Cini NewsSandalwood

ನವೆಂಬರ್‌ 21 ರಂದು “ಫುಲ್ ಮೀಲ್ಸ್” ಬಡಿಸಲು ರೆಡಿ

“ಫ್ಯಾಮಿಲಿ ಪ್ಯಾಕ್”, “ಸಂಕಷ್ಟಕರ ಗಣಪತಿ” ಚಿತ್ರಗಳ ಮೂಲಕ ಕನ್ನಡಿಗರ ಮನ ಗೆದ್ದಿರುವ ಲಿಖಿತ ಶೆಟ್ಟಿ ನಿರ್ಮಾಣ ಹಾಗೂ ನಟನೆಯ “ಫುಲ್ ಮೀಲ್ಸ್” ಚಿತ್ರ ಈ ವಾರ ನವೆಂಬರ್ 21 ಕ್ಕೆ ತೆರೆಗೆ ಬರಲು ಸಿದ್ದಾವಾಗಿದೆ. ಖುಷಿ ರವಿ, ತೇಜಸ್ವಿನಿ ಶರ್ಮ ನಾಯಕಿಯರಾಗಿ ನಟಿಸಿರುವ ಈ ಚಿತ್ರವನ್ನು ಎನ್ ವಿನಾಯಕ ನಿರ್ದೇಶಿಸಿದ್ದಾರೆ. ಚಿತ್ರದ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.ಪತ್ರಿಕಾಗೋಷ್ಠಿಗೂ ಮುನ್ನ ಚಿತ್ರತಂಡದ ಸದಸ್ಯರು ಮಾಧ್ಯಮದ ಮಿತ್ರರಿಗೆ ತಮ್ಮ ಕೈಯಾರೆ ಬಾಳೆ ಎಲೆ ಊಟ ಬಡಿಸಿದ್ದು ವಿಶೇಷವಾಗಿತ್ತು. ಭೋಜನದ ನಂತರ ಪತ್ರಿಕಾಗೋಷ್ಠಿ ಆರಂಭವಾಯಿತು.

ಎನ್ ವಿನಾಯಕ ಅವರು ಕಥೆ ಹೇಳಿದಾಗ ನಾನು ಮೊದಲು ಸಂಗೀತ ನಿರ್ದೇಶಕ ಗುರುಕಿರಣ್ ಅವರ ಹತ್ತಿರ ಕಥೆ ಹೇಳಿ ಅವರು ಒಪ್ಪಿಕೊಂಡರೆ ನನಗೆ ಒಪ್ಪಿಗೆ ಆದ ಹಾಗೆ ಎಂದು ಹೇಳಿದೆ. ಗುರುಕಿರಣ್ ಅವರು ಕಥೆ ಮೆಚ್ಚಿಕೊಂಡರು. ಅವರೆ ಸಂಗೀತವನ್ನು ನೀಡಲು ಒಪ್ಪಿಕೊಂಡರು. ನಾನೇ ಈ ಚಿತ್ರದ ನಿರ್ಮಾಣಕ್ಕೆ ಮುಂದಾದೆ. ತೇಜಸ್ವಿನಿ ಶರ್ಮ ಹಾಗೂ ಖುಷಿ ರವಿ ನಾಯಕಿಯರಾಗಿ ಅಭಿನಯಿಸಿದ್ದಾರೆ‌. ವಿಜಯ್ ಚಂಡೂರ್, ಸೂರಜ್ ಲೋಕ್ರೆ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ರವಿಶಂಕರ್ ಗೌಡ, ಕೋಟೆ ಪ್ರಭಾಕರ್ ಹೀಗೆ ಅನೇಕ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ. ನಾನು ಈ ಫೋಟೋಗ್ರಾಫರ್ ಆಗಿ ಕಾಣಿಸಿಕೊಂಡಿದ್ದೇನೆ. ಹಾಗಾಗಿ ಫೋಟೋಗ್ರಾಫರ್ಸ್ ಮತ್ತು ಮೇಕಪ್ ಆರ್ಟಿಸ್ಟ್ ಗಳಿಗಾಗಿ ವಿಶೇಷ ಪ್ರದರ್ಶನ ಆಯೋಜಿಸುತ್ತಿದ್ದೇವೆ ಹಾಗೂ ಬಿಡುಗಡೆಯ ಹಿಂದಿನ ದಿನ ಪ್ರೇಕ್ಷಕರಿಗೆ ವಿಶೇಷ ಜಾಹೀರಾತು ಹಾಕಿಸುತ್ತಿದ್ದೇವೆ. ಅದರಲ್ಲಿ ಒಂದು ವಿಶೇಷತೆ ಖಂಡಿತ ಇರುತ್ತದೆ‌.‌ ನವೆಂಬರ್ 21 ನಮ್ಮ ಚಿತ್ರ ನಿಮ್ಮ ಮುಂದೆ ಬರಲಿದೆ ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಹಾಗೂ ನಾಯಕ ಲಿಖಿತ್ ಶೆಟ್ಟಿ.

