Cini NewsSandalwood

ಒಟಿಟಿ ಎಂಟ್ರಿಗೆ ’ಗಾಮಿ’ ರೆಡಿ..ಏ.12ಕ್ಕೆ ZEE 5 ಲಗ್ಗೆ ಇಡ್ತಿದೆ ವಿಶ್ವಕ್ ಸೇನ್ ಸಿನಿಮಾ.

ತೆಲುಗು ಚಿತ್ರರಂಗದ ಭವಿಷ್ಯದ ನಾಯಕ ಮಾಸ್ ಕಾ ದಾಸ್ ವಿಶ್ವಕ್ ಸೇನ್ ನಟನೆಯ ಗಾಮಿ ಸಿನಿಮಾ ಒಟಿಟಿ ಎಂಟ್ರಿಗೆ ಸಿದ್ಧವಾಗಿದೆ. ಕಳೆದ ಮಾರ್ಚ್ 8ರಂದು ತೆರೆಗೆ ಬಂದಿದ್ದ ಚಿತ್ರವೀಗ ಇದೇ ತಿಂಗಳ 12ರಂದು ZEE 5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ.

ಗಾಮಿ ಸಿನಿಮಾಗೆ ವಿದ್ಯಾಧರ್ ಕಾಗಿತಾ ಆಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ಚೊಚ್ಚಲ ಪ್ರಯತ್ನ. ವಿಶ್ವಕ್ ಸೇನ್ ಗೆ ನಾಯಕಿಯಾಗಿ ಚಾಂದಿನಿ ಚೌದರಿ ನಟಿಸಿದ್ದಾರೆ. ಎಂಜಿ ಅಭಿನಯ, ಮೊಹಮ್ಮದ್ ಸಮದ್, ಹರಿಕಾ ಪೇಡಾಡ, ಶಾಂತಿ ರಾವ್, ಮಯಾಂಕ್ ಪರಾಕ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

ಅಡ್ವೆಂಚರ್ಸ್ ಎಪಿಕ್ ಡ್ರಾಮಾ ಕಥೆಯಾಧಾರಿತ ಸಿನಿಮಾಗೆ ವಿಶ್ವನಾಥ ರೆಡ್ಡಿ ಚೆಲುಮಲ್ಲ ಛಾಯಾಗ್ರಹಣ, ರಾಘವೇಂದ್ರ ತಿರುನ್ ಸಂಕಲನ, ನರೇಶ್ ಕುಮಾರನ್ ಸಂಗೀತ ಒದಗಿಸಿದ್ದಾರೆ. ಕಾರ್ತಿಕ್ ಶಬರೀಶ್ ಚಿತ್ರಕ್ಕೆ ಹಣ ಹಾಕಿದ್ದಾರೆ.

error: Content is protected !!