಲ್ಲರಿಗೂ ಇಷ್ಟವಾಗುವಂತಹ ಒಂದು ಸರ್ಪ್ರೈಸಿಂಗ್ , ತ್ರಿಲಿಂಗ್ ಎಲಿಮೆಂಟ್ಸ್ ಇರುವ ಉತ್ತಮ ಚಿತ್ರವಾಗಿ “ಘೋಸ್ಟ್” ಪ್ರೇಕ್ಷಕರ ಮುಂದೆ ಬಂದಿದು, ಎಲ್ಲರೂ ಒಮ್ಮೆ ನೋಡುವಂತಿದೆ

error: Content is protected !!