ಇನ್ಸ್ಟಾಗ್ರಾಮ್ ನಲ್ಲಿ ಲಿಖಿತ್ ಶೆಟ್ಟಿ ಅವರ ಪರಿಚಯವಾಯಿತು. ಆನಂತರ ಕಥೆ ಕೇಳಿ ಮೆಚ್ಚಿಕೊಂಡರು. ತಾವೇ ಸಿನಿಮಾ ನಿರ್ಮಾಣ ಮಾಡುವಿದಾಗಿಯೂ ಹೇಳಿದರು. ಇದೊಂದು ರೊಮ್ಯಾಂಟಿಕ್ ಕಾಮಿಡಿ ಜಾನರ್ ನ ಚಿತ್ರ. ಲಿಖಿತ್ ಶೆಟ್ಟಿ ವೆಡ್ಡಿಂಗ್ ಫೋಟೋಗ್ರಾಫರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ‌. ಸುತ್ತ ಸುತ್ತುವ ಕಥಾ ಹಂದರವನ್ನು ಹೊಂದಿರುವ ರೊಮ್ಯಾಂಟಿಕ್ ಕಾಮಿಡಿ ಸಿನೆಮಾ..ಕಥೆ ಕೂಡ ಫೋಟೋಗ್ರಾಫರ್ ಸುತ್ತ ಸಾಗುತ್ತದೆ‌. ಅನೇಕ ಕಿರುಚಿತ್ರಗಳನ್ನು ನಿರ್ದೇಶಿಸಿದ್ದ ನನಗೆ ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ಕಥೆ, ಚಿತ್ರಕಥೆ ನಾನೇ ಬರೆದಿದ್ದೇನೆ. ಸಂಭಾಷಣೆ ಹರೀಶ್ ಅವರದು. ಇನ್ನೂ ನಮ್ಮ ಚಿತ್ರದ ಟ್ರೇಲರ್ ಅನ್ನು ಇನ್ಸ್ಟಾಗ್ರಾಮ್ ನಲ್ಲಿ ಬಿಡುಗಡೆ ಮಾಡಿದಾಗ ಪಿ‌.ಆರ್.ಕೆ ಸಂಸ್ಥೆಯ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಗೂ ಕಲಾವಿದರು ‌ಟ್ರೇಲರ್ ಅನ್ನು ಶೇರ್ ಮಾಡುವ ಮೂಲಕ ಸಹಾಯ ಮಾಡಿದ್ದಾರೆ. ಎಲ್ಲರಿಗೂ ಧನ್ಯವಾದ‌‌. ಇಡೀ ಚಿತ್ರತಂಡದ ಸಹಕಾರದಿಂದ ಒಂದೊಳ್ಳೆ ಸಿನಿಮಾ ನಿಮ್ಮ ಮುಂದೆ ಬರುತ್ತಿದೆ ಎಂದು ನಿರ್ದೇಶಕ ಎನ್ ವಿನಾಯಕ ಹೇಳಿದರು.

ನಾನು ಲಿಖಿತ್ ಶೆಟ್ಟಿ ಅವರನ್ನು ಸಹೋದರನಂತೆ ಭಾವಿಸಿದ್ದೇನೆ. ಅವರ ನಿರ್ಮಾಣ ಹಾಗೂ ನಟನೆಯ ಈ ಚಿತ್ರ ಭರ್ಜರಿ ಯಶಸ್ಸು ಕಾಣವುದರಲ್ಲಿ ಸಂದೇಹವಿಲ್ಲ‌. ನಾನು ಈ ಚಿತ್ರ ನೋಡಿದ್ದೇನೆ. ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಹಾಡುಗಳು ಸುಮಧುರವಾಗಿದೆ ಎಂದು ಸಂಗೀತ ನಿರ್ದೇಶಕ ಗುರುಕಿರಣ್ ತಿಳಿಸಿದರು. “ದಿಯಾ” ಚಿತ್ರದ ಪಾತ್ರಕ್ಕೂ ಈ ಪಾತ್ರಕ್ಕೂ ವಿರುದ್ದವಾಗಿದೆ. ಪೂಜಾ ನನ್ನ ಪಾತ್ರದ ಹೆಸರು ಎಂದರು ನಾಯಕಿ ಖುಷಿ ರವಿ.

ನನ್ನ ಪಾತ್ರ ಕೂಡ ಚೆನ್ನಾಗಿದೆ. “ಫುಲ್ ಮೀಲ್ಸ್” ತಂಡದ ಜೊತೆಗೆ ಕೆಲಸ ಮಾಡಿದ್ದು ಖಷುಯಾಗಿದೆ ಎಂದು ಮತ್ತೊಬ್ಬ ನಾಯಕಿ ತೇಜಸ್ವಿನಿ ಶರ್ಮ ತಿಳಿಸಿದರು. ನಟರಾದ ಸೂರಜ್ ಲೋಕ್ರೆ ಹಾಗೂ ವಿಜಯ್ ಚೆಂಡೂರ್ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು.

error: Content is protected !